ಪ್ರತಿಭೆ – ಸಮಾಜಮುಖೀ ಮನೋಭಾವಗಳ ಸಮ್ಮಿಲನದ ಅನರ್ಘ್ಯ ರತ್ನ – ಅನರ್ಘ್ಯ ಟಿ.ಪಿ.

ಅಂಕುರ

 

ಚಿತ್ರಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ ಕ್ಷೇತ್ರ ಹೀಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ನಿಪುಣೆಯಾಗಿರುವ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದ ಪ್ರಸ್ತುತ ಬೆಂಗಳೂರಿನ ಗಿರಿನಗರದ ನಿವಾಸಿಗಳಾದ ಟಿ. ಪರಮೇಶ್ವರ ಭಟ್ ಮತ್ತು ಕುಸುಮ ಪಿ. ಭಟ್ ಅವರ ಸುಪುತ್ರಿ ಅನರ್ಘ್ಯ ಟಿ. ಪಿ ಪ್ರಸ್ತುತ ಸಂತ ಜೋಸೆಫ್ ನಲ್ಲಿ ಎಂ.ಎಸ್.ಸಿ ಗಣಿತಶಾಸ್ತ್ರದ ವಿದ್ಯಾರ್ಥಿನಿ.

ಎಳೆಯ ವಯಸ್ಸಿನಿಂದಲೇ ಚಿತ್ರಕಲೆಯ ಕಡೆಗೆ ವಿಶೇಷ ಒಲವಿದ್ದರಿಂದ ಪ್ರಾಥಮಿಕ ಹಂತದ ಚಿತ್ರಕಲೆಯನ್ನು ರಶ್ಮಿ ಎಂಬವರಲ್ಲಿ, ತದನಂತರ ವರ್ಣಚಿತ್ರ, ಪರಿಸರ ಚಿತ್ರ ಹಾಗು ವ್ಯಕ್ತಿಚಿತ್ರಗಳ ಕುರಿತು ದಿ. ಭಾಸ್ಕರವರಲ್ಲಿ ಕಲಿತಿದ್ದಾರೆ.
ಇಸ್ಕಾನ್ ಹೇರಿಟೇಜ್ ಫೆಸ್ಟ್, ಅಖಿಲ ಹವ್ಯಕ ಮಹಾಸಭೆಯ ಪ್ರತಿಬಿಂಬ ಸ್ಪರ್ಧೆ, ಮತ್ತು ಇತರ ಅಂತರಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.

*ಬರವಣಿಗೆ ಕ್ಷೇತ್ರದಲ್ಲಿ ಅನರ್ಘ್ಯ*

ಸಾಹಿತ್ಯ ಮತ್ತು ಇತರೆ ಪುಸ್ತಕಗಳನ್ನು ಓದುವ ಅಭಿರುಚಿ ಹೊಂದಿದ್ದರಿಂದ ಬರವಣಿಗೆ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಳ್ಳಲ್ಲು ಸಾಧ್ಯವಾಯಿತು ಎನ್ನುತ್ತಾರೆ ಅನರ್ಘ್ಯ. ಐದನೇ ತರಗತಿಯಲ್ಲಿ ಓದುತ್ತಿರುವಾಗ ಇಂದಿರ ರಮಣ ಟ್ರಸ್ಟ್ ಅವರು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿ ನಂತರ ಕನ್ನಡ ಪ್ರಸ್ತುತ ಪ್ರಾಧಿಕಾರ ಬೆಂಗಳೂರು ಮತ್ತು ಸಂತ ಜೋಸೆಫರ್ ಕಾಲೇಜಿನ ಕನ್ನಡ ವಿಭಾಗ ಜಾಣ ಜಾಣೆಯರ ಬಳಗ ಆಯೋಜಿಸಿದ “ನನ್ನ ನೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡ ಇವರು ಕಣಿಪುರ ಯಕ್ಷಗಾನ ಪತ್ರಿಕೆಯಲ್ಲಿ ಇವರ ಎರಡು ಯಕ್ಷಗಾನ ವಿಮರ್ಶಾ ಲೇಖನಗಳು ಪ್ರಕಟಗೊಂಡಿದೆ.

*ಶೈಕ್ಷಣಿಕ ಕ್ಷೇತ್ರದಲ್ಲಿ ಅನರ್ಘ್ಯ*
ಸಂಸ್ಕೃತ ಭಾರತಿ ಕರ್ನಾಟಕ ಆಯೋಜಿಸಿದ ಸರಳ ಮತ್ತು ಸುಗಮ ಹಂತದ ಸಂಸ್ಕೃತ ಪರೀಕ್ಷೆಗಳಲ್ಲಿ ಹಾಗು .3 ನೇ ತರಗತಿಯಲ್ಲಿ All India school mathematics Teachers Asscociation -National matmetics olymapiad contest ಅಲ್ಲಿ 80% ಪಡೆದು ಉತ್ತಿರ್ಣರಾಗಿದ್ದಾರೆ.
ಎಸ್ಎಸ್ ಎಲ್ ಸಿ ಯಲ್ಲಿ icse syallabus 91% ಹಾಗು ದ್ವಿತಿಯ ಪಿಯುಸಿ ಯಲ್ಲಿ 95% ಪಡೆದ ಹೆಗ್ಗಳಿಕೆ ಇವರದ್ದು.
2013ರಲ್ಲಿ ಶಾಸ್ತ್ರೀ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯನ್ನು ಸಂಪೂರ್ಣಗೊಳಿಸಿದ್ದು ಕಳೆದ ಒಂಭತ್ತು ತಿಂಗಳಿಂದ ಶ್ರೀ ಪ್ರಸಾದ್ ಚೇರ್ಕಾಡಿಯವರಲ್ಲಿ ತೆಂಕುತಿಟ್ಟು ಭಾಗವತಿಕೆಯನ್ನು ಅಭ್ಯಾಸಿಸುತ್ತಿದ್ದಾರೆ.

*ಸಾಮಾಜಿಕ ಚಟುವಟಿಕೆಗಳ ಒಲವು*
ಬಿಡುವಿನ ಸಮಯದಲ್ಲಿಎಸ್ಎಸ್ಎಲ್ಸಿ ಮಕ್ಕಳಿಗೆ ಪಾಠವನ್ನು ಕಲಿಸಿಕೊಡುವುದರ ಮೂಲಕ ತಮ್ಮ ಜ್ಞಾನವನ್ನು ಹಂಚಿಕೊಳ್ಳು ತ್ತಿದ್ದಾರೆ. ಬೆಂಗಳೂರು ದಕ್ಷಿಣದ ಎಂಪಿ ತೇಜಸ್ವಿ ಸೂರ್ಯ ಅವರ Best-Bangalore South Education And social transformation ಕಾರ್ಯಕ್ರಮದ ಅಡಿಯಲ್ಲಿ ಸ್ವಯಂ ಸೇವಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಮಠದ ಶಾಸನತಂತ್ರ ವ್ಯವಸ್ಥೆಯಲ್ಲಿ ಸೇವಾಬಿಂದುವಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಎಮ್ ಎಸ್ ಸಿ ಯನ್ನು ಪೂರ್ಣಗಳಿಸಿ ಒಳ್ಳೆ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಬೇಕು ಜೊತೆಗೆ ಚಿತ್ರಕಲೆ, ಸಂಗೀತ, ಭಾಗವತಿಕೆ, ಹಾಗು ಸಾಹಿತ್ಯದಲ್ಲಿ ಮುಂದೆ ಬರಬೇಕು ಎಂಬ ಕನಸನ್ನು ಹೊತ್ತ ಅನರ್ಘ್ಯ ಅವರೆಲ್ಲ ಕನಸಗಳು ನನಸಾಗಲಿ ಎಂಬ ಶುಭಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *