ವಿಜ್ಞಾನಿಯಾಗುವ ಹೆಬ್ಬಯಕೆಯನ್ನು ಹೊಂದಿದ ಚೆಂಡೆ ಮದ್ದಳೆಯ ಮೋಡಿ ಮಾಡುವ ಕಲಾವಿದ !

ಅಂಕುರ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಶ್ರೀ ಕೃಷ್ಣ ಪ್ರಸಾದ್ ಕೆ ಮತ್ತು ಸವಿತಾ ವಿ ಎಮ್ ಅವರ ಸುಪುತ್ರನಾದ ಶ್ರೀಶ ನಾರಾಯಣ.ಕೆ ಈತ ಇನ್ನೂ ಎಂಟನೇ ತರಗತಿಯ ವಿದ್ಯಾರ್ಥಿ ಆದರೇ
ಈಗಾಗಲೇ
ಡಾ ||ಸತೀಶ್ ಪುಣಿಂಚತ್ತಾಯ ಅವರ ಯಕ್ಷಾಂತರಂಗ ಪೆರ್ಲ ಎಂಬ ಯಕ್ಷಗಾನ ತಂಡದ ಸಕ್ರಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು.. ಯಕ್ಷಗಾನವನ್ನು ವೀಕ್ಷಿಸಲು ಹೋಗುವಾಗ ಈತನನನ್ನು ಕರೆದುಕೊಂಡು ಹೋಗುತ್ತಿದ್ದೆ ಅಲ್ಲಿ ಶ್ರೀಶನಿಗೆ ತಾನು ಚಂಡೆ,ಮದ್ದಳೆ ಯನ್ನು ಕಲಿಯಬೇಕೆಂಬ ಹಂಬಲ ಉಂಟಾಯಿತು ಎನ್ನುತ್ತಾರೆ ಅವರ ತಂದೆ ಕೃಷ್ಣ ಪ್ರಸಾದ್.

ಇವರ ಚೆಂಡೆ ಮದ್ದಳೆಯ ಪ್ರಾರಂಭದ ಕಲಿಕ ಹೆಜ್ಜೆಯನ್ನು
2018ರಿಂದ ನಾಟ್ಯಗುರು ಶ್ರೀ ಸಬ್ಬಣ ಕೋಡಿ ರಾಮ ಭಟ್ ಅವರಿಂದ ಸ್ಥಾಪಿಸಲ್ಪಟ್ಟ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರ ಪೆರ್ಲ (ರಿ) ಇವರಲ್ಲಿ ಕಲಿತರು.
ಪ್ರಾರಂಭದ ಗುರುಗಳು ದಿ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ.ಮುಂದೆ ಗುರಿ ಇರಬೇಕೆಂದರೆ ಹಿಂದೆ ಗುರು ಇರಬೇಕೆಂಬ ಮಾತಿನಂತೆ ಸರಿಯಾದ ಮಾಹಿತಿ ,ಸಲಹೆ ನೀಡಿ ರಂಗದಲ್ಲಿ ಹಲವಾರು ಅವಕಾಶಗಳನ್ನು ಕಲ್ಪಿಸಿಕೊಡುತ್ತಾ ಬಂದವರು ಪೆರ್ಲ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕರಾದ ಯಕ್ಷಗಾನದ ಹಿರಿಯ ಭಾಗವತರಾದ ಡಾ.ಸತೀಶ್ ಪುಣಿಂಚತ್ತಾಯ ಇವರು.
ಈಗಾಗಲೇ ಹಲವಾರು ತಾಳಮದ್ದಳೆಗಳಲ್ಲಿ ಹಾಗೂ ಯಕ್ಷಗಾನ ಬಯಲಾಟಗಳಲ್ಲಿ ಚೆಂಡೆ-ಮದ್ದಳೆಗಳನ್ನು ನುಡಿಸಿ ಜನರ ಪ್ರಶಂಸೆಗಳನ್ನು ಗಳಿಸಿದ್ದಾರೆ.
ಕೊರೋನಾ ದ ಕಠಿಣ ಸಂದರ್ಭದಲ್ಲಿ ಯಕ್ಷ ಸೇವೆ ನಡೆಸುತ್ತಿರುವ ಮಾಣಿಲ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಲಿಯಲ್ಲಿ ಕಳೆದ ವರ್ಷ ಹಲವಾರು ಯಕ್ಷಗಾನಗಳಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ
ಶ್ರೀ ಸುಬ್ಬಣ ಕೋಡಿ ರಾಮ ಭಟ್ ಅವರ ನೇತೃತ್ವದ ಪಡ್ರೆ ಚಂದ್ರು ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಲವಾರು ಯಕ್ಷಗಾನ ದಲ್ಲಿ ಭಾಗವಹಿಸಿದ್ದಾರೆ.
ಪ್ರಸ್ತುತ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆ, ಪೆರ್ಲ ದಲ್ಲಿ ಎಂಟನೇ ತರಗತಿಯಲ್ಲಿ
ವ್ಯಾಸಂಗ ಮಾಡುತ್ತಿರುವ ಶ್ರೀಶ ಮುಂದೆ ವಿಜ್ಞಾನಿಯಾಗುವ ಆಸೆಯನ್ನು ಹಾಗು ಸಮಾನಾಂತರವಾಗಿ ಯಕ್ಷಗಾನದಲ್ಲಿ ಕೂಡಾ ಉನ್ನತ ಸಾಧನೆ ಮಾಡುವ ಇಚ್ಛೆ ಹೊಂದಿರುತ್ತಾರೆ.

 

Author Details


Srimukha

Leave a Reply

Your email address will not be published. Required fields are marked *