” ಬದುಕಿನ ಸುಭದ್ರ ನೆಲೆಗೆ ಶ್ರೀರಕ್ಷೆ ಗುರುಪೀಠ ” : ಸುವರ್ಣಿನಿ ಎನ್. ಎಸ್

ಮಾತೃತ್ವಮ್

 

 

” ಶ್ರೀಗುರುಗಳ ಮೇಲಿನ ಅಚಲ ನಂಬಿಕೆ ಬಾಳಿಗೆ ಭರವಸೆಯ ಬೆಳಕನ್ನು ನೀಡಿದೆ. ಶ್ರೀಮಠದ ಸೇವೆ, ಗೋಮಾತೆಯ ಸೇವೆಯಲ್ಲಿ ತೊಡಗಿಸುವುದರಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದು ನುಡಿದವರು ಉಪ್ಪಿನಂಗಡಿ ಮಂಡಲ ಪಂಜ ವಲಯದ ಸುವರ್ಣಿನಿ ಎನ್.ಎಸ್.

 

ದಿ. ಸದಾಶಿವ ಭಟ್ ನೇರೋಳು ಅವರ ಪತ್ನಿಯಾದ ಸುವರ್ಣಿನಿ ಪಂಜ ವಲಯದ ಪುತ್ಯ ಚಕ್ರಕೋಡಿ ‘ಚಿರಶ್ಯಾಮಲ’ ದ ನಾರಾಯಣ ಶಾಸ್ತ್ರಿ ,ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.

 

ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಶ್ರೀಮಠದ ಸೇವೆಯಲ್ಲಿ ನಿರತರಾದ ಇವರು ಸಮಾಜ ಸೇವೆಯಲ್ಲಿಯೂ ಆಸಕ್ತಿ ಹೊಂದಿದವರು. ಮಹಿಳಾ ಮಂಡಳಿಗಳಲ್ಲಿ ಮಹಿಳೆಯರ ಉನ್ನತಿಗಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ಸುವರ್ಣಿನಿ ರಾಜಕಾರಣದಲ್ಲೂ ಅನುಭವ ಪಡೆದವರು. ಎರಡು ಬಾರಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಇವರು ತಮ್ಮ ಅವಧಿಯಲ್ಲಿ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದವರು.

 

” ಶ್ರೀಗುರುಗಳ ಮೇಲಿನ ನಂಬಿಕೆಯೇ ಬದುಕಿನ ಭದ್ರನೆಲೆ.‌ ನನ್ನ ಜೀವನದಲ್ಲಿ ಅನೇಕ ಬಾರಿ ಈ ಅನುಭವ ಗಮನಕ್ಕೆ ಬಂದಿದೆ. ಹೊಸನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ಮೊದಲ ಬಾರಿ ಹೋದಾಗ ಉಂಟಾದ ಎರಡು ವಿಭಿನ್ನ ಅನುಭವಗಳು ನನ್ನನ್ನು ಶ್ರೀಗುರುಪೀಠದ ಮೇಲೆ ಅಚಲ ವಿಶ್ವಾಸ ಮೂಡುವಂತೆ ಮಾಡಿದೆ ” ಎನ್ನುವ ಸುವರ್ಣಿನಿ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಬಾಗಿನವನ್ನು ಪಡೆದವರು.

 

ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾದ ಇವರು ಎರಡು ವರ್ಷಗಳ ಗುರಿಯನ್ನು ಆದಷ್ಟು ಶೀಘ್ರವಾಗಿ ತಲುಪುವ ಭರವಸೆಯನ್ನು ಹೊಂದಿದ್ದಾರೆ.

 

” ಗೋಮಾತೆಯ ಒಡನಾಟದಲ್ಲಿ ಬೆಳೆದ ನನಗೆ ಗೋಸೇವೆ ಎಂದರೆ ತುಂಬಾ ಪ್ರೀತಿ. ಬೇರ್ಕಡವು ಈಶ್ವರಿ ಅಕ್ಕನ ಪ್ರೇರಣೆಯಿಂದ ಮಾಸದ ಮಾತೆಯಾದೆ ” ಎನ್ನುವ ಇವರಿಗೆ ಶ್ರೀಮಠದ ಸೇವೆ, ಗೋಸೇವೆಗಳಲ್ಲಿ ನಿರಂತರವಾಗಿ ಮುಂದುವರಿಯುವ ಅಭಿಲಾಷೆಯಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *