ಲಾಕ್‌ಡೌನ್ ಸಮಯ ಸದ್ಭಳಕೆ: ಮನೆಯಲ್ಲೇಯಕ್ಷಗಾನ ಮುಖವರ್ಣಿಕೆ ಬಿಡಿಸಿ ಹೆಜ್ಜೆ ಹಾಕುತ್ತಿದ್ದಾನೆ ೧೪ ರ ಪೋರ!

ಅಂಕುರ

ಕಳೆದ ೩-೪ ತಿಂಗಳುಗಳಿಂದ ಎಲ್ಲಿ ನೋಡಿದರೂಕೊರೊನಾದ್ದೇ ಸುದ್ದಿ. ಮನೆಯಿಂದ ಹೊರಬಂದರೂಅದೇ ಸುದ್ದಿ. ಸರ್ಕಾರದ ಜಾರಿಗೊಳಿಸಿದ್ದ ಲಾಕ್‌ಡೌನ್ ಬಹುತೇಕ ಸಡಿಲಿಕೆಆಗುತ್ತಾ ಬಂದರೂ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವಕುರಿತು ಸರ್ಕಾರ ಮೀನಾಮೇಷಎಣಿಸುತ್ತಿದೆ. ಆದರೆಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಪೋರತಾನೇ ಸ್ವತಃಯಕ್ಷಗಾನ ಮುಖವರ್ಣಿಕೆ ಬರೆದುಕೊಂಡು ಮನೆಯಲ್ಲೇಯಕ್ಷಗಾನ ಮಾಡುತ್ತಿದ್ದಾನೆ. ಈತನ ನೃತ್ಯಕ್ಕೆ ಇವನ ಪಾಲಕರೇ ಪ್ರೇಕ್ಷಕರು! ಅಷ್ಟೇಅಲ್ಲದೇಕ್ರಾಫ್ಟ್, ಪೇಂಟಿಂಗ್‌ಗಳನ್ನು ಮಾಡುತ್ತಾ ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾನೆ.

ಈತನ ಹೆಸರು ಸ್ವಸ್ತಿಕ ಶರ್ಮಾ. ಗಡಿನಾಡುಕಾಸರಗೋಡುಜಿಲ್ಲೆಯ ಮುಳ್ಳೇರಿಯಾದ ಪಳ್ಳತ್ತಡ್ಕದ ಕೇಶವ ಶರ್ಮಾ ಮತ್ತು ದಿವ್ಯಾದಂಪತಿಯ ಪುತ್ರನಾದಈತ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಕೆಲ ವರ್ಷಗಳ ಹಿಂದೆಈತನಗುರುರಾಕೇಶ್‌ರೈಅಡ್ಕಅವರ ನಿರ್ದೇಶನದಲ್ಲಿ ಮಂಗಳೂರಿನ ಸನಾತನಯಕ್ಷಾಲಯದ ಸದಸ್ಯರು ನಡೆಸಿದ ’ಬಣ್ಣಗಾರಿಕಾ ಸಂಕಲನ ವೀಡಿಯೋ’ ಶಿಬಿರದಲ್ಲಿ ಭಾಗವಹಿಸಿದ್ದ ಸ್ವಸ್ತಿಕ ಶರ್ಮಾ ಕಳೆದ ೮ ವರ್ಷಗಳಿಂದ ಯಕ್ಷಗಾನ ಮುಖವರ್ಣಿಕೆ ಬಿಡಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾನೆ. ಜೊತೆಗೆಕ್ರಾಫ್ಟ್, ಪೇಂಟಿಂಗ್‌ಕೂಡ ರೂಢಿಸಿಕೊಂಡಿದ್ದಾನೆ.

ಸಾಧನೆಗೆ ಸಂದ ಪ್ರಶಸ್ತಿಗಳು:
ಈತನ ಹವ್ಯಾಸ ಮತ್ತು ಸಾಧನೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪುರಸ್ಕರಿಸಿ ಪ್ರೋತ್ಸಾಹಿಸಿವೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣ-೪ ರಲ್ಲಿ ಪುರಸ್ಕಾರ
ಕನ್ನಡ ಕೈರಳಿ ಪತ್ರಿಕೆಯ ೧೦ನೇ ವಾರ್ಷಿಕೋತ್ಸವದಲ್ಲಿ ಪುರಸ್ಕಾರ
ಕರ್ನಾಟಕಜಾನಪದ ಪರಿಷತ್ತಿನ ಪುರಸ್ಕಾರ
ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪುರಸ್ಕಾರ
ತುಳುನಾಡ ಜೋಕ್ಲೇ ಪರ್ಬ- ೨೦೧೮ ರಲ್ಲಿ ’ತುಳುನಾಡ ಸಿರಿ ಅಭಿಮನ್ಯು’ ಬಿರುದು
ಹೀಗೆ ಹಲವಾರು ಪುರಸ್ಕಾರ ಮತ್ತು ಬಿರುದುಗಳು ಈತನಿಗೆ ಸಂದಿವೆ.

ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಈತ ’ಶ್ರೀಮುಖ’ದ ಜೊತೆ ಮಾತನಾಡುತ್ತಾ, ಭವಿಷ್ಯದಲ್ಲಿಕಲೆಯಲ್ಲಿಯಕ್ಷಗಾನಕಲಾವಿದ, ವೃತ್ತಿಯಲ್ಲಿಇಂಜಿನಿಯರ್, ಆಟದಲ್ಲಿಕ್ರಿಕೆಟಿಗ ಈ ಮೂರನ್ನೂಜೀವನದಲ್ಲಿ ಸಾಧಿಸಬೇಕೆಂದಿದ್ದೇನೆಎಂದು ಮನದಾಳವನ್ನು ಹಂಚಿಕೊಂಡಿದ್ದಾನೆ.

Leave a Reply

Your email address will not be published. Required fields are marked *