ನೃತ್ಯ‌ಪ್ರಕಾರಗಳಲ್ಲಿ ನಿರಂತರ ಸಾಧನೆಗೈಯ್ಯುತ್ತಿರುವ ಬೆಂಗಳೂರಿನ ಪ್ರಜ್ಞಾ ಪಿ. ಶರ್ಮ

ಅಂಕುರ

 

ಬೆಂಗಳೂರು ಜಿಲ್ಲೆಯ ರಾಜಮಲ್ಲೇಶ್ವರಂ ವಲಯದ ಪ್ರಸನ್ನಕುಮಾರ್ ಮತ್ತು ಪ್ರಸನ್ನಕುಮಾರಿ ಅವರ ಸುಪುತ್ರಿ ಪ್ರಜ್ಞಾ ಪಿ.ಶರ್ಮ. ಕೂಚಿಪುಡಿ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.
ಪ್ರಜ್ಞಾ ಪಿ.ಶರ್ಮ. ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯವನ್ನು ಎಳೆಯವಯಸ್ಸಿನಿಂದಲೇ ಅಂದರೆ ತನ್ನ ೯ ನೇ ವಯಸ್ಸಿನಿಂದಲೇ ಗುರುಗಳಾದ ವಿದುಷಿ ಅರ್ಚನಾ ಪುಣ್ಯೇಶ್ ರವರ ಬಳಿ ನಿರಂತರ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಸಾಧನೆಯ ಮೆಟ್ಟಿಲೇರುತ್ತಿದ್ದಾರೆ.
೨೦೧೯ರಲ್ಲಿ ಭರತನಾಟ್ಯ ಜೂನಿಯರ್ ೯೩% ಹಾಗೂ ಸೀನಿಯರ್ ೨೦೨೦ರಲ್ಲಿ ೮೩% , ೨೦೧೯ರಲ್ಲಿ ಕೂಚಿಪುಡಿ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಗಳಿಸಿದ ಬಾಲ ಪ್ರತಿಭೆ ಪ್ರಜ್ಞಾ ಪಿ.ಶರ್ಮ.
ಈ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಪರಮ ಪೂಜ್ಯ ಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ಪ್ರತಿಭಾ ಪುರಸ್ಕಾರ ಅನುಗ್ರಹವನ್ನು, ಪಡೆದುಕೊಂಡಿದ್ದಾರೆ.


ವಯಸ್ಸು ಇನ್ನು ಕೇವಲ ೧೬ ಆದರೆ ೧೦೦ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿ, ಅಲ್ಲಿ ನೆರೆದಿದಂತಹ ಗಣ್ಯರಿಂದ ಹಾಗೂ ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆದಿದ್ದಾರೆ.
೨೦೧೯ರಲ್ಲಿ ಕಿಶೋರ ಉತ್ಸವದಲ್ಲಿ interschool competition ಪ್ರಥಮ ಬಹುಮಾನ, ದೀಕ್ಷಾ invisible folk danceನಲ್ಲಿ ದ್ವಿತೀಯ ಬಹುಮಾನ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ತೃತೀಯ ಬಹುಮಾನ,ಗೀತಗೋವಿಂದ ಸಾಂಸ್ಕೃತಿಕ ಸಂಘ ಆಯೋಜಿಸಿದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಪ್ರಜ್ಞಾ.ಪಿ.ಶರ್ಮ world natya champion 2020 award , ಕೂಚಿಪುಡಿಯಲ್ಲಿ 1st runner up ಬಹುಮಾನವನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಪುಣ್ಯಕೋಟಿ,ನವರಸಕೃಷ್ಣ, ಕೃಷ್ಣಲೀಲಾವೃತ ಮೊದಲಾದ ನೃತ್ಯ ರೂಪಕಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ಹವ್ಯಕ ಮಹಿಳಾ ಸಮಾವೇಶ ೨೦೧೮ರಲ್ಲಿ ಕೂಚಿಪುಡಿ ಹಾಗೂ ಕರಗ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದಾರೆ.


ಬಾಲಭವನ ಸೊಸೈಟಿ,ಕಬ್ಬನ್ ಉದ್ಯಾನವನ ಬೆಂಗಳೂರು,ಬಾಲವೇದಿಕೆಯಲ್ಲಿ ಏಕವ್ಯಕ್ತಿ ಪ್ರದರ್ಶನ, ತೋಟಗಾರಿಕೆ ಇಲಾಖೆ ಉದ್ಯಾನದಲ್ಲಿ ಉದಯರಾಗ ಕಾರ್ಯಕ್ರಮದಲ್ಲಿ, ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ರಜತ ಮಹೋತ್ಸವದಲ ಹೀಗೆ ಅನೇಕ ಕಡೆಯಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ ಹೆಗ್ಗಳಿಕೆ ನಮ್ಮ ಪ್ರಜ್ಞಾ ಅವರದ್ದು.
ಪ್ರತೀ ವರ್ಷ ನಡೆಯುವ ಗಣೇಶೋತ್ಸವ, ನವರಾತ್ರಿ ಉತ್ಸವ, ಶಿವರಾತ್ರಿ, ರಾಮನವಮಿ ಹಾಗೂ ಇನ್ನೂ ಅನೇಕ ಸಂದರ್ಭಗಳಲ್ಲಿ ಗುರುಗಳೊಂದಿಗೆ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿದ ಖುಷಿ ಪ್ರಜ್ಞಾ ಅವರದ್ದು.
ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ನೃತ್ಯ ಶಾಲೆಗಳು ಏರ್ಪಡಿಸಿದ ಸಾಮಾಜಿಕ ಜಾಲತಾಣಗಳಾದ facebook,instagram live ನೃತ್ಯ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ.
ನೃತ್ಯ ಕ್ಷೇತ್ರದಲ್ಲಷ್ಟದೇ ಚಿತ್ರಕಲೆ, ಚೆಸ್, running race,. ಹೀಗೆ ಅನೇಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.
ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯ್ಯಬೇಕೆಂಬ ಮಹಾದಾಸೆಯನ್ನು ಹೊಂದಿದ್ದೇನೆ ಎಂದು ಹೇಳುತ್ತಾರೆ ಪ್ರಜ್ಞಾ.
ಪ್ರಸ್ತುತ ಬೆಂಗಳೂರಿನ ಶ್ರೀ ವಿದ್ಯಾಮಂದಿರ ಎಜುಕೇಷನ್ ಸೊಸೈಟಿ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಶರ್ಮ ಇನ್ನಷ್ಟು ಸಾಧನೆಯ ಮೆಟ್ಟಿಲೇರುವಂತಾಗಲಿ ಎಂಬ ಶುಭಹಾರೈಕೆ ಮತ್ತು ಮಹಾದಾಸೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *