ಮಾಲೂರು ಶ್ರೀ ರಾಘವೇಂದ್ರ ಗೋ ಆಶ್ರಮದ ಜನವರಿಯಲ್ಲಿ ಮಳೆಯ ಸಮಯದಲ್ಲಿ ಗೋಶಾಲೆಯ ಗೋಡೆಯೊಂದು ಕುಸಿದು ಗೋವುಗಳಿಗೆ ಛಾವಣಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ದಾನಿಗಳ ಸಹಾಯದಿಂದ ಕರೊನಾ ಸಂಕಷ್ಟದ ನಡುವೆಯೂ ಕಾಮಗಾರಿಗಳು ಭರದಿಂದ ಸಾಗುತ್ತಿದೆ.
ಹಳೆ ಎರಡು ಗೋಶಾಲೆಗಳ ರಿಪೇರಿ ಹಾಗೂ ಹೊಸ ಎರಡು ಗೋಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನೀರಿನ ತೀವ್ರ ಅಭಾವ ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ಹೊಸ ಬೋರ್ ವೆಲ್ ನಿರ್ಮಾಣದ ಕಾರ್ಯ ಯಶಸ್ವಿಯಾಗಿ ನಡೆದಿದೆ.
ಗೋಆಶ್ರಮದ ಅಭಿಮಾನಿ ಗೋಪ್ರೇಮಿಗಳು ಸದಾ ಸಹಕಾರವನ್ನು ನೀಡುತ್ತಿದ್ದು, ಮುಂದಿನ ಕೆಲಸಕಾರ್ಯಗಳಿಗೆ ಹಾಗೂ ಗೋವಿನ ಮೇವಿಗಾಗಿ ಇನ್ನೂ ಹೆಚ್ಚಿನ ಸಹಕಾರವನ್ನು ನೀಡಬೇಕಾಗಿ ಕೋರುತ್ತೇವೆ. ಹೆಚ್ಚಿನ ಮಾಹಿತಿಗೆ 8197958466 ಸಂಪರ್ಕಿಸಬಹುದಾಗಿದೆ.