ಯಕ್ಷಗಾನ, ಭರತನಾಟ್ಯ, ಸಂಗೀತ,ಓದು ಒಂದಾ ಎರಡಾ ಹೆಚ್ಚು ಕಡಿಮೆ ಎಲ್ಲಾ ಪ್ರತಿಭೆಗಳನ್ನು ತನ್ನದಾಗಿಸಿಕೊಂಡ ಬಹುಮುಖ ಪ್ರತಿಭೆ ದೇವಿಕಾಳ ಪರಿಚಯ ಇದೋ ನಿಮ್ಮ ಮುಂದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪದ ಕುರಿಯಾಜೆ ಉದಯಶಂಕರ್ ಭಟ್ ಮತ್ತು ವಸಂತ ಲಕ್ಷ್ಮಿ ಯವರ ಸುಪುತ್ರಿ ದೇವಿಕಾ ಕುರಿಯಾಜೆ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ೨೦೧೮-೧೯ನೇ ಸಾಲಿನ ಇಂಗ್ಲೀಷ್ ಕಿರುನಾಟಕದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ. ಇವರು ಹತ್ತನೇ ತರಗತಿ ಯಲ್ಲಿ ೨೦೧೯-೨೦ನೇ ಸಾಲಿನ ಜಿಲ್ಲಾಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಭರತನಾಟ್ಯ ಮತ್ತು ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಹಾಗೇ NCC ಕ್ಯಾಂಪ್ ನಲ್ಲಿ ಭಾಗವಹಿಸಿದ್ದಾರೆ.
ಜಾಂಬವತಿ ಕಲ್ಯಾಣದಲ್ಲಿ ಸತ್ರಾಜಿತ,ಜಾಂಬವ,ಜಾಂಬವತಿ, ರಾಮಾಂಜನೇಯ ಪ್ರಸಂಗದಲ್ಲಿ ಸೀತೆ, ಕೃಷ್ಣಲೀಲೆ,ಕಂಸವಧೆಯಲ್ಲಿ ಮಾಯಾ ಪೂತನಿ ಹಾಗೂ ಕಂಸ. ಶಶಿಪ್ರಭೆಯ ಶಶಿಪ್ರಭೆ,ಲವ-ಕುಶ,ರಾಮ ಮುಂತಾದ ಯಕ್ಷಗಾನದಲ್ಲಿ ಪ್ರದರ್ಶನವನ್ನು ನೀಡಿದ್ದಾರೆ ಹಾಗೂ ಆಂಗ್ಲ ಭಾಷೆಯ ಯಕ್ಷಗಾನ, ತಾಳಮದ್ದಳೆಯಲ್ಲಿ ಲಕ್ಷ್ಮೀಯ ಪಾತ್ರವನ್ನು ನಿರ್ವಹಿಸಿದ್ದಾರೆ. ಒಂದು ವರ್ಷದಿಂದ ಚೆಂಡೆ-ಮದ್ದಳೆಯನ್ನು ಅಭ್ಯಸಿಸುತ್ತಿದ್ದಾರೆ.
ಓದಿನಲ್ಲೂ ಮುಂದೆ ಇರುವ ದೇವಿಕಾ ೨೦೧೯-೨೦ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 90.24%(564) ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜ್ ನಲ್ಲಿ ಪ್ರಥಮ ಪಿ. ಯು. ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂಬ ಶುಭಹಾರೈಕೆ ನಮ್ಮದು…