ಚದುರಂಗ ಚತುರೆ ಚಿತ್ಕಲ ವಿ ಭಟ್ಟ

ಅಂಕುರ

 

ದ್ವಿತೀಯ ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 588 ಅಂಕ ಪಡೆದು ರಾಜ್ಯ ಕ್ಕೆ 9 ನೇ ಸ್ಥಾನ ಹಾಗು ಎಸ್. ಎಸ್ ಎಲ್ ಸಿ ಯಲ್ಲಿ 93% ಪಡೆದ ಕುಮಾರಿ ಚಿತ್ಕಲ ವಿ. ಭಟ್ಟ ಆಟಪಾಠಗಳೆರಡರಲ್ಲೂ ಸೈ ಎನಿಸಿಕೊಂಡ ಸಾಧಕಿ.
ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿ ಜಿ ವೆಂಕಟೇಶ್ ಮತ್ತು ಛಾಯಾ ಅವರ ಸುಪುತ್ರಿ ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು ಉಡುಪಿ ಯಲ್ಲಿ ಪ್ರಥಮ ಬಿಕಾಮ್ ವ್ಯಾಸಂಗ ಮಾಡುತ್ತಿದ್ದಾರೆ.

ತನ್ನ ಹನ್ನೆರಡನೇ ವಯಸ್ಸಿಗೆ ಚದುರಂಗ ಆಟಕ್ಕೆ ಪಾದಾರ್ಪಣ ಮಾಡಿದ ಚಿತ್ಕಲ ಹಿಮ್ಮುಖರಾಗದೆ ಮುನ್ನುಡೆಯುತ್ತಿರುವುದು ಸಂತಸದ ವಿಷಯ.
ಮೊದಲು 2011 ರಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗು 2012 ರಲ್ಲಿ ತಾಲೂಕು ಮಟ್ಟದಲ್ಲಿ 4 ನೇ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ಇವರು ನಂತರ ಸತತ 7 ವರ್ಷ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


2014 ನೇ ಇಸವಿಯಲ್ಲಿ ಚತುರ್ ಜಿಲ್ಲಾ ಮಟ್ಟದಲ್ಲಿ ದ್ವಿತಿಯ ಸ್ಥಾನ, ಲಯನ್ಸ್ ಕ್ಲಬ್ ಭದ್ರಾವತಿ ಜಿಲ್ಲಾ ಮಟ್ಟದಲ್ಲಿ ಆರನೇ ಸ್ಥಾನ ಪಡೆದು, ಸಾಗರ ತಾಲೂಕು ಚೆಸ್ ಅಸೋಸಿಯೇಷನ್ ರಾಜ್ಯ ಮಟ್ಟದಲ್ಲಿ ದ್ವಿತಿಯ ಸ್ಥಾನ ಹಾಗು ಕೋಣಂದೂರು ಮತ್ತು ನಲಂದ ಚೆಸ್ ಅಕಾಡೆಮಿ ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ ತೃತೀಯ ಮತ್ತು ಐದನೆ ಸ್ಥಾನ ಗಳಿಸಿದ್ದಾರೆ.
ನಂತರ 2015 ರಲ್ಲಿ ಭದ್ರಾವತಿ ತಾಲೂಕು ಅಸೋಸಿಯೇಷನ್, ನಲಂದ ಚೆಸ್ ಅಕಾಡೆಮಿ, ಶಿವಮೊಗ್ಗ, ಚಿತ್ರದುರ್ಗ ಡಿಸ್ಟ್ರೆಕ್ಟ್ ಅಸೋಸಿಯೇಷನ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ಐದನೇ ಸ್ಥಾನ, ಹತ್ತನೇ ಸ್ಥಾನ ಪಡೆದ ಚಿತ್ಕಲ ಶಿವಮೊಗ್ಗ ಡಿಸ್ಟ್ರಿಕ್ಟ್ ಅಸೋಸಿಯೇಶನ್ ಜಿಲ್ಲಾ ಮಟ್ಟದಲ್ಲಿ ಬೆಸ್ಟ್ ಫಿಮೆಲ್ ಎಂಬ ಮಾನ್ಯತೆ ದೊರಕಿದ ಹೆಗ್ಗಳಿಕೆ ಇವರದ್ದು.
ಮೈಸೂರು, ದಾವಣಗೆರೆ, ಹೊನ್ನಾವರ, ಬೆಂಗಳೂರು ಹೀಗೆ ಅನೇಕ ಕಡೆಯಲ್ಲಿ ಭಾಗವಹಿಸಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
CA ಕೋರ್ಸ್ ಮುಗಿಸಿ, ಸ್ವಂತ ಉದ್ಯಮವನ್ನು ಹಾಗೂ ಚಾರಿಟೇಬಲ್ ಟ್ರಸ್ಟ್ ನ್ನು ಪ್ರಾರಂಭಿಸಲು ಆಶಿಸುತ್ತೇನೆ ಎನ್ನುವ ಚಿತ್ಕಲರವರ ಕನಸು ನನಸಾಗಲಿ ಎಂಬ ಶುಭಾಶಯ ನಮ್ಮದು.

 

Leave a Reply

Your email address will not be published. Required fields are marked *