ಹರಿಕಥೆ. ಹಿಂದೂಧಾರ್ಮಿಕ ಪ್ರವಚನದಒಂದುರೂಪಎಂದು ಪರಿಗಣಿತವಾದ, ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತುತತ್ವಶಾಸ್ತ್ರ ಸೇರಿರುವಒಂದು ಸಂಯುಕ್ತ ಕಲೆ.
ಇಂತಹಒಂದುಅಪರೂಪದಕಲೆಯಲ್ಲಿತಮ್ಮದೇಆದ ವಿಶಿಷ್ಟ ಛಾಪು ಮೂಡಿಸಿ, ಗಮನ ಸೆಳೆದವರು ಶೃದ್ಧಾ ಭಟ್ ನಾಯರ್ಪಳ್ಳ.
ಮೂಲತಃಕಾಸರಗೋಡಿನ ನಾಯರ್ಪಳ್ಳದ ವೈದಿಕ, ಕೃಷಿಕ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಭಟ್ ದಂಪತಿಗಳ ಪುತ್ರಿ ಶೃದ್ಧಾ ಈ ಅಪರೂಪದ ಸಾಧಕಿ.
೮ನೆ ವಯಸ್ಸಿಗೇ ಹರಿಕಥೆಗೆ ಶರಣು:
ಪ್ರಸ್ತುತಕಾಸರಗೋಡಿನ ಸರ್ಕಾರಿಕಾಲೇಜಿನಲ್ಲಿಕನ್ನಡ ಎಂ.ಎ. ವ್ಯಾಸಂಗ ಮಾಡುತ್ತಿರುವ ಶೃದ್ಧಾ, ಮೂರನೇತರಗತಿಯಲ್ಲಿರುವಾಗಲೇ ಶಾಲೆಯ ವಾರ್ಷಿಕೋತ್ಸವದಲ್ಲಿಕಥಾಪ್ರಸಂಗ ಹಾಡುವ ಮೂಲಕ ಹರಿಕಥೆ ಹಾಡಲು ಪ್ರಾರಂಭಿಸಿದಳು.
ನಂತರದ ದಿನಗಳಲ್ಲಿ ಅಧ್ಯಾಪಕ ಶೇಖರ್ ಶೆಟ್ಟಿ ಮತ್ತು ಶಂ.ನಾ.ಅಡಿಗ ಕುಂಬಾಳೆ ಅವರಲ್ಲಿಅಧ್ಯಯನ ನಡೆಸಿದ್ದಾಳೆ.
ನೂರಾರುಕಡೆ ಪ್ರದರ್ಶನ:
ಈಗಾಗಲೇ ನೂರಾರುಕಡೆ ಹರಿಕಥೆ ಪ್ರದರ್ಶನ ನೀಡಿರುವ ಶೃದ್ಧಾ, ಬೆಂಗಳೂರಿನಲ್ಲಿ ನಡೆದಛಾತ್ರಚಾತುರ್ಮಾಸ್ಯ, ಭಾನಕುಳಿ ಮಠದಲ್ಲಿ ನಡೆದ ಶಂಕರ ಪಂಚಮಿ, ಬಜಕೂಡ್ಲುಗೋಶಾಲೆಯಲ್ಲೂ ಹರಿಕಥೆ ಪ್ರಸ್ತುತಪಡಿಸಿದ್ದಾಳೆ.
ಸಿಡಿ ಲೋಕಾರ್ಪಣೆ:
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಶ್ರೀರಾಘವೇಶ್ವರ ಶ್ರೀಗಳ ಛಾತ್ರಚಾತುರ್ಮಾಸ್ಯದಲ್ಲಿ ’ಭಕ್ತಪ್ರಹ್ಲಾದ’ ಮತ್ತು ಭಕ್ತಧ್ರುವ’ ಎನ್ನುವಎರಡು ಹರಿಕಥೆ ಸಿಡಿ ಲೋಕಾರ್ಪಣೆಗೊಂಡಿದೆ. ಹರಿಕಥೆ ಮತ್ತುಕಥಾ ಪ್ರಸಂಗದಜೊತೆಗೆಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂಅಭ್ಯಾಸ ಮಾಡುತ್ತಿದ್ದು, ವಿ. ಉಷಾಈಶ್ವರ ಭಟ್‌ಅವರಗರಡಿಯಲ್ಲಿ ಕಲಿಯುತ್ತಿದ್ದಾಳೆ.
ಸಾಧನೆಗೆ ಸಂದಿತು ಪ್ರಶಸ್ತಿ, ಗೌರವಗಳು:
ಹರಿಕಥಾಕಲಾವಿದೆ ಶೃದ್ಧಾ ಭಟ್ ನಾಯರ್ಪಳ್ಳ ಈಕೆಯ ಸಾಧನೆಗೆರಾಮಚಂದ್ರಾಪುರ ಮಠದಛಾತ್ರ ಪುರಸ್ಕಾರ ಸೇರಿದಂತೆ ವಿವಿಧ ಪುರಸ್ಕಾರ ಲಭಿಸಿದೆ. ಅಲ್ಲದೇ ಅಖಿಲ ಕರ್ನಾಟಕರಾಜ್ಯ ಮಟ್ಟದ ಗಮಕ ಸಮ್ಮೇಳನದ ಸರ್ವಾಧ್ಯಕ್ಷೆ, ಆಳ್ವಾಸ್ ವಿದ್ಯಾರ್ಥಿ ಸಿರಿ ಅಧ್ಯಕ್ಷೆ, ಮಕ್ಕಳ ಧ್ವನಿ ಕವಿಗೋಷ್ಠಿ ಮತ್ತು ಮಕ್ಕಳ ಧ್ವನಿ ಸಮ್ಮೇಳನದ ಸರ್ವಾಧ್ಯಕ್ಷೆಯಾದ ಹೆಗ್ಗಳಿಕೆಯೂ ಈಕೆಗಿದೆ.
“ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿಕೊಳ್ಳುವಲ್ಲಿ ಮಠಗಳು ಹೇಗೆ ಸಹಕಾರಿಯೋ ಹಾಗೆ ಹರಿಕಥೆಕೂಡ ಸಹಕಾರಿಎನ್ನುವುದರಲ್ಲಿ ಸಂಶಯವಿಲ್ಲ” ಎನ್ನುವ ಶೃದ್ಧಾ, ಮುಂದೆ ಹರಿಕಥೆಕಲಾವಿದೆಯಾಗಿ ಮುಂದುವರಿಯುವಜೊತೆಗೆಅಧ್ಯಾಪಕಿಯಾಗುವಗುರಿಇದೆತನ್ನಇಂಗಿತವನ್ನು ವ್ಯಕ್ತಪಡಿಸುತ್ತಾಳೆ.