ಬಹುಮುಖ ಪ್ರತಿಭೆ ಸಾನ್ವಿ ರಾವ್

ಅಂಕುರ

ಭರತನಾಟ್ಯ, ಸಂಗೀತ, ಚೆಸ್, ಟೇಬಲ್ ಟೆನ್ನಿಸ್, ಏಕಪಾತ್ರಾಭಿನಯ, ಭಾಷಣ, ಚಿತ್ರಕಲೆ, ಕೈಬರಹ, ದೇಶಭಕ್ತಿಗೀತೆ, ಜನಪದ ಗೀತೆ, ಛದ್ಮವೇಷ…. ಹೀಗೆ ಹತ್ತಾರು ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ ಹದಿನಾಲ್ಕರ ಹರೆಯದ ಪ್ರತಿಭೆ.
ಇವಳೇ ಹೊನ್ನಾವರದ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ ರಾವ್ ಬಿ.ಎಸ್. ಹಾಗೂ ವಿನುತಾ ಭಟ್ ದಂಪತಿಯ ಪುತ್ರಿ ಸಾನ್ವಿ ರಾವ್. ಹೊನ್ನಾವರದ ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನ ೯ನೇ ತರಗತಿ ವಿದ್ಯಾರ್ಥಿನಿಯಾದ ಈಕೆ, ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾಳೆ.

ಸಂಗೀತ ಸಾಧಕಿ:
ವಿ.ಸೌಮ್ಯ ಭಟ್ ಅವರ ಬಳಿ ಭರತನಾಟ್ಯ ಜೂನಿಯರ್ ಅಭ್ಯಾಸ ಮಾಡಿದ್ದು, ಸದ್ಯ ವಿ.ವಿನುತಾ ಹೆಗಡೆ ಯಲ್ಲಾಪುರ ಅವರ ಬಳಿ ಭರತನಾಟ್ಯ ಸೀನಿಯರ್ ಅಭ್ಯಾಸ ಮಾಡುತ್ತಿದ್ದು, ಈಗಾಗಲೇ ಜಿಲ್ಲೆಯ ನಾನಾ ಕಡೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾಳೆ. ಭರತನಾಟ್ಯದ ಜೊತೆಗೆ ಸಂಗೀತ ಕೂಡ ಕಲಿಯುತ್ತಿದ್ದು, ಹಿಂದೂಸ್ತಾನಿ ಸಂಗೀತವನ್ನು ಕೃಷ್ಣಕುಮಾರಿ ಹೊನ್ನಾವರ ಅವರ ಬಳಿ ಅಭ್ಯಾಸ ನಡೆಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಪ್ರಸ್ತುತ ವಿ.ಶಿವಾನಂದ ಭಟ್ ಹಡಿನಬಾಳ ಅವರಲ್ಲಿ ಹಿಂದೂಸ್ತಾನಿ ಮತ್ತು ವೀಣಾ ಕುಲಕರ್ಣಿ ಇವರಲ್ಲಿ ಕರ್ನಾಟಕ ಸಂಗೀತ ಕಲಿಯುತ್ತಿದ್ದು, ಸುಮಧುರ ಕಂಠದ ಮೂಲಕ ಗಾಯಕಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾಳೆ.


ಬರಹ ಸಹಾಯಕಿ:
ಸಾನ್ವಿ ೫ನೇ ತರಗತಿಯಿಂದ ವಿಕಲಚೇತನ ಅಣ್ಣ ಸಮರ್ಥನಿಗೆ ಪರೀಕ್ಷೆಗಳಲ್ಲಿ ಬರಹ ಸಹಾಯಕಳಾಗಿದ್ದು, ಪಿಯುಸಿಯಿಂದ ಬಿ.ಕಾಂ. ೧, ೨, ಹಾಗೂ ೩ನೇ ಸೆಮಿಸ್ಟರ್‌ನಲ್ಲಿ ಸಹಾಯಕ ಬರಹಗಾರ್ತಿಯಾಗಿ ಸರಾಸರಿ ೮೬% ಅಂಕ ಗಳಿಸುವಲ್ಲಿ ಭಾಗಿಯಾಗಿದ್ದಾಳೆ. ತಾನೂ ಸಹ ಓದಿನಲ್ಲಿ ಮುಂದಿದ್ದು, ೯೦% ಅಂಕ ದಾಖಲಿಸುತ್ತಿದ್ದಾಳೆ.
ಸಾನ್ವಿ ರಾವ್ ಮುಡಿಗೆ:
೩ನೇ ತರಗತಿಯಲ್ಲಿದಾಗ ರಾಷ್ಟ್ರಮಟ್ಟದ ಬ್ರಿಟಾನಿಯ ಕಾಂಕ್ವೆಸ್ಟ್ ಪರೀಕ್ಷೆಯಲ್ಲಿ ೮ನೇ ಸ್ಥಾನ.
೫ನೇ ತರಗತಿಯಲ್ಲಿದ್ದಾಗ ಆಲ್ ಇಂಡಿಯಾ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಶನ್ (All India Talent Search Examination) ನಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ.

ಪಿಸಿಆರ್‌ಎ (PCRA) ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ.
ಉತ್ತರಕನ್ನಡ ಜಿಲ್ಲಾ ಮತ್ತು ಹೊನ್ನಾವರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಲವಾರು ಬಹುಮಾನ.
ಕದಂಬ ಸಹೋದಯ ಸ್ಕೂಲ್ ನಡೆಸಿದ ಸಿಬಿಎಸ್‌ಸಿ ಶಾಲೆಗಳ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಹಲವಾರು ಬಹುಮಾನ.
ಶಿವರಾತ್ರಿ ಸಮಯದಲ್ಲಿ ನಡೆಯುವ ಶಿವತಾಂಡವ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ.
ರಾಮಕೃಷ್ಣ ಆಶ್ರಮ ಮೈಸೂರು ಇವರು ನಡೆಸಿದ ರಾಜ್ಯಮಟ್ಟದ ಶಾರದಾ ಜ್ಞಾನಸುಧಾ -೨೦೧೯ ರಸಪ್ರಶ್ನೆ ಸ್ಪರ್ಧೇಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ.
ಭರತನಾಟ್ಯದ ಸಾಧನೆಗಾಗಿ ಶಿರಸಿಯಲ್ಲಿ ‘ನಾಟ್ಯಭೈರವಿ ರಾಷ್ಟ್ರೀಯ ಪ್ರಶಸ್ತಿ….. ಇತ್ಯಾದಿ.

Author Details


Srimukha

Leave a Reply

Your email address will not be published. Required fields are marked *