” ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” : ಸುನಂದಾ ಉದಯಶಂಕರ ಹೆಗಡೆ

ಮಾತೃತ್ವಮ್

 

” ನಮ್ಮ ಸಮಾಜದ ಒಳಿತಿಗಾಗಿ, ಸಂಸ್ಕೃತಿಯ ಏಳಿಗೆಗಾಗಿ ಶ್ರೀಗುರುಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ ಮುಂದಿನ ಪೀಳಿಗೆಯ ಮೂಲಕ ಮತ್ತಷ್ಟು ಬೆಳಗುವಂತಾಗಲು ವಿ ವಿ ವಿ ಯಂತಹ ವಿದ್ಯಾಪೀಠದ ಪರಿಕಲ್ಪನೆ ನಮಗೆ ಅಭಿಮಾನವೆನಿಸುತ್ತಿದೆ. ಶ್ರೀಗುರುಗಳು ಯಾವೆಲ್ಲ ಯೋಜನೆಗಳನ್ನು ಎಲ್ಲೆಲ್ಲಿ ಹಮ್ಮಿಕೊಳ್ಳುತ್ತಾರೋ ಆ ಎಲ್ಲಾ ಕಡೆಗಳಿಗೂ ಯಥಾನುಶಕ್ತಿಯಾಗಿ ಸಹಕಾರ ನೀಡುತ್ತಿರುವ ನನಗೆ ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” ಎಂದವರು ಕುಮಟಾ ಮಂಡಲ ಹೆಗಡೆ ವಲಯದ ಸುನಂದಾ ಉದಯಶಂಕರ.

 

ಕುಮಟಾದ ಮೂರೂರಿನ ವೆಂಕಟರಮಣ ಹೆಗಡೆ, ಕಮಲಾ ಹೆಗಡೆಯವರ ಪುತ್ರಿಯಾದ ಸುನಂದಾ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಎರಡು ವರ್ಷಗಳ ಮೊತ್ತವನ್ನು ಸ್ವಯಂ ಭರಿಸಿ ಗುರಿ ತಲುಪಿದ ಇವರು ತಮ್ಮ ನಿವೃತ್ತ ಜೀವನವನ್ನು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡು ಬದುಕಿನಲ್ಲಿ ನೆಮ್ಮದಿ ಕಂಡುಕೊಂಡವರು.

 

” ನಮ್ಮ ವಲಯದ ಮಾತೃ ಪ್ರಧಾನೆಯ ಪ್ರೇರಣೆಯಿಂದ ಮಾಸದ ಮಾತೆಯಾದೆ. ಇದಕ್ಕೂ ಮೊದಲು ಹೊಸಾಡ ಗೋಶಾಲೆಗೆ ಪ್ರತಿ ವರ್ಷವೂ ಸಹಕಾರ ನೀಡುತ್ತಿದ್ದೆ. ಈಗಲೂ ಅದನ್ನು ಮುಂದುವರಿಸುತ್ತಿದ್ದೇನೆ. ಶ್ರೀಮಠದ ಸೇವೆಯಲ್ಲಿ ನೆಮ್ಮದಿ, ಶಾಂತಿ ಕಂಡುಕೊಂಡಿದ್ದೇನೆ. ಮನದ ನೋವು,ತಲ್ಲಣಗಳ ಪರಿಹಾರಕ್ಕೆ ಶ್ರೀಚರಣವೇ ಆಶ್ರಯ ನನಗೆ. ಈ ವರ್ಷದ ಗುರುಕುಲ ಚಾತುರ್ಮಾಸ್ಯದ ಸಂದರ್ಭದಲ್ಲಿ ಅನೇಕ ಬಾರಿ ಅಶೋಕೆಗೆ ತೆರಳಿ ಶ್ರೀಮಠದ ಸೇವೆಯಲ್ಲಿ ಕೈ ಜೋಡಿಸಿದ್ದೇನೆ. ಇದು ಮನಸ್ಸಿಗೆ ಅತ್ಯಂತ ಖುಷಿ ನೀಡಿದೆ. ಇನ್ನು ಮುಂದೆಯೂ ಶ್ರೀಮಠದ ಸೇವೆ, ಗೋಸೇವೆಯಲ್ಲಿ ತೊಡಗಿಸಿಕೊಳ್ಳಲು ಆರೋಗ್ಯ ಭಾಗ್ಯವನ್ನು ಶ್ರೀರಾಮ ದೇವರು ಸದಾ ಕರುಣಿಸಲಿ ಎಂಬುದೇ ನನ್ನ ಪ್ರಾರ್ಥನೆ ” ಎನ್ನುವ ಸುನಂದಾ ಅವರಿಗೆ ಇನ್ನಷ್ಟು ಕಾಲ ಶ್ರೀಮಠದ ಸೇವೆಗಳಿಗೆ ತನುಮನಧನದ ಸಹಕಾರ ನೀಡುವ ಹಂಬಲವಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *