” ಬದುಕಿನ ಪೂರ್ಣತೆ ಗುರುಸೇವೆಯಲ್ಲಿ ” : ಅಕ್ಷತಾ ನಿತೇಶ್ ಮೋಂತಿಮಾರು

ಮಾತೃತ್ವಮ್

 

” ಶ್ರೀಗುರುಗಳ ಕೃಪಾದೃಷ್ಟಿ ಎಂಬ ದಿವ್ಯಾನುಗ್ರಹ ದೊರೆತವರ ಬದುಕು ಪಾವನವಾಗುತ್ತದೆ. ಗುರುಸೇವೆಯಂಬ ಪುಣ್ಯ ದೊರಕಲು ಪೂರ್ವ ಜನ್ಮದ ಸುಕೃತ ಬೇಕು. ಬದುಕಿನಲ್ಲಿ ಪರಿಪೂರ್ಣತೆ ಎಂಬುದು ದೊರಕುವುದು ಶ್ರೀಗುರುಸೇವೆಯಿಂದ ಮಾತ್ರ, ಗೋಮಾತೆಯ ಸೇವೆ, ಶ್ರೀಗುರುಗಳ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಉನ್ನತಿ, ಯಶಸ್ಸು ಪೂರ್ಣರೂಪದಲ್ಲಿ ಸಿಗುತ್ತದೆ ” ಎಂದವರು ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯದ ನಿತೇಶ್ ಮೋಂತಿಮಾರು ಅವರ ಪತ್ನಿ ಅಕ್ಷತಾ ಪಿ

 

ಪೆರ್ವೊಡಿ ನಾರಾಯಣ ಭಟ್ ಸುಮಾ ಎನ್ ಭಟ್ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

 

” ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದ ಕಾರಣ ಶ್ರೀಗುರು ಸೇವೆಯ ಬಗ್ಗೆ ಅರಿವಿದೆ. ತಾಯ್ತಂದೆಯರ ಜೊತೆ ಶ್ರೀಮಠಕ್ಕೆ ಬರುತ್ತಿದ್ದ ನಾನು ಮದುವೆಯ ನಂತರವೂ ಇದನ್ನು ಮುಂದುವರಿಸಿದೆ. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಬದುಕಿನಲ್ಲಿ ಯಶಸ್ಸು ದೊರಕಿದೆ. ಶ್ರೀಗುರುಗಳ ಆಶೀರ್ವಚನದ ಪ್ರೇರಣೆಯಿಂದ ಮಾಸದ ಮಾತೆಯಾದೆ. ಮನೆಯವರ ಹಾಗೂ ಬಂಧುಗಳ ಸಹಕಾರದಿಂದ ಎರಡು ವರ್ಷಗಳ ಗುರಿ ತಲುಪಿದೆ. ಈಗಲೂ ಗೋಮಾತೆಯ ಸೇವೆಯನ್ನು ಮುಂದುವರಿಸುತ್ತಿದ್ದೇನೆ ” ಎನ್ನುವ ಅಕ್ಷತಾ ಶ್ರೀಗುರುಗಳ ನಿರ್ದೆಶಾನುಸಾರವಾಗಿ ದೊರಕಿದ ಸ್ತೋತ್ರಗಳನ್ನು ಪಾರಾಯಣ ಮಾಡುತ್ತಾರೆ. ಶ್ರೀಗುರುಗಳ ಆಶೀರ್ವಚನಗಳನ್ನೂ ಆಲಿಸುತ್ತಾರೆ.

 

ತಮ್ಮ ಇಬ್ಬರು ಹೆಣ್ಣುಮಕ್ಕಳಿಗೂ ಶ್ರೀಮಠದ, ಶ್ರೀಗುರುಗಳ ಮಹತ್ವವನ್ನು ಮನವರಿಕೆ ಮಾಡಿರುವ ಇವರು ಮಕ್ಕಳಲ್ಲಿ ಶ್ರೀಗುರುಗಳ ಬಗ್ಗೆ ಪೂಜ್ಯ ಭಾವನೆ ಮೂಡುವಂತೆ ಮಾಡಿದ್ದಾರೆ. ತಮ್ಮ ಎಲ್ಲಾ ಕಾರ್ಯಗಳಿಗೂ ಮನೆಯವರ ಸಂಪೂರ್ಣ ಬೆಂಬಲ ಇದೆ ಎನ್ನುವ ಇವರಿಗೆ ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂಬುದೇ ಅಭಿಲಾಷೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


ಪ್ರಸನ್ನ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *