ಗೋ ಸೇವೆಯಿಂದ ದೊರಕುವ ನೆಮ್ಮದಿ ಅನುಪಮ – ಶಾರದಾ ಶ್ಯಾಮಪ್ರಸಾದ್

ಮಾತೃತ್ವಮ್

 

ಗೋ ಸೇವೆಯಿಂದ, ಗೋ ಉತ್ಪನ್ನಗಳ ಬಳಕೆಯಿಂದ ನಾವು ಆರೋಗ್ಯಪೂರ್ಣ ಜೀವನವನ್ನು ಪಡೆಯಲು ಸಾಧ್ಯವಿದೆ. ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದವಳು ನಾನು. ಈ ಕಾರಣಕ್ಕಾಗಿ ಗೋಮಾತೆ ಎಂದರೆ ವಿಶೇಷ ಮಮತೆ. ಈ ನಗರದ ಜೀವನದಲ್ಲಿ ಗೋವುಗಳನ್ನು ಸಾಕಲು ಎಲ್ಲರಿಗೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೋಶಾಲೆಗಳಿಗೆ ಸಹಕಾರ ನೀಡುವ ಮೂಲಕ ಗೋಸೇವೆಯ ಪುಣ್ಯ ಪಡೆಯಲು ಸಾಧ್ಯವಿದೆ ” ಎನ್ನುವವರು ಕಾಸರಗೋಡು, ಏಳ್ಕಾನ ಮೂಲದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ, ಸರ್ವಜ್ಞ ವಲಯ ನಿವಾಸಿಗಳಾಗಿರುವ ಶಾರದಾ ಶ್ಯಾಮಪ್ರಸಾದ್

ಮೂಲತಃ ಕಾಸರಗೋಡು ವರ್ಮುಡಿಯ ಶ್ರೀಕೃಷ್ಣ ಭಟ್, ಶಂಕರಿ ದಂಪತಿಗಳ ಪುತ್ರಿಯಾದ ಶಾರದಾ, ಶ್ರೀಗುರುಗಳ ಮಾತೃತ್ವಮ್ ಯೋಜನೆ ಆರಂಭವಾದಂದಿನಿಂದಲೇ ಗೋಸೇವೆ ಮಾಡಲಾರಂಬಿಸಿದವರು. ಇಂದಿಗೂ ಅದನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ. ಈಗಾಗಲೇ ಆರು ಗೋವುಗಳ ಹೊಣೆಯನ್ನು ಹೊತ್ತು
‘ ಸುತಾರೆ ‘ಪದವಿಯನ್ನು ಪಡೆದ ಶಾರದಾ ಅವರ ಗೋಸೇವೆ ನಿತ್ಯ ನಿರಂತರ ಎಂಬುದು ಅವರ ಮಾತು

ಪತಿ ಡಾ. ಶ್ಯಾಮಪ್ರಸಾದ್ ಮಾಲೂರು ಗೋಶಾಲೆಯ ಅಧ್ಯಕ್ಷರಾಗಿದ್ದು ಮಾಲೂರು ಗೋಶಾಲೆಯ ಅಭಿವೃದ್ಧಿಗೆ ಆದ್ಯತೆ ಕೊಡುತ್ತಾ, ಆ ಮೂಲಕ ಗೋಸೇವೆಗೖಯುತ್ತಿದ್ದಾರೆ. ಶ್ರೀ ಸಂಸ್ಥಾನದವರು ಪೀಠವೇರಿದಂದಿನಿಂದ ಶ್ರೀಮಠದ ಸೇವೆಯಲ್ಲಿ ನಿರತರಾದ ಇವರು ಶ್ರೀಮಠದ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವವರು.

” ಬೆಂಗಳೂರು ನಗರದಲ್ಲಿ ಗೋವುಗಳನ್ನು ಸಾಕುವುದು ಕಷ್ಟ. ಹಾಗಾಗಿ ಅನೇಕ ಮಂದಿ ಮಾತೃತ್ವಮ್ ಯೋಜನೆಯ ಬಗ್ಗೆ ಹೇಳಿದಾಗ ತಕ್ಷಣವೇ ಸ್ಪಂದಿಸಿ ಈ ಯೋಜನೆಗೆ ಕೈಜೋಡಿಸಿದರು. ಮಾಸದಮಾತೆಯಾಗಿ ಸೇವೆ ಮಾಡಲಾರಂಬಿಸಿದಂದಿನಿಂದ ಸಹಕಾರ ಕೊಟ್ಟವರು ಇಂದಿಗೂ ಅದನ್ನು ಮುಂದುವರಿಸುತ್ತಿದ್ದಾರೆ. ಹಾಗಾಗಿಯೇ ನನಗೆ ಈ ಗುರಿ ತಲುಪಲು ಸಾಧ್ಯವಾಯಿತು ” ಎನ್ನುತ್ತಾರೆ ಶಾರದಾ.

” ಈ ಹಿಂದೆ ವಲಯದ ಮಾತೃ ಪ್ರಧಾನೆಯಾಗಿಯೂ, ಮುಷ್ಠಿ ಬಿಕ್ಷಾಪ್ರಧಾನೆಯಾಗಿಯೂ ಸೇವೆ ಮಾಡಿದ ಅನುಭವವಿದೆ. ಶ್ರೀಮಠದ ಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಜೀವನದಲ್ಲಿ ಯಾವುದೇ ಕೊರತೆಯೂ ಕಾಡಿಲ್ಲ. ಶ್ರೀಗುರುಗಳ ಅನುಗ್ರಹದಿಂದ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಮನೆಯವರ ಸಹಕಾರ, ಮಕ್ಕಳ ಪ್ರೋತ್ಸಾಹದಿಂದ ಗೋಮಾತೆಯ ಸೇವೆಗೆ ಮತ್ತಷ್ಟು ಪ್ರೇರಣೆ ದೊರಕಿದೆ. ಇದನ್ನು ಇನ್ನಷ್ಟು ಮುಂದುವರಿಸಬೇಕು ಎಂಬ ಅಭಿಲಾಷೆಯಿದೆ ” ಎನ್ನುವ ಶಾರದಾ ಅವರ ಗೋ ಸೇವೆ ನಿರಂತರವಾಗಿ ಮುಂದುವರಿಯಲಿ

Leave a Reply

Your email address will not be published. Required fields are marked *