” ಬದುಕಿಗೆ ದೊರಕಿದ ಸೂಕ್ತ ಮಾರ್ಗದರ್ಶನ ಶ್ರೀಗುರುಸೇವೆ ” : ರಾಜರಾಜೇಶ್ವರಿ ಎಸ್ ಭಟ್, ಸುಳ್ಯ

ಮಾತೃತ್ವಮ್

 

” ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಗುರು ಭಕ್ತರು, ನನಗೆ ರಾಜರಾಜೇಶ್ವರಿ ಎಂಬ ಹೆಸರಿಡಲು ಸೂಚಿಸಿದವರು ಹಿರಿಯ ಗುರುಗಳು. ಎಳವೆಯಿಂದಲೇ‌ ತವರಿನಲ್ಲಿ ದೊರಕಿದ ಮಾರ್ಗದರ್ಶನದ ಫಲವಾಗಿ ನನಗೆ ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು, ಗೋವುಗಳೆಂದರೆ ತುಂಬಾ ಪ್ರೀತಿ, ಪೇಟೆಯಲ್ಲಿ ಹಸುಗಳನ್ನು ಸಾಕುವುದು ಸುಲಭವಲ್ಲ, ಈಗ ಶ್ರೀಗುರುಸೇವೆ ಹಾಗೂ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎಂದು ನುಡಿಯುವವರು ಕಡೆಂಗೋಡ್ಲು ಮೂಲದ ಪ್ರಸ್ತುತ ಮುಳ್ಳೇರಿಯ ಮಂಡಲದ ಸುಳ್ಯ ನಿವಾಸಿಗಳಾಗಿರುವ ಫ್ರೊ. ಶ್ರೀಕೃಷ್ಣ ಭಟ್ ಇವರ ಪತ್ನಿ ರಾಜರಾಜೇಶ್ವರಿ.

ನೆಡ್ಚಿಲು ಈಶ್ವರ ಭಟ್ ಹಾಗೂ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ರಾಜರಾಜೇಶ್ವರಿಗೆ ಶ್ರೀಮಠದ ಸಂಪರ್ಕ ಎಳವೆಯಿಂದಲೇ ದೊರಕಿದೆ. ಮದುವೆಯ ನಂತರವೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮನೆಯವರ ಸಂಪೂರ್ಣ ಸಹಕಾರ ದೊರಕಿದೆ , ಗುರುಸೇವೆ ಗೈಯುವ ಅವಕಾಶಕ್ಕಿಂತ ಮಿಗಿಲಾದ ಸೌಭಾಗ್ಯ ಏನಿದೆ ‘ಎನ್ನುವ ರಾಜರಾಜೇಶ್ವರಿ ಸುಳ್ಯ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದವರು.

” ಪ್ರತೀ ವರ್ಷವೂ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಮಠಕ್ಕೆ ತೆರಳಿ ನನ್ನಿಂದ ಸಾಧ್ಯವಾದಷ್ಟು ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮವರು ಮುಳ್ಳೇರಿಯ ಮಂಡಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ಜೊತೆ ಶ್ರೀಮಠದ ಸೇವೆಯಲ್ಲಿ ಕೈ ಜೋಡಿಸುತ್ತಿದ್ದೆ. ಶ್ರೀ ಗುರುಗಳ ಗೋ ಸಂರಕ್ಷಣಾ ಯೋಜನೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತಿದ್ದೇನೆ.‌ಅಭಯಾಕ್ಷರ ಅಭಿಯಾನದಲ್ಲಿ ಭಾಗವಹಿಸಿದ ಅನುಭವವಿದೆ.
ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿರುವೆ ” ಎನ್ನುವ ರಾಜರಾಜೇಶ್ವರಿ ಅವರ ಗೋಸೇವೆಯ ಕೈಂಕರ್ಯಕ್ಕೆ ಅನೇಕ ಬಂಧುಗಳು, ಆತ್ಮೀಯರು, ಗೋಪ್ರೇಮಿಗಳು ಸಹಕಾರ ನೀಡಿದ್ದಾರೆ.

” ಶ್ರೀಗುರುಭಿಕ್ಷಾ ಸೇವೆಯನ್ನು ನಮ್ಮ ಮನೆಯಲ್ಲಿ ನಡೆಸುವ ಅವಕಾಶ ದೊರಕಿದ್ದು ಬದುಕಿನಲ್ಲಿ ಮರೆಯಲಾರದ ಅನುಭವ, ಸುವರ್ಣ ಮಂಟಪದಲ್ಲಿ ಶ್ರೀಕರಾರ್ಚಿತ ಪೂಜೆಯನ್ನು ನೋಡಿ ತನುಮನ ಪಾವನವಾಯಿತು. ಈ ಸಂದರ್ಭದಲ್ಲಿ ನಮ್ಮ ವಲಯದ ಎಲ್ಲರೂ ಸಹಕಾರ ನೀಡಿದ್ದಾರೆ. ಇತ್ತೀಚೆಗೆ ಮ‌ನೆಯವರ ಅನಾರೋಗ್ಯದ ಸಂದರ್ಭದಲ್ಲಿ ಶ್ರೀಪೀಠಕ್ಕೆ ಶರಣಾದೆವು. ಶ್ರೀರಾಮ ದೇವರ ಕೃಪೆ, ಶ್ರೀಗುರುಗಳ ಅನುಗ್ರಹದಿಂದ ಅನಾರೋಗ್ಯ ಸಂಪೂರ್ಣ ಗುಣವಾಗಿದೆ. ಪ್ರಸ್ತುತ ವಿ.ವಿ.ವಿ.ಯ ನಿರ್ದೇಶಕರಾಗಿರುವ ಮನೆಯವರ ಸ್ಪೂರ್ತಿಯಿಂದ ಮತ್ತಷ್ಟು ಶ್ರೀಗುರುಸೇವೆಯಲ್ಲಿ ತೊಡಗಿಸಿಕೊಳ್ಳುವ ಅಭಿಲಾಷೆ ಮೂಡಿದೆ ” ಎನ್ನುವ ರಾಜರಾಜೇಶ್ವರಿ ಅವರಿಗೆ ಸಾಧ್ಯವಾದಷ್ಟು ಕಾಲ ಶ್ರೀಮಠದ ಸೇವೆ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿರ ಬೇಕೆಂಬ ಹಂಬಲವಿದೆ.

Author Details


Srimukha

Leave a Reply

Your email address will not be published. Required fields are marked *