ಅಕ್ಕ ತಂಗಿಯ ಯಕ್ಷಗಾನ ಪಯಣ

ಅಂಕುರ

 

ಕರ್ನಾಟಕದ ವಿಶಿಷ್ಟ ಕಲೆಗಳಲ್ಲಿ ಯಕ್ಷಗಾನ ಪ್ರಮುಖ ಸ್ಥಾನ ಪಡೆದಿದೆ. ಯಕ್ಷಗಾನ ಕಲಾವಿದರು ತೊಡುವ ವೇಷ, ಭೂಷಣ, ಅವರ ಮಾತುಗಾರಿಕೆ, ಕುಣಿತ ನೋಡುವದಕ್ಕೆ ಆನಂದ.


ಅಂತಹ ಕಲೆಯಲ್ಲಿ ಸಾಧನೆಗೈಯ್ಯುತ್ತಿರುವ ಶ್ರೀಜಾ ಮತ್ತು ಶ್ರೀಪೂಜಾ ಕಾಸರಗೋಡಿನ ಬದಿಯಡ್ಕದ ಉದನೇಶ್ ಕುಂಬಳೆ ಮತ್ತು ದೇವಕಿಯ ಸುಪುತ್ರಿಯರು.
ಇಬ್ಬರು ತಮ್ಮ ಏಳನೇ ವಯಸ್ಸಿನಲ್ಲೇ ರಂಗಸಿರಿ ಸಂಸ್ಕೃತಿಕ ವೇದಿಕೆ (ರಿ )ಬದಿಯಡ್ಕ ಎಂಬ ಸಂಸ್ಥೆಯಲ್ಲಿ ಗುರುಗಳಾದ ಸೂರ್ಯ ನಾರಾಯಣ ಪದಕಣ್ಣಾಯ ಬಾಯರು ಇವರಿಂದ ಯಕ್ಷಗಾನವನ್ನು ಕಲಿಯಲು ಆರಂಭಿಸಿದರು.

*”ಹಲವಾರು ಕಡೆ ಸಹೋದರಿಯರ ಯಕ್ಷಗಾನ ಪ್ರದರ್ಶನ*”

ಮರಕಡ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ರಂಗ ಪ್ರವೇಶ ಮಾಡಿದ ಇವರು ಛಾತ್ರ ಚಾತುರ್ಮಾಸ್ಯ ಶ್ರೀ ರಾಮಶ್ರಮ ಬೆಂಗಳೂರು, ಅಖಿಲ ಭಾರತ ಗಮಕ ಸಮ್ಮೇಳನ ಬೇಲೂರು, ಯಕ್ಷಗಾನ ಸಮ್ಮೇಳನ
ಸಾಣೆಹಳ್ಳಿ, ವಿಶ್ವಕರ್ಮ ಸಮಾಜದ ವಾರ್ಷಿಕೋತ್ಸವ ಕೊಯಂಬತ್ತೂರು, ಮಂಗಳೂರು, ಕಾಸರಗೋಡಿನಲ್ಲಿ 30 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ ಬದಿಯಡ್ಕದ ಸಹೋದರಿಯರು.
4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಕಲೋತ್ಸವದ ಏಕಪಾತ್ರಭಿನಯ ಸ್ಪರ್ಧೆಯಲ್ಲಿ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ಶ್ರೀಜಾ ರಾಮಾಯಣ ರಸಪ್ರಶ್ನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವಿಕೆ, ನಂತರ ಚಿನ್ಮಯ ಮಿಷನ್ ಅವರು ನಡೆಸಿದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕೆ ಆಯ್ಕೆ, ವಿವೇಕಾನಂದ ವಿದ್ಯಾ ಸಂಸ್ಥೆ ಏರ್ಪಡಿಸಿದ ‘ಕನಸುಗಳು’ ಎಂಬ ಆನ್ಲೈನ್ ಯಕ್ಷಗಾನ ಅರ್ಥಗಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಹಾಗು ಬದಿಯಡ್ಕ ವಾಹಿನಿ ಕಲಾ ಸಂಘ, ಪುತ್ತೂರು ಎಂಬ ಸಂಸ್ಥೆ ಯಲ್ಲಿ ಆಯೋಜಿಸಿದ ಕಥಾ ಸ್ಪರ್ಧೆಯಲ್ಲಿ ಪ್ರಥಮ.

ಶ್ರೀಪೂಜಾ ಉದನೇಶ್ ಶ್ರೀ ಭಾರತಿ ವಿದ್ಯಾಪೀಠ ಬದಿಯಡ್ಕ ದಲ್ಲಿ ಒಂಬತ್ತನೆ ತರಗತಿ, ಹಾಗು ಶ್ರೀಜಾ ಉದನೇಶ್ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

 

Author Details


Srimukha

Leave a Reply

Your email address will not be published. Required fields are marked *