ಯೋಗಸಾಗರಿ ಸಂಧ್ಯಾ ಹಿರಿಯರಿಗೂಯೋಗ ಕಲಿಸುವ ಸಾಧಕಿ!

ಅಂಕುರ

ಈಕೆ ಇನ್ನೂ ಹದಿನೇಳರ ಪೋರಿ. ವಿಶೇಷಎಂದರೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಕೂಡಈಕೆಯನ್ನುತಮ್ಮ ಶಿಕ್ಷಕಿಯೆಂದು ಪರಿಗಣಿಸಿ, ಗೌರವಿಸುತ್ತಾರೆ! ಅಷ್ಟೇಅಲ್ಲಈಕೆಯ ಶಿಷ್ಯರಾಗಿ ಯೋಗಕಲಿಯಲು ಶಿರಸಿ, ಹೊಸನಗರ, ನಾಗರಕೋಡಿಗೆ…. ಹೀಗೆ ದೂರದೂರದ ಊರುಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ.

ಯೋಗದಲ್ಲಿಇಷ್ಟುಚಿಕ್ಕ ವಯಸ್ಸಿಗೇ ಅಸಾಧಾರಣ ಸಾಧನೆ ಮಾಡಿದ ಸಂಧ್ಯಾಎಂ.ಎಸ್. ಯೋಗ ಸಾಧಕಿ. ಈಗಾಗಲೇ ’ಯೋಗಗುರು’ ಎಂಬ ಅಭಿದಾನಕ್ಕೂ ಪಾತ್ರಳಾಗಿದ್ದಾಳೆ. ತನಗಿಂತಲೂ ಹಿರಿಯ ಮತ್ತುಕಿರಿಯಆಸಕ್ತರಿಗೆಯೋಗಾಸನ ಕಲಿಸುತ್ತಿದ್ದಾಳೆ. ಬಡತನದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವ ಉದ್ದೇಶದಿಂದ ಸಾಗರದಲ್ಲಿ ’ಶ್ರೀ ಗುರುಕುಲಂಯೋಗಕೇಂದ್ರ’ ಆರಂಭಿಸಿದ್ದಾಳೆ. ಆ ಮೂಲಕ ಅತ್ಯಂತಕಿರಿಯ ’ಯೋಗಗುರು’ ಎಂಬ ಹೆಗ್ಗಳಿಕೆಯೂ ಈಕೆಯ ಬೆನ್ನಿಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳಿಗೂ ಭಾಜನಳಾಗಿದ್ದಾಳೆ. ಇನ್ನೂ ವಿಶೇಷವೆಂದರೆಈಕೆಯ ಬಳಿ ಯೋಗಕಲಿತ ಶಿಷ್ಯರು ಕೂಡಇಂದುರಾಜ್ಯ ಮತ್ತುರಾಷ್ಟ್ರಮಟ್ಟದಲ್ಲಿಛಾಪು ಮೂಡಿಸುತ್ತಿದ್ದಾರೆ. ಗುರುವಿಗೆತಕ್ಕ ಶಿಷ್ಯರಾಗಿ ಮಿಂಚುತ್ತಿರುವುದು ಸಂಧ್ಯಾಗೆ ಹೆಮ್ಮೆಯ ಸಂಗತಿಯೂ ಹೌದು.

ಶಿವಮೊಗ್ಗ ಜಿಲ್ಲೆಯ ಸಾಗರತಾಲೂಕಿನಕಾನುಗೋಡು ಮೂಲದ ಕೃಷಿಕ, ನ್ಯಾಯವಾದಿ ಶ್ರೀಧರ ಮೂರ್ತಿ ಮತ್ತು ಸುಧಾ ದಂಪತಿಗಳ ಕಿರಿಯ ಪುತ್ರಿ ಸಂಧ್ಯಾ ಪುಟ್ಟ ವಯಸ್ಸಿನಲ್ಲೇ ಯಶಸ್ಸಿನ ಮೆಟ್ಟಿಲೇರಿ ಇದೀಗ ಅತಿಎತ್ತರಕ್ಕೆ ಏರಿದ್ದಾಳೆ.

ಬಡತನದಲ್ಲಿ ಬೆಳಗಿದ ಪ್ರತಿಭೆ:
ಅಂತಾರಾಷ್ಟ್ರೀಯ ಮಟ್ಟದಲ್ಲಿಖ್ಯಾತಿ ಗಳಿಸಿರುವ ಸಂಧ್ಯಾ, ಬಡತನದಕುಟುಂಬದಿಂದ ಬಂದವರು. ಜೀವನದಲ್ಲಿಎದುರಾದಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ನಿರಂತರ ಸಾಧನೆಯ ಮೂಲಕ ಸಾಧಿಸುವಛಲವಿದ್ದರೆ ಬಡತನವೂ ಲೆಕ್ಕಕ್ಕಿಲ್ಲಎಂಬುದನ್ನು ಸಾಬೀತು ಪಡಿಸಿದ್ದಾಳೆ. ಬಡತನದ ಬವಣೆಯಕುರಿತುಅರಿತಿರುವ ಸಂಧ್ಯಾಳ ತಂದೆ ಶ್ರೀಧರ ಮೂರ್ತಿಅವರಿಗೆ ಪ್ರತಿವರ್ಷ ದೀಪಾವಳಿ, ಚೌತಿ ಸಮಯದಲ್ಲಿ ವಿವಿಧ ಶಾಲೆಗಳಲ್ಲಿ ಓದುತ್ತಿರುವ, ಬಡ ವಿದ್ಯಾರ್ಥಿಗಳನ್ನು ಕರೆಯಿಸಿ ಅವರಿಗೆ ಸಿಹಿ ಊಟ ಹಂಚಿ ಸಂಭ್ರಮಿಸುವುದು ಹವ್ಯಾಸ.

’ನಾನು ೫ ನೇ ತರಗತಿಯಲ್ಲಿರುವಾಗ ಸಾಗರದ ವನಶ್ರೀ ಯೋಗಕೇಂದ್ರದ ವಿದ್ಯಾರ್ಥಿಗಳು ನಮ್ಮ ಮನೆಗೆ ಬಂದಿದ್ದರು. ಆ ವಿದ್ಯಾರ್ಥಿಗಳು ನಮ್ಮ ಮನೆಯಲ್ಲಿ ಹಲವಾರುಕಷ್ಟದ ಆಸನಗಳನ್ನು ಪ್ರದರ್ಶಿಸಿದ್ದರು. ಅಂದೇ ನಾನೂ ಕೂಡಯೋಗಕ್ಷೇತ್ರದಲ್ಲಿಯಾಕೆ ಸಾಧಿಸಬಾರದುಎಂದು ನನ್ನೊಳಗೇ ಪ್ರಶ್ನೆ ಹಾಕಿಕೊಂಡೆ. ಬಳಿಕ ಅಪ್ಪನೊಂದಿಗೆ ಈ ವಿಚಾರ ಪ್ರಸ್ತಾಪಿಸಿದೆ. ಅಪ್ಪಕೂಡಖಂಡಿತ ಕಲಿ ಎಂದು ಪ್ರೋತ್ಸಾಹಿಸಿದರು’ ಎಂದುಯೋಗದಆಕರ್ಷಣೆಕುರಿತು ಬಿಚ್ಚಿಡುತ್ತಾಳೆ ಸಂಧ್ಯಾ.

ತಂದೆಯೇಯೋಗಗುರು!
ಸಂಧ್ಯಾ, ಆರಂಭದಲ್ಲಿ ಸಾಗರದ ವನಶ್ರೀ ಯೋಗಕೇಂದ್ರದಯೋಗಗುರುಎಚ್.ಪಿ. ಮಂಜಪ್ಪಅವರಿಂದಯೋಗ ಕಲಿತಳು. ಬಳಿಕ ಯಶವಂತಜಿ.ಕೆ., ಶಿರಸಿಯ ನಯನಾ ಭಟ್ಟಅವರ ಬಳಿಯೂ ಯೋಗಾಭ್ಯಾಸ ನಡೆಸಿದ್ದಾಳೆ. ಮಗಳ ಸಾಧನೆಯ ಹಿಂದೆ ಶ್ರೀಧರ ಮೂರ್ತಿಯವರ ಪರಿಶ್ರಮವೂಇದೆ. ಮಗಳಿಗೆ ಆತ್ಮಸ್ಥೈರ್ಯತುಂಬುತ್ತಾತಾವೇ ಸ್ವತಃಗುರುವಾಗಿಕ್ಲಿಷ್ಟಕರ ಆಸನಗಳನ್ನು ಕಲಿಸಿದ್ದಾರೆ. ಮುಕ್ತ ಹಸ್ತ ವೃಶ್ಚಿಕ, ಮುಕ್ತ ಹಸ್ತ ಪದ್ಮ ವೃಶ್ಚಿಕ, ತ್ರಿಪುರಾಸನ, ತ್ರಿವಿಕ್ರಮಾಸನ, ನಟರಾಜ ಆಸನ, ಗಂಡಭೇರುಂಡ, ಶಕುನಿ… ಹೀಗೆ ೮೦ ರಿಂದ ೧೦೦ ಬಗೆಯಕ್ಲಿಷ್ಟಕರ ಆಸನಗಳು ಸಂಧ್ಯಾಳಿಗೆ ಕರತಲಾಮಲಕವಾಗಿವೆ.

ಇಂದು ಭಾರತದ ಪ್ರಮುಖ ೧೦ ಯೋಗಪಟುಗಳ ಸಾಲಿನಲ್ಲಿ ಒಬ್ಬಳಾಗಿ ಗುರುತಿಸಿಕೊಂಡಿರುವ ಸಂಧ್ಯಾಒಮ್ಮೆಲೇ ಸಾಧನೆಯಗುರಿತಲುಪಿದವರಲ್ಲ. ಹಲವಾರು ಸ್ಪರ್ಧೆಗಳಲ್ಲಿ ಸೋಲುಂಡು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದ್ದಾಳೆ. ಪ್ರಾರಂಭದಲ್ಲಿತಾಲೂಕು ಮಟ್ಟ, ವಿಭಾಗ ಮಟ್ಟದಲ್ಲಿ ಸೋಲುಂಡಿದ್ದರು. ಆದರೂಎದೆಗುಂದದೆ, ನಿರಂತರ ಸಾಧನೆಯಿಂದರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಂಗಾರ ಮತ್ತುಕಂಚಿನ ಪದಕ ಪಡೆದ ಹೆಗ್ಗಳಿಕೆ ಇವಳದ್ದು.

ತನ್ನ ೧೭ ನೇ ವಯಸ್ಸಿಗೆ ದೇಶದ ವಿವಿಧೆಡೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಈವರೆಗೆ ೧೦೦ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾಳೆ. ಸ್ಕೂಲ್‌ಗೇಮ್ಸ್ ಫೆಡರೇಷನ್‌ಆಫ್‌ಇಂಡಿಯಾ (ಎಸ್‌ಜಿಎಫ್‌ಐ) ನಡೆಸುವಯೋಗ ಸ್ಪರ್ಧೆಯಲ್ಲಿ ಸಂಧ್ಯಾಈವರೆಗೆ ೧೩ ಬಾರಿರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ವರದಹಳ್ಳಿಯಲ್ಲಿ ನಡೆದರಾಜ್ಯಮಟ್ಟದಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ, ಚಿಕ್ಕಮಗಳೂರಿನಲ್ಲಿ ನಡೆದಯೋಗ ಸ್ಪರ್ಧೆಯಲ್ಲಿ ಪ್ರಥಮ, ಮೈಸೂರುದಸರಾದಲ್ಲಿ ಹಿಮಾಲಯ ಫೌಂಡೇಶನ್ ಮತ್ತುಜಿಎಸ್‌ಎಸ್ ಫೌಂಡೇಶನ್ ನಡೆಸಿದ ರಾಜ್ಯಮಟ್ಟದಕಿರು ಮುಕ್ತ ಯೋಗಾಸನ ಸ್ಪರ್ಧೆಯಲ್ಲಿತೃತೀಯ, ಮೈಸೂರಿನಲ್ಲಿ ವಿಶ್ವ ಸಂಸ್ಕೃತಿಯೋಗ ಫೌಂಡೇಶನ್ ನಡೆಸಿದ ರಾಷ್ಟ್ರೀಯ ಮಟ್ಟದಯೋಗ ಸ್ಪರ್ಧೆಯಲ್ಲಿ ಪ್ರಥಮ, ಹಾಸನದಲ್ಲಿ ನಡೆದಯೋಗಸನ ಸ್ಪರ್ಧೆಯಲ್ಲಿಚಾಂಪಿಯನ್‌ಆಫ್‌ಚಾಂಪಿಯನ್…. ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ತನ್ನದಾಗಿಸಿಕೊಂಡಿದ್ದಾಳೆ.

ಸಾಧನೆಗೆ ಸಂದ ಪ್ರಶಸ್ತಿ:
ಸಂಧ್ಯಾಳ ಸಾಧನೆಗೆಕನ್ನಡರಾಜ್ಯೋತ್ಸವ ಸನ್ಮಾನ, ಕರ್ನಾಟಕರಾಜ್ಯ ಪದವಿಪೂರ್ವ ಶಿಕ್ಷಣ ಮಂಡಳಿ, ವನಶ್ರೀ ವಸತಿ ವಿದ್ಯಾಲಯ ಹೀಗೆ ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿ ಗೌರವಿಸಿದೆ. ಕಿರಿಯ ವಯಸ್ಸಿನಲ್ಲಿ ೧೧೫ ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನಳಾಗಿರುವ ಈಕೆ, ಕಳೆದ ನಾಲ್ಕು ವರ್ಷಗಳಿಂದ ಭಾರತದಟಾಪ್‌ಯೋಗ ಪಟುವಾಗಿ ಹೊರಹೊಮ್ಮಿದ್ದಾಳೆ.

ಸಂಧ್ಯಾಳಿಗೆ ಸಂದ ಬಿರುದು:
ಯೋಗದಧ್ರುವತಾರೆ
ಯೋಗ ಸಿಂಧೂರಿ
ಯೋಗಕುವರಿ
ಯೋಗರತ್ನ
ನಂದಿಶ್ರೀ
ಮಿಸ್ ನೆಲಮಂಗಲ
ಯೋಗ ಮಯೂರಿ
ಹವ್ಯಕ ಪಲ್ಲವ

ಕೈ ತಪ್ಪಿದ ಅವಕಾಶ:
ಆರ್ಥಿಕತೊಂದರೆಯಿಂದಾಗಿ ಪಾಂಡಿಚೇರಿ, ಚೆನ್ನೈ, ಅಮೇರಿಕಾ ಮುಂತಾದಕಡೆ ನಡೆದಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಭಾರತದ ನಂ.೧ ಯೋಗ ಪಟುವಾಗಬೇಕೆಂಬ ಕನಸು ಇದೆ ಎನ್ನುತ್ತಾಳೆ ಸಂಧ್ಯಾ. ಸಾಗರದಇಂಡಿಪೆಂಡೆಂಟ್ ಪಿಯುಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿಅಧ್ಯಯನ ನಡೆಸುತ್ತಿದ್ದು ಅವಕಾಶ ಸಿಕ್ಕಿದರೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾಳೆ.

Leave a Reply

Your email address will not be published. Required fields are marked *