ಸುಖದಲ್ಲಿ ದಿನವು ಕ್ಷಣವಾಗುತ್ತದೆ – ಶ್ರೀಸಂಸ್ಥಾನ

ಸುದ್ದಿ

ಬೆಂಗಳೂರು: ಧರ್ಮಕ್ಕೆ ಧರ್ಮವೇ ಮೂಲ. ಧರ್ಮದಿಂದ ಅಧರ್ಮ, ಅಧರ್ಮದಿಂದ ಧರ್ಮವೂ ಸಾಧ್ಯವಿಲ್ಲ. ಕುಲಧರ್ಮವೇ ಅಧರ್ಮವಾದರೆ ಪಾಪ ಹುಟ್ಟಬಹುದು. ರಾಜನೆಂದರೆ ದೇವರೇ. ರಾಮನೆಂದರೆ ಜಗತ್ತಿಗೇ ದೇವರು. ಅವನ ಕಾರ್ಯ ಧರ್ಮಪೂರ್ಣ, ಅರ್ಥಪೂರ್ಣ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

 

ಅವರು ಗಿರಿನಗರ ರಾಮಾಶ್ರಮದಲ್ಲಿ ನಡೆಯುತ್ತಿರುವ ಧಾರಾ ರಾಮಾಯಣ ೫೩ನೇ ದಿನ ಪ್ರವಚನ ನೀಡಿರು.

 

ಪ್ರಿಯವಾದವರು ನೀಡಿದ ತರ್ಪಣ, ಪಿಂಡ ಅಕ್ಷಯವಾಗುತ್ತದೆ. ಒಬ್ಬ ಅಂತಿಮ ಕಾಲದಲ್ಲಿ ಯಾರನ್ನು ಜಪಿಸುತ್ತಾನೋ ಅವನು ಅದುವೇ ಆಗುತ್ತಾನೆ. ಅಗ್ನಿಕ್ರಿಯೆ ಮಾಡಲಾಗದೆ ಜಲಕ್ರಿಯೆಯನ್ನು ರಾಮ ಮಾಡಿದನು. ಮೃದು, ದಾಂತ, ಶಾಂತ ಸ್ವಭಾವದವನು ಸುಮಂತ್ರ. ನಾವು ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದರೆ ಅದು ಅವರನ್ನು ತಲಪುತ್ತದೆ. ನಾವು ಸೇವಿಸಲಿರುವುದನ್ನೇ ದೇವರಿಗೆ ಸಲ್ಲಿಸುತ್ತೇವೆ ಎಂದರು.

 

ದುಃಖದಲ್ಲಿ ಕ್ಷಣವು ದಿನವಾಗುತ್ತದೆ, ಸುಖದಲ್ಲಿ ದಿನವು ಕ್ಷಣವಾಗುತ್ತದೆ. ಭೂಮಿಗಳು ಮನುಷ್ಯರಿಂದ ಆವೃತ; ಪಕ್ಷಿಗಳು ಆಕಾಶದಿಂದ ಆವೃತವಾದವು. ಒಂದಿಂಚೂ ಕಲ್ಮಶವಿಲ್ಲದೆ ಧರ್ಮಕಾರ್ಯಕ್ಕೆ ಜಗತ್ತಿಗೇ ಕೀರ್ತಿಯನ್ನು ತಂದವನು ರಾಮ. ಎಲ್ಲಾ ಭೋಗಗಳನ್ನು ತ್ಯಜಿಸಿದನು ರಾಮ. ವಸಿಷ್ಠರೆಂದರೆ ಯಜ್ಞೇಶ್ವರ, ರಾಮನೆಂದರೆ ಜ್ಯೇಷ್ಠ, ಭರತನೆಂದರೆ ಕನಿಷ್ಟ ಎಂದು ವಿವರಿಸಿದರು.

 

ರಾಮನ ಕಾರ್ಯ ನಿಷ್ಠುರ, ಪ್ರೀತಿ ಅಚಂಚಲ. ಅನುವಂಶಿಕತೆ ಮತ್ತು ಸ್ಥಾನದಲ್ಲಿ ರಾಮನಿಗೇ ಸೇರಬೇಕು ರಾಜ್ಯ. ಗಗನಕ್ಕೆ ಚಂದ್ರನಂತೆ ಲೋಕಕ್ಕೆ ಭೂಪತಿ ರಾಮ, ರಾಮ ರಾಜಸ, ತಾಮಸ ಸಂಪನ್ನನಲ್ಲ; ಸತ್ವಸಂಪನ್ನ. ಹಿರಿಯರ ಮಾತಿನಂತೆ “ಕಾಡು ನನಗೆ, ನಾಡು ನಿನಗೆ” ಎಂದ ರಾಮ. ಗುರುವಿಗೆ ಶಿಷ್ಯನ ಮೇಲೆ, ತಾಯಿಗೆ ಮಕ್ಕಳ ಮೇಲೆ ಪ್ರೀತಿ ಇರುತ್ತದೆ ಎಂದರು.

Author Details


Srimukha

Leave a Reply

Your email address will not be published. Required fields are marked *