ಅಭಿರಾಮ ಹೆಗಡೆ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ

ಸುದ್ದಿ

ಮಾನಹಾನಿಕರ ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ – ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಮಾನಹಾನಿಕರವಾದ ಯಾವುದೇ ರೀತಿಯ ಹೇಳಿಕೆಯನ್ನು ಮಾಧ್ಯಮ – ಸಮಾಜಮಾಧ್ಯಮ ಹಾಗೂ ಇನ್ನಿತರ ಯಾವುದೇ ರೀತಿಯಲ್ಲಿ ನೀಡದಂತೆ ಅಭಿರಾಮ್ ಹೆಗಡೆ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ನ್ಯಾಯಾಲಯ ನೀಡಿದೆ.

 

ಸದರಿ ವ್ಯಕ್ತಿಯು ಮಾಧ್ಯಮ – ಸಮಾಜಮಾಧ್ಯಮ ಮುಂತಾದವುಗಳನ್ನು ಬಳಸಿಕೊಂಡು ಶ್ರೀಮಠ ಹಾಗೂ ಶ್ರೀಗಳ ಗೌರವಕ್ಕೆ ಚ್ಯುತಿತರುವ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿದ್ದು, ಈ ಕುರಿತಾಗಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಸಂವಿಧಾನ ಪ್ರದತ್ತವಾದ ಪ್ರತಿಬಂಧಕಾಜ್ಞೆಯನ್ನು ನೀಡಿ, ಸಂವಿಧಾನ ಬದ್ಧವಾದ ರಕ್ಷಣೆಯನ್ನು ನೀಡಿದೆ.

Author Details


Srimukha

4 thoughts on “ಅಭಿರಾಮ ಹೆಗಡೆ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ

  1. ನ್ಯಾಯಾಲಯವೇನೋ ತೀರ್ಮಾನ ಕೊಟ್ಟಿದೆ ನಿಜ.ಆದರೆ ನ್ಯಾಯಾಲಯಗಳ ತೀರ್ಮಾನ ತಮಗೆ ಅನ್ವಯವಾಗಲಾರದು ಎಂಬ ಹುಂಬತನದಿಂದ ಸಾಮಾಜಿಕ ತಾಣಗಳಲ್ಲಿ ಗುಂಪು ನಿರ್ಮಿಸಿಕೊಂಡು ಬೇಕಾಬಿಟ್ಟಿ ನ್ಯಾಯಾಲಯಗಳ / ನ್ಯಾಯಾಧೀಶರುಗಳ ಘನತೆ ಗೌರವಗಳಿಗೂ ಧಕ್ಕೆಯಾಗುವಂತೆ ಸಂವಿಧಾನದತ್ತ ಅಭಿವ್ಯಕ್ತ ಸ್ವಾತಂತ್ರ್ಯದ ಅವಕಾಶವನ್ನು ದುರುಪಯೋಗಗೊಳಿಸುತ್ತಾ ಬರೆಯುವವರನ್ನು ತಡೆಯಲು ನ್ಯಾಯಾಲಯಗಳಿಗೆ ಸಾಧ್ಯವಾದೀತೇ ಎಂಬ ಸಂಶಯ ಕಾಡುತ್ತಲಿದೆ.ಅಥವಾ ನ್ಯಾಯಾಲಯಗಳ ಗಮನಕ್ಕೆ ಇದು ಬರುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

  2. ನ್ಯಾಯಾಲಯವೇನೋ ಉತ್ತರ ಕೊಟ್ಟಿದೆ ನಿಜ.ಆದರೆ ನ್ಯಾಯಾಲಯಗಳ ತೀರ್ಮಾನ ತಮಗೆ ಅನ್ವಯವಾಗಲಾರದು ಎಂಬ ಹುಂಬತನದಿಂದ ಸಾಮಾಜಿಕ ತಾಣಗಳಲ್ಲಿ ಗುಂಪು ನಿರ್ಮಿಸಿಕೊಂಡು ಬೇಕಾಬಿಟ್ಟಿ ನ್ಯಾಯಾಲಯಗಳ / ನ್ಯಾಯಾಧೀಶರುಗಳ ಘನತೆ ಗೌರವಗಳಿಗೂ ಧಕ್ಕೆಯಾಗುವಂತೆ ಸಂವಿಧಾನದತ್ತ ಅಭಿವ್ಯಕ್ತ ಸ್ವಾತಂತ್ರ್ಯದ ಅವಕಾಶವನ್ನು ದುರುಪಯೋಗಗೊಳಿಸುತ್ತಾ ಬರೆಯುವವರನ್ನು ತಡೆಯಲು ನ್ಯಾಯಾಲಯಗಳಿಗೆ ಸಾಧ್ಯವಾದೀತೇ ಎಂಬ ಸಂಶಯ ಕಾಡುತ್ತಲಿದೆ.ಅಥವಾ ನ್ಯಾಯಾಲಯಗಳ ಗಮನಕ್ಕೆ ಇದು ಬರುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

  3. ಇಂತಹವರನ್ನು ಬಳಸಿಕೊಂಡು TV ಮಾಧ್ಯಮಗಳಲ್ಲಿ debates ನಡೆಸುವ TV ನಿರೂಪಕರ ಮತ್ತುTV channels ಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ.

Leave a Reply

Your email address will not be published. Required fields are marked *