ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ಅಲೆಯ ಸಾಗರವಾಗು
ಒಮ್ಮೆ ಸಮುದ್ರದಲ್ಲಿ ತೀವ್ರವಾದ ತರಂಗಗಳು ಏಳುತ್ತವೆ. ಆ ತರಂಗಗಳು ಮುಗಿಲೆತ್ತರಕ್ಕೆ ಏರುತ್ತಾ ರಭಸದಿಂದ ಮುನ್ನುಗ್ಗಿ ಬರುತ್ತಿರುತ್ತವೆ. ಹೀಗೆ ಬಂದ ತರಂಗಗಳು ಸಂಚರಿಸುತ್ತಾ, ಸಂಚರಿಸುತ್ತಾ ಸಮುದ್ರದ ದಂಡೆಗೆ ಅಪ್ಪಳಿಸಿ ನಾಶ ಹೊಂದುತ್ತವೆ. ಆಗ ತರಂಗಗಳಿಗೆ ತುಂಬಾ ಬೇಸರವಾಗುತ್ತದೆ. ‘ಇಷ್ಟೆಲ್ಲ ಅಬ್ಬರ ಮಾಡಿ ಏನು ಪ್ರಯೋಜನವಾಯಿತು? ಕೊನೆಗೆ ನಾಶ ಹೊಂದಿದಂತಾಯಿತು!’ ಎಂದು. ಬೇಸರದಿಂದ ಅವು ಭಗವಂತನಲ್ಲಿ ಕೇಳುತ್ತವೆ, “ಯಾಕೆ ಹೀಗೆ?” ಎಂದು. ಆಗ ಭಗವಂತ ಹೇಳುತ್ತಾನೆ “ಏಕೆ ಬೇಸರಗೊಳ್ಳುತ್ತೀರಿ? ನಾಶವಾದರೂ ಮತ್ತೆ ಈ ಸಮುದ್ರವನ್ನೇ ಸೇರಿ ತರಂಗಗಳಾಗಿ ಮಾರ್ಪಡುತ್ತೀರಿ; ನೀವು ಅಲೆಯೆಂದು ಭಾವಿಸದೇ ಸಾಗರ ಎಂದು ಭಾವಿಸಿದಾಗ ಈ ನೋವು, ಬೇಸರ ಇರುವುದಿಲ್ಲ” ಎಂದು.
ನಾವು ನಮ್ಮನ್ನು ಕೇವಲ ಬಿಂದು ಎಂದು ಭಾವಿಸದೇ ಸಿಂಧು ಎಂದು ಭಾವಿಸಿದಾಗ ಮತ್ತು ಈ ಪ್ರಪಂಚದಲ್ಲಿರುವ ಚರಾಚರ ವಸ್ತುಗಳನ್ನು ಪ್ರೀತಿಸಿದಾಗ ಅನಂತ, ಅವಿನಾಶಿಯಾಗುತ್ತೇವೆ. ಪ್ರೀತಿಯಲ್ಲಿ ದೈವತ್ವವನ್ನು ಕಂಡಾಗ ಬದುಕು ಸಾರ್ಥಕವಾಗುತ್ತದೆ. ನಾವು ಅಲೆಯಾಗದೇ ಸಾಗರವಾಗಬೇಕು.