ಮಾತು~ಮುತ್ತು : ಹೆಸರು ಶಾಶ್ವತವಲ್ಲ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಕೆಲವರು ಹಣಕ್ಕಾಗಿ, ಕೆಲವರು ಹೆಣ್ಣಿಗಾಗಿ, ಇನ್ನು ಕೆಲವರು ಹೆಸರಿಗಾಗಿ ಮಾಡಬಾರದ್ದೆನ್ನೆಲ್ಲ ಮಾಡುತ್ತಾರೆ. ಇದಕ್ಕೆ ಈ ಕಥೆ ಸಾಕ್ಷಿ.

 

ಒಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ. ಅವನಿಗೆ ತುಂಬ ಹೆಸರನ್ನು ಗಳಿಸಬೇಕೆಂದು ಮಹತ್ತ್ವಾಕಾಂಕ್ಷೆ ಉಂಟಾಯಿತು. ಅವನು ತನ್ನ ಆಸ್ಥಾನ ವಿದ್ವಾಂಸರನ್ನು ಒಂದು ಸಭೆ ಸೇರಿಸಿ,
“ಬಹಳ ದೊಡ್ಡ ಹೆಸರು ಗಳಿಸಿದ ವ್ಯಕ್ತಿಯನ್ನು ಅವನ ಮರಣಾನಂತರ ಹೇಗೆ ಗೌರವಿಸುತ್ತಾರೆ?” ಎಂದು ಕೇಳುತ್ತಾನೆ.

 

ಆಗ ಆಸ್ಥಾನ ವಿದ್ವಾಂಸರುಗಳು- “ಯಾರು ಬಹಳ ದೊಡ್ಡ ಹೆಸರು ಗಳಿಸುತ್ತಾರೋ ಅವರನ್ನು ದೇವಲೋಕದಲ್ಲಿರುವ ಒಂದು ದೊಡ್ಡ ಪವರ್ತದಲ್ಲಿ ಅವರ ಹೆಸರನ್ನು ಕೆತ್ತಿಸಿ ಗೌರವಿಸುತ್ತಾರೆ” ಎನ್ನುತ್ತಾರೆ.

 

ರಾಜನಿಗೆ ತುಂಬ ಆಸೆಯಾಗುತ್ತದೆ. ಅವನು, ತಾನು ಅಜರಾಮರನಾಗಿರಬೇಕೆಂದು ಬಯಸಿ ಅಂದಿನಿಂದಲೇ ಹೆಸರು ಗಳಿಸುವುದಕ್ಕಾಗಿ ಅನೇಕ ಕಾರ್ಯಗಳನ್ನು ಮಾಡುತ್ತಾನೆ. ಇವನ ಹೆಸರು ಗಳಿಸಬೇಕೆಂಬ ಉತ್ಸಾಹದಲ್ಲಿ ಅನೇಕರಿಗೆ ತೊಂದರೆಯೂ ಉಂಟಾಗುತ್ತದೆ. ಕಾಲಾನಂತರದಲ್ಲಿ ರಾಜ ಸತ್ತುಹೋಗುತ್ತಾನೆ.

 

ಅವನು ದೇವಲೋಕದಲ್ಲಿ-
“ನನ್ನ ಹೆಸರನ್ನು ಎಲ್ಲಿ ಕೆತ್ತಲಾಗುತ್ತದೆ?” ಎಂದು ದೇವದೂತರನ್ನು ಕೇಳುತ್ತಾನೆ.
ಆಗ ಅವರು ಅವನನ್ನು ಒಂದು ದೊಡ್ಡ ಪರ್ವತದ ಹತ್ತಿರ ಕರೆದುಕೊಂಡು ಹೋಗಿ ಇದೇ ಪರ್ವತದಲ್ಲಿ ಎಂದು ಉತ್ತರಿಸುತ್ತಾರೆ. ರಾಜ ನೋಡುತ್ತಾನೆ, ಆ ಪರ್ವತದಲ್ಲಿ ಒಂದಿಂಚೂ ಜಾಗ ಇರದಷ್ಟು ಹೆಸರುಗಳನ್ನು ಕೆತ್ತಿರುತ್ತಾರೆ. ಆಗ ದೇವದೂತರು ಅಲ್ಲಿರುವ ಒಂದು ಹೆಸರನ್ನು ಅಳಿಸಿ ಹಾಕಿ ಇವನ ಹೆಸರನ್ನು ಕೆತ್ತುತ್ತಾರೆ.

 

ಆಗ ರಾಜ ಕೇಳುತ್ತಾನೆ-
“ಇನ್ನು ಸ್ವಲ್ಪ ಸಮಯ ಕಳೆದ ಅನಂತರ ನನ್ನ ಹೆಸರನ್ನು ಅಳಿಸಿ ಬೇರೆಯವರ ಹೆಸರನ್ನು ಕೆತ್ತಬಹುದಲ್ಲವೇ?”ಎಂದು.
ದೇವದೂತರು-
“ಖಂಡಿತ” ಎನ್ನುತ್ತಾರೆ.

 

ಆಗ ರಾಜ ‘ಇದಕ್ಕಾಗಿ ನಾನು ಇಷ್ಟೊಂದು ಕಷ್ಟಪಟ್ಟೆನ್ನಲ್ಲಾ’ ಎಂದು ನಿರಾಶೆಯಿಂದ ಪರಿತಪಿಸುತ್ತಾನೆ.

 

ಕೆಲವರು ಹೆಸರಿಗಾಗಿ ಮಾಡಬಾರದ್ದನ್ನು ಮಾಡುತ್ತಾರೆ. ಪಡಬಾರದ ಕಷ್ಟ ಪಡುತ್ತಾರೆ. ಆದರೆ ಅವರಿಗೆ ಹೆಸರು ಶಾಸ್ವತವಲ್ಲ ಅಂಬ ಅರಿವು ಉಂಟಾಗುವುದೇ ಇಲ್ಲ.

 

ಡಿ.ವಿ.ಜಿ. ಹೇಳುತ್ತಾರೆ
‘ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನಾರು?
ಲೆಕ್ಕವಿರಿಸಿಲ್ಲ ಜಗತ್ತನ್ನಾದಿ ಬಂಧುಗಳ ದಕ್ಕುವುದೇ ನಿನಗೆ ಜಸ?  ಮಂಕುತಿಮ್ಮ.’
ಅಕ್ಕಿಯಲ್ಲಿ ಅನ್ನವಾಗುವ ಬಗೆಯನ್ನು ಮೊದಲು ಕಂಡವರಾರು? ಅಕ್ಷರದ ಬರಹಕ್ಕೆ ಮೊದಲಿಗನಾರು? ಜಗತ್ತು ತನ್ನ ಆದಿ ಬಂಧುಗಳ ಲೆಕ್ಕವನ್ನು ಇಟ್ಟಿಲ್ಲ. ನಿನಗೆ ಯಶಸ್ಸು ಸಿಗುವುದೇನು?

 

Author Details


Srimukha

1 thought on “ಮಾತು~ಮುತ್ತು : ಹೆಸರು ಶಾಶ್ವತವಲ್ಲ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

  1. ಹೆಸರಿಗಾಗಿ ಉಸಿರು ಬಿಗಿ ಹಿಡಿದು ಹಲುಬುವ ಹಲವರಿಗೆ ತುಂಬ ಉತ್ತಮ ನೀತಿ ಪಾಠ.

Leave a Reply

Your email address will not be published. Required fields are marked *