ಬೆಂಗಳೂರು: ಗೋವುಗಳು ಸಂಚರಿಸುವ ಮಾರ್ಗ ಪ್ಲಾಸ್ಟಿಕ್ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ ಶ್ರೀಸಂಸ್ಥಾನದವರು ಸಂಕಲ್ಪಿಸಿದ ‘ಅಮೃತಪಥ ‘ ಕಾರ್ಯಕ್ರಮಕ್ಕೆ ಸರ್ವಧಾರಿ, ಸೋಮೇಶ್ವರ, ವಿದ್ಯಾರಣ್ಯ ವಲಯಗಳಲ್ಲಿ ಚಾಲನೆ ನೀಡಲಾಯಿತು.
ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಭಾನುವಾರ ಬೆಳಗ್ಗೆ 7ರಿಂದ 9ಗಂಟೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಕಸ ಎಸೆಯದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಬಿಬಿಎಂಪಿ ಸದಸ್ಯ ಶ್ರೀ ಸೋಮಶೇಖರ್ ಕಾರ್ಯಕರ್ತರ ತಂಡದೊಂದಿಗೆ ಸಂವಾದ ನಡೆಸಿದರು.