ಅದೊಂದು ಕಾಲೇಜು, ಪ್ರೊಫೆಸರ್ ಒಬ್ಬರು ಒಂದು ಗ್ಲಾಸಿನ ತುಂಬ ನೀರನ್ನು ತಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ-
“ಈ ಗ್ಲಾಸಿನಲ್ಲಿ ಎಷ್ಟು ತೂಕದ ನೀರಿರಬಹುದು?”
ಎಂದು ಗ್ಲಾಸನ್ನು ಎತ್ತಿ ತೋರಿಸಿ ಕೇಳುತ್ತಾರೆ.
ಆಗ ವಿದ್ಯಾರ್ಥಿಗಳಲ್ಲಿ ಕೆಲವರು 100 ಗ್ರಾಂ, ಇನ್ನು ಕೆಲವರು 150 ಗ್ರಾಂ, ಇನ್ನು ಕೆಲವರು 200ಗ್ರಾಂ ಎನ್ನುತ್ತಾರೆ.
“ತುಂಬ ಕಡಿಮೆ ತೂಕವಿರುವ ಈ ಗ್ಲಾಸನ್ನು ಹೀಗೆ ಎತ್ತಿ ಹಿಡಿದುಕೊಂಡು ಇಡೀ ದಿನವಿದ್ದರೆ ಏನು ಆಗಬಹುದು?” ಎಂದು ಕೇಳುತ್ತಾರೆ ಪ್ರೊಫೆಸರ್.
ಆಗ ವಿದ್ಯಾರ್ಥಿಗಳು-
“ಮೊದಲಿಗೆ ಕೈ ನೋವಾಗುತ್ತದೆ. ಅನಂತರ ಕೈ ಮರಗಟ್ಟಿದಂತಾಗುತ್ತದೆ. ಅನಂತರ ಪಾರ್ಶ್ವವಾಯು ಕೂಡಾ ಉಂಟಾಗಬಹುದು” ಎನ್ನುತ್ತಾರೆ.
ಆಗ ಪ್ರೊಫೆಸರ್-
“ಈ ಗ್ಲಾಸನ್ನು ಕೆಳಗೆ ಇಟ್ಟಾಗ ಯಾವ ನೋವೂ ಇರುವುದಿಲ್ಲ ಅಲ್ಲವೇ?” ಎಂದು ಕೇಳುತ್ತಾರೆ.
ವಿದ್ಯಾರ್ಥಿಗಳು ಒಕ್ಕೊರಿಲಿನಿಂದ ಹೌದು ಎನ್ನುತ್ತಾರೆ.
ಆಗ ಪ್ರೊಫೆಸರ್-
“ನಮ್ಮ ಚಿಂತೆಯೆಂಬ ಗ್ಲಾಸನ್ನು ಬಹಳ ಸಮಯ ಹೊತ್ತುಕೊಂಡೇ ಇದ್ದರೆ ನಮ್ಮ ಬುದ್ಧಿಗೆ ಪಾರ್ಶ್ವವಾಯು ಹೊಡೆಯಬಹುದು. ಆದ್ದರಿಂದ ಅನಾವಶ್ಯಕ ವಿಷಯಗಳಿಗೆ ಮಹತ್ತ್ವ ಕೊಟ್ಟು ದಿನವಿಡೀ ಚಿಂತಿಸುವುದರಿಂದ ಯಾವುದೇ ಲಾಭವಿಲ್ಲ. ಬದಲಿಗೆ ನಷ್ಟವೇ ಉಂಟಾಗುತ್ತದೆ.” ಎನ್ನುತ್ತಾರೆ.
ಆದ್ದರಿಂದ ಬದುಕಿನಲ್ಲಿ ಚಿಂತೆಯೆಂಬ ಗ್ಲಾಸನ್ನು ಕೆಳಗಿಟ್ಟಾಗ ಯಾವ ನೋವೂ ಇರುವುದಿಲ್ಲ. ಬದಲಿಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಸೋದಾರಣೆಯೊಂದಿಗೆ ಅರ್ಥಪೂರ್ಣವಾಗಿ ತಿಳಿಹೇಳುವ ಲೇಖನ.ಗುರುಭ್ಯೋ ನಮ:|