ನಕಲಿ ಅಶ್ಲೀಲ ಸಿಡಿ ಪ್ರಕರಣ; ಜಾಮೀನು ರಹಿತ ವಾರೆಂಟ್

ಸುದ್ದಿ

ಬೆಂಗಳೂರು: ನಕಲಿ ಅಶ್ಲೀಲ ಸಿಡಿ ತಯಾರಿಸಿ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾನಹಾನಿಗೆ ಪ್ರಯತ್ನಿಸಿದ್ದ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಕುಮಟಾದ ಜೆ.ಎಂ.ಎಫ್.ಸಿ ನ್ಯಾಯಾಲಯವು ೫ ಜನ ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.

 

ಶ್ರೀಸಂಸ್ಥಾನದವರ ತೇಜೋವಧೆ ಮಾಡುವ ದುರುದ್ದೇಶದಿಂದ ೨೦೧೦ ರಲ್ಲಿ ದುಷ್ಟಕೂಟವನ್ನು ಕಟ್ಟಿಕೊಂಡು ನಕಲಿ ಅಶ್ಲೀಲ ಸಿಡಿ ತಯಾರಿಸಿ, ಶ್ರೀಗಳ ಮಾನಹರಣವನ್ನು ಮಾಡುವ ಕುಪ್ರಯತ್ನ ನಡೆದಿತ್ತು. ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ; ಶ್ರೀಗಳ ಹಾವ ಭಾವ ಗಳನ್ನು ಆತನಿಗೆ ಕಲಿಸಿ ಅಶ್ಲೀಲವಾಗಿ ಚಿತ್ರೀಕರಿಸಲಾಗಿತ್ತು. ಹಾಲಿವುಡ್ ತಂತ್ರಜ್ಞಾನ ಬಳಸಿ, ಶ್ರೀಗಳ ಚಿತ್ರಗಳನ್ನು ಆಶ್ಲೀಲ ವಿಡಿಯೋಗಳ ಜೊತೆ ಸೇರಿಸಿ ಅದನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಶ್ರೀರಾಮಚಂದ್ರಾಪುರಮಠದ ಶ್ರೀಗಳ ಧವಳ ಕೀರ್ತಿಗೆ ಮಸಿ ಬಳಿಯುವ ಕಾರ್ಯತಂತ್ರವನ್ನು ರೂಪಿಸಿದ್ದರು.

 

ಈ ಮಧ್ಯೆ ಈ ಷಡ್ಯಂತ್ರ ನಡೆಯುತ್ತಿರುವುದು ಶ್ರೀಮಠದ ಗಮನಕ್ಕೆ ಬಂದು, ಶ್ರೀ ಗೋಪಾಲ್ ಹೊಸೂರ್ ನೇತೃತ್ವದ ಪೋಲಿಸರು ದಾಳಿ ಮಾಡಿದಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಈ ಹೀನಕಾರ್ಯ ಅಲ್ಲಿಗೆ ನಿಂತಿತು. ವಿಚಾರಣೆ ನಡೆಸಿದ ಪೋಲಿಸರು ಆರೋಪಿಗಳ ವಿರುದ್ಧ ಚಾರ್ಜ್’ಶೀಟ್ ಸಲ್ಲಿಸಿದ್ದು, ಆರೋಪಿಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ರದ್ಧತಿಗೆ ಪ್ರಯತ್ನಿಸಿದ್ದರಾದರೂ, ಎಲ್ಲಾ ಕಡೆ ಹಿನ್ನೆಡೆ ಅನುಭವಿಸಿದ್ದಾರೆ.

 

ಇದೀಗ ಪ್ರಕರಣ ಕುಮಟಾದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಚಾರ್ಜ್ ಫ್ರೇಮಿಂಗ್ ಹಂತದಲ್ಲಿದ್ದು, ಇಂದು ನ್ಯಾಯಾಲಯದ ಕಲಾಪಕ್ಕೆ ಹಾಜರಾಗದ ಆರೋಪಿಗಳ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿ ಆದೇಶಿಸಿದೆ.

Leave a Reply

Your email address will not be published. Required fields are marked *