ಸತ್ಯ ಶೋಧ ಮಿತ್ರ ಮಂಡಳಿ ಪೇಜ್ ಅಸತ್ಯ ಎಂದು ನಿಷ್ಕ್ರೀಯಗೊಳಿಸಿದ ಎಫ್. ಬಿ.

ಸುದ್ದಿ

ಬೆಂಗಳೂರು: ಸತ್ಯ ಶೋಧ ಮಿತ್ರ ಮಂಡಳಿ ಎನ್ನುವ ಹೆಸರಿನಲ್ಲಿ ಸಮಾಜದ ಶಾಂತಿ ನೆಮ್ಮದಿಗೆ ಮಾರಕವಾಗಿದ್ದ ಹಾಗೂ ಶ್ರೀಮಠದ ಕುರಿತಾಗಿ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ತೇಜೋವಧೆ ಮಾಡಿ; ಕೋಟ್ಯಾಂತರ ಶಿಷ್ಯ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದ್ದ, ಸಾಮಾಜಿಕ ಜಾಲತಾಣದಲ್ಲಿನ ಫೇಸ್ ಬುಕ್ ನ ದುಷ್ಟಕೂಟವೊಂದನ್ನು ಫೇಸ್ ಬುಕ್ ಸಂಸ್ಥೆ ನಿಯಮಾನುಸಾರವಾಗಿ ಮುಕ್ತಾಯ ಮಾಡಿದೆ.

ಹಲವು ದಿನಗಳಿಂದ ಕುಕೃತ್ಯದಲ್ಲಿ ಭಾಗಿಯಾಗಿದ್ದ ಈ ತಂಡದ ವಿರುದ್ಧ ಶ್ರೀಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಗಿರಿನಗರ ಆರಕ್ಷಕ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು, ದೂರನ್ನು ಪರಿಶೀಲಿಸಿದ ನಂತರ ಇದರಲ್ಲಿ ಅಪರಾಧಿ ಕೃತ್ಯ ಇರುವುದನ್ನು ಸ್ಪಷ್ಟಪಡಿಸಿಕೊಂಡು, ಎಫ್ ಐ ಆರ್ ದಾಖಲಿಸಿ, ಅದರ ಖಾತೆಯ ನಿರ್ವಾಹಕರು ಮತ್ತು ಬರೆಯುತ್ತಿದ್ದವರಿಗೆ ನೊಟೀಸ್ ಜಾರಿಮಾಡಿದ್ದರು. ಹೆಚ್ಚಿನ ಕ್ರಮಕ್ಕಾಗಿ ಪ್ರಕರಣವನ್ನು ಸಿ.ಐ.ಡಿ ಸಂಸ್ಥೆಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾಯಿಸಿದ್ದರು.

ಕೂಲಂಕಷ ತನಿಖೆ ನಡೆಸಿದ ಸಿ.ಐ.ಡಿ ಸೈಬರ್ ಕ್ರೈಮ್ ವಿಭಾಗ ದೂರಿನ ಸತ್ಯತೆಯನ್ನು ಮನಗಂಡು ಫೇಸ್ ಬುಕ್ ಗೆ ರಿಪೋರ್ಟ್ ಮಾಡಿತ್ತು. ಅದರ ಅನ್ವಯ ಫೇಸ್ ಬುಕ್ ಸಂಸ್ಥೆಯು ವಾರಗಳ ಕಾಲ ಈ ಗುಂಪನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನಿಗೆ ವಿರುದ್ಧವಾದ ಅವಹೇಳನಕಾರಿ ಬರಹಗಳೇ ಇರುವುದನ್ನು ಮನಗಂಡು “ಸತ್ಯ ಶೋಧ ಮಿತ್ರ ಮಂಡಳಿ” ಎನ್ನುವ ಈ ದುಷ್ಟ ಕೂಟವನ್ನು ಅನೂರ್ಜಿತಗೊಳಿಸಿದೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ನೆಲೆಗೊಳಿಸುವ ತನ್ನ ಬದ್ಧತೆಯನ್ನು ಫೇಸ್ ಬುಕ್ ಸಂಸ್ಥೆ ಪ್ರದರ್ಶಿಸಿದೆ. ಇದರಿಂದಾಗಿ ಆ ವ್ಯಕ್ತಿಗಳು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು ಪುನಃ ದೃಢೀಕರಣಗೊಂಡಂತಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ನ್ಯಾಯಾಲಯಗಳು ಈ ವ್ಯಕ್ತಿಗಳ ಮೇಲೆ ನಿರ್ಬಂಧಕಾಜ್ಞೆ ನೀಡಿದ್ದರೂ ಅದನ್ನು ಇವರು ಮತ್ತೆ ಮತ್ತೆ ಉಲ್ಲಂಘಿಸಿದ್ದು ಇಲ್ಲಿ ಗಮನಾರ್ಹ.

Author Details


Srimukha

1 thought on “ಸತ್ಯ ಶೋಧ ಮಿತ್ರ ಮಂಡಳಿ ಪೇಜ್ ಅಸತ್ಯ ಎಂದು ನಿಷ್ಕ್ರೀಯಗೊಳಿಸಿದ ಎಫ್. ಬಿ.

  1. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬುದು ಸುಳ್ಳಲ್ಲ, ಇನ್ನೂ ಏನೇನು ಆಗಬೇಕಿದೆಯೋ!

Leave a Reply

Your email address will not be published. Required fields are marked *