ಹವಿ ಸವಿ ತೋರಣ – ೨೧ ಸೊಪ್ಪು, ನಾರು – ಬೇರು ಇದುವೇ ಅಜ್ಜಿಮದ್ದು

ಲೇಖನ

 

ಹವ್ಯಕ ಸಂಸ್ಕೃತಿಲಿ ಅಜ್ಜಿಮದ್ದು ಹೇಳುದು ಮನೆಲಿ ನಿತ್ಯಕ್ಕೆ ಉಪಯೋಗಿಸುವ ಆಹಾರವಸ್ತುಗಳನ್ನೇ. ಅದು ಒಂದು ವೈದ್ಯಕೀಯ ಪದ್ದತಿ ಅಲ್ಲದ್ರೂ ಅದರಿಂದ ನಮ್ಮ ಆರೋಗ್ಯ ಮಾಂತ್ರ ಚೆಂದಕೆ ಒಳಿತ್ತು ಹೇಳುವ ಧೈರ್ಯ. ಹೆಚ್ಚಾಗಿ ಹೀಂಗಿದ್ದ ಮನೆಮದ್ದುಗಳ ತಯಾರು ಮಾಡುದು ಹೆಮ್ಮಕ್ಕೊ ಆದ ಕಾರಣ ಅದಕ್ಕೆ ಅಜ್ಜಿಮದ್ದು ಹೇಳಿ ಹೆಸರು ಬಂದದಾದಿಕ್ಕು.

 

ನಮ್ಮ ಮನೆಗಳ ಅಟ್ಟುಂಬೊಳ ಹೇಳಿರೆ ಅದೊಂದು ಸಣ್ಣ ವೈದ್ಯಶಾಲೆಯ ಹಾಂಗೇ. ಬೆಶಿಲಿಂಗೆ ಹಾಕಿ ಲಾಯ್ಕಕೆ ಒಣಗಿಸಿ, ಗಾಳಿ ತಾಗದ್ದಾಂಗೆ ಜೆಂಗಲ್ಲಿ ಮಡುಗಿದ ಶುಂಠಿ, ದಾಳಿಂಬೆ ಓಡು, ಕಂಚುಸಟ್ಟು, ನೆಲ್ಲಿಂಡಿ ಇದೆಲ್ಲ ಒಂದೊಂದು ರೀತಿಯ ಮದ್ದುಗಳೇ.

 

ಮನೆಯವರ ಆರೋಗ್ಯಲ್ಲಿ ರಜಾ ಹೆಚ್ಚುಕಮ್ಮಿಯಾದ ಕೂಡ್ಲೇ ಅದರ ನೋಡಿ ಅಂಬಗಳೇ ಅದಕ್ಕೆ ಬೇಕಾದ ಮದ್ದು ಮಾಡಿಕೊಡುವ ಮನೆಲಿಪ್ಪ ಅಜ್ಜಿ, ದೊಡ್ಡಬ್ಬೆ, ಸೋದರತ್ತೆ ಇವೆಲ್ಲ ಯೇವದೇ ಪದವಿ ಇಲ್ಲದ್ರೂ ಕೂಡ ಪ್ರಕೃತಿಯ ನಾಡಿಮಿಡಿತಗೊಂತಿಪ್ಪ ಮಹಾನ್ ವೈದ್ಯೆಯರೇ. ಮನೇಲಿ ಆರಿಂಗೆ ಅಸೌಖ್ಯ ಬಂದರು ಅವು ಅಂಬಗಳೇ ಮದ್ದಿನ ಭಂಡಾರ ಬಿಡ್ಸುಗು.

 

‘ ಅಟ್ಟುಂಬೊಳ ಸರಿ ಇದ್ದರೆ ಆರೋಗ್ಯ ಗಟ್ಟಿ ಇಕ್ಕು ‘ ಹೇಳಿ ಅಜ್ಜಿ ಹೇಳುದು ಕೇಳಿದ್ದೆ. ಆ ಮಾತು ಸತ್ಯವೇ ಅಲ್ಲದೋ ,

 

ಪುಟ್ಟು ಮಕ್ಕೊಗೆ ಜೇನಲ್ಲಿ ತಳದು ಶುಂಠಿ, ಬಜೆ,ತ್ರಿಪ್ಪಲಿ ( ಹಿಪ್ಪಿಲಿ ), ಎರಟ್ಟಿಮಧುರ ನಕ್ಸುವಲ್ಲಿಂದ ನಮ್ಮ ಅಜ್ಜಿಮದ್ದಿನ ಬಾಂಧವ್ಯ ಸುರು ಆವ್ತು.

 

ಅಬ್ಬೆಹಾಲು ಕಮ್ಮಿ ಇಪ್ಪ ಮಕ್ಕೊಗೆ ‘ಬಂದದನಾರಿನ’ ಕಶಾಯ ಮಾಡಿ ಕೊಟ್ಟರೆ ಅಬ್ಬೆ ಹಾಲು ಕುಡುದಷ್ಟೇ ಆರೋಗ್ಯ ಇಕ್ಕು ಹೇಳಿ ಹಿರಿಯರು ಹೇಳುದು ಕೇಳಿದ್ದೆ.

 

ಹಾಂಗೇ ಮಕ್ಕೊಗೆ ಹೊಟ್ಟೆ ಬೇನೆ ಆದರೆ ಓಮ ಕಶಾಯ, ವಾಯು ಸಮಸ್ಯೆ ಆದರೆ ಜೀರಕ್ಕಿ ಕಶಾಯ, ದೊಂಡೆಬೇನೆ , ಕಫ ಇದ್ದರೆ ಮಜ್ಜಿಗೆಸೊಪ್ಪಿನ ಗೆಣಮೆಣಸಿನ ಕಶಾಯ, ಜ್ವರ ಬಂದರೆ ಅಮೃತಬಳ್ಳಿ, ಕಿರಾತಕಡ್ಡಿ ಕಶಾಯ, ಅಜೀರ್ಣಕ್ಕೆ ಮಾಬಲಹುಳಿ ಸೊಪ್ಪಿನ ನಾರಿನ ಕಶಾಯ ಹೇಳಿ ಒಂದೊಂದು ಸಮಸ್ಯೆಗೂ ಒಂದೊಂದು ಮದ್ದಿನ ಪಟ್ಟಿ ಉದ್ದ ಬೆಳೆತ್ತಾ ಹೋವ್ತು. ಇದು ಬರೀ ಮಕ್ಕೊಗೆ ಮಾಂತ್ರ ಅಲ್ಲ. ದೊಡ್ಡವಕ್ಕೂ ಆವ್ತು.

 

ಇದೆಲ್ಲ ಅನಾರೋಗ್ಯ ಬಂದಪ್ಪಗ ಕೊಡುವ ಮದ್ದುಗೊ ಆದರೆ ಅದಿಲ್ಲದ್ದೆಯೂ ಆರೋಗ್ಯ ರಕ್ಷಣೆ ಮಾಡ್ಲೆ ಅಜ್ಜಿಯತ್ರೆ ಬೇರೆ ಬೇರೆ ಸೊಪ್ಪು, ನಾರು, ಬೇರಿನ ಕಶಾಯ ತಂಬುಳಿ, ತಾಳು, ಸಾರು ಹೇಳಿ ಸುಮಾರಿದ್ದು.

 

ನಮ್ಮ ಹವ್ಯಕ ಸಂಸ್ಕೃತಿಲಿ ಪ್ರಕೃತಿಯೇ ದೇವರು ಹೇಳಿ ಜಾನ್ಸುದು ನಾವು. ಅದುವೇ ನಮ್ಮ ಔಷಧವುದೆ. ನಾವು ಮನೆಮುಂದೆ ಬೆಳಶುವ ತುಳಶಿ ಸೆಸಿ, ಜಾಲಕೊಡೀಲಿಪ್ಪ ಸಾಂಬ್ರಾಣಿ, ಉರಗೆ, ಕರಿಕ್ಕೆ, ಅಡಿಗೆಗೆ ಹಾಕುವ ಅರಿಶಿನಕೊಂಬು ಇದೆಲ್ಲವೂ ಬರೀ ಆಹಾರ ಮಾಂತ್ರ ಅಲ್ಲ. ಅದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗದ ಹಾಂಗಿಪ್ಪ ಮದ್ದುಗಳೇ.

 

ಕೈಗೆ ಕಾಲಿಂಗೆ ಗಾಯ ಆದರೆ ಜೇನುದೆ ತುಪ್ಪವುದೆ ಕಲಸಿ ಕಿಟ್ಟಿದರೆ ನೆತ್ತರು ಕಟ್ಟಿ, ಬೇಗನೆ ಗಾಯ ಕೂಡುತ್ತು.

ಇಂದು ನಾವು ತಲೆಕಸವು ಉದ್ದ ಬಪ್ಪಲೆ ಪೇಟೆಯ ಬೇರೆ ಬೇರೆ ಹೆಸರಿನ ಶಾಂಪೂ ಉಪಯೋಗುಸುತ್ತು. ಅದರ ಬದಲು ದಾಸನ ಹೂಗಿನ ಪುರುಂಚಿ ಗೊಂಪು ಮಾಡಿ ತಲಗೆ ಹಾಕಿ ಮಿಂದರೆ ತಲೆಕಸವು ಉದ್ದಕೆ, ಚೆಂದಕೆ ಬತ್ತು.

 

ಅಜ್ಜಿಮದ್ದು ಹೇಳಿದರೆ ನಿತ್ಯ ಜೀವನಲ್ಲಿ ಒಂದು ವಿಶೇಷ ಸ್ಥಾನ ಇದ್ದು. ಅದು ಬರಿ ಸೆಸಿಗಳ, ನಾರಿನ, ಬೇರಿನ ಮಿಶ್ರಣ ಅಲ್ಲ. ಅದರ ಹಿಂದೆ ಅಜ್ಜಿಯಕ್ಕಳ ಒಂದು ವಿಶೇಷವಾದ ನಂಬಿಕೆಯಿಕ್ಕು. ಹಾಂಗಾಗಿ ಯಾವುದೇ ಒಂದು ರೋಗವನ್ನು ಗುಣಮಾಡ್ಸುವ ವಿಶೇಷ ಶಕ್ತಿಯು ಆ ಮದ್ದುಗೋಕ್ಕೆ ಇದ್ದತ್ತು. ಇಂದು ಕಾಲ ಬದಲಿದ್ದು. ನಮಗೆ ಎಂತಾದರೂ ಮದಾಲು ಕಾಂಬದು ಆಸ್ಪತ್ರೆಯ ಬಾಗಿಲೇ.

 

ಅಜ್ಜಿಮದ್ದಿನ ವಿವರ ಕೊಡ್ತಾ ಹೋದರೆ ಇನ್ನೂ ಸುಮಾರಿದ್ದು. ಇಂದ್ರಾಣ ಬದ್ಕಿನ ಓಟದ ಎಡೇಲಿ ಅಜ್ಜಿಮದ್ದಿನ ಸಂಸ್ಕೃತಿಯ ನಾವು ರಜಾ ಮೂಲೆಗೆ ಹಾಕುತ್ತಾಯಿದ್ದು ಹೇಳುದು ಬೇಜಾರದ ವಿಶಯವೇ. ಸಣ್ಣ ಸಣ್ಣ ವಿಶಯಕ್ಕೂ ದೊಡ್ಡ ದೊಡ್ಡ ವೈದ್ಯರ ಹತ್ತರೆ ಹೋಗಿಂಡು, ಅವು ಕೊಡುವ ಮಾತ್ರೆ ತಿಂದು, ಅದರ ಪಾರ್ಶ್ವಫಲ ಅನುಭವಿಸುದಕ್ಕಿಂತ ನಮ್ಮ ಹಿರಿಯರು ನಮಗೆ ಕೊಟ್ಟ ಆರೋಗ್ಯದ ಭದ್ರಕವಚದ ಹಾಂಗಿದ್ದ , ನಮ್ಮ ತೋಟ, ಗುಡ್ಡೆ, ಹಿತ್ತಿಲಿಲ್ಲೇ ಇಪ್ಪ ಸೊಪ್ಪು, ನಾರು, ಬೇರುಗಳ ತಂದು ಉಪಯೋಗಿಸಿ ನಮ್ಮ ಆರೋಗ್ಯ ರಕ್ಷಣೆ ಮಾಡ್ಲಕ್ಕು. ಆದರೆ ಅದರ ಸರಿಯಾದ ಗುರ್ತ ಹಿಡಿವಲೆ ಗೊಂತು ಬೇಕು. ಒಂದೇ ಹಾಂಗಿದ್ದ ಸೆಸಿಗೊ, ಸೊಪ್ಪುಗೊ, ಮರಂಗೊ ಇಪ್ಪಗ ಒಂದಕ್ಕೊಂದು ಬದಲಿ ಹೋಗದ್ದಾಂಗೆ ಜಾಗ್ರತೆ ಮಾಡೆಕು.

ನಮ್ಮೊಟ್ಟಿಂಗಿಪ್ಪ ಹಿರಿಯರತ್ರೆ ಹೀಂಗಿದ್ದ ವಿಶಯಂಗಳ ಕೇಳಿ ತಿಳ್ಕೊಂಡು ಹಳೇ ಕ್ರಮಂಗಳ ಒಳುಶುವ°.

 

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *