ವಿಧ್ಯಾರ್ಥಿ ವಿಕಸನ ಶಿಬಿರ ಮತ್ತು ಸಂತತಿ ಮಂಗಲ

ಗೋಶಾಲಾ

ಗೋಸ್ವರ್ಗ: ಶ್ರೀರಾಮದೇವ ಭಾನ್ಕುಳಿಮಠದಲ್ಲಿ ಸಿದ್ದಾಪುರ ಮಂಡಲದ ಮಾತೃವಿಭಾಗ ಮತ್ತು ವಿದ್ಯಾರ್ಥಿ ವಿಭಾಗದ ಸಂಯೋಜನೆಯಲ್ಲಿ ಮಂಡಲ ಮತ್ತು ಎಲ್ಲಾ ವಲಯಗಳ ಸಹಭಾಗಿತ್ವದಲ್ಲಿ ವಿಧ್ಯಾರ್ಥಿ ವಿಕಸನ ಶಿಬಿರ ಮತ್ತು ಸಂತತಿ ಮಂಗಲ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಮಹಾಮಂಡಲದ ಅಧ್ಯಕ್ಷರಾದ ಆರ್ ಎಸ್ ಹೆಗಡೆ ಮಾತನ್ನಾಡುತ್ತ ಶ್ರೀ ರಾಮಚಂದ್ರಾಪುರ ಮಠವು ಮಹಾಮಂಡಲ ವ್ಯಾಪ್ತಿಯಲ್ಲಿ ಪ್ರತೀ ಮಂಡಲದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ, ಪ್ರತೀ ಶಿಷ್ಯರು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದು ಹವ್ಯಕ ಧರ್ಮದ ಮಹತ್ವವನ್ನು ಅರಿತು ನಡೆಯಬೇಕಾಗಿದೆಯೆಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಶಿಕ್ಷಣ ಇಲಾಖೆಯ ಡಾ. ಶಂಕರ ಶಾಸ್ತ್ರಿ, ಪದವಿಪೂರ್ವ ಕಾಲೇಜು ಶಿರಸಿ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಅನಿತಾ ಭಟ್, ಎಕ್ಸೆಂಟ್ ಪಿಯು ಕಾಲೇಜ್ ಮೂಡುಬಿದಿರೆ ಗಣಪತಿ ಕೆ ಎಸ್ ಅವರು ಮಕ್ಕಳಿಗೆ ಮತ್ತು ಮಾತೆಯರಿಗೆ ಮಾರ್ಗದರ್ಶನ ಮಾಡಿದರು. ವಿದ್ಯಾರ್ಥಿಗಳಿಗೆ ಮತ್ತು ಮಾತೆಯರಿಗೆ ಸಂವಾದ ಕಾರ್ಯಕ್ರಮವು ನಡೆಯಿತು.

ಶ್ರೀ ಮಠದ ಆಡಳಿತ ಖಂಡದ ಶ್ರೀ ಸಂಯೋಜಕರಾದ ಪ್ರಮೋದ ಪಂಡಿತ್, ವಿ.ವಿ.ವಿ ಯ ಕೋಷಾಧ್ಯಕ್ಷರಾದ ರಮೇಶ ಗುಂಡುಮನೆ, ಮೂಡಬಿದಿರೆಯ ಶೈಲೇಶ್, ಸಿದ್ದಾಪುರ ಮಂಡಲದ ಹಾಗೂ ವಲಯಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಮಂಡಲದ ಅಧ್ಯಕ್ಷರಾದ ಸುಬ್ರಾಯ ಹೆಗಡೆ ಮಾತನಾಡುತ್ತಾ ಇಂತಹ ವಿಕಸನ, ಸಂತತಿಮಂಗಲದಂತಹ ಕಾರ್ಯಕ್ರಮಗಳ ಪ್ರಯೋಜನ ಎಲ್ಲಾ ಶಿಷ್ಯರು ಪಡೆದು ಸಮಾಜದ ಉನ್ನತಿಗೆ ಕಾರಣರಾಗಬೇಕು, ಶ್ರೀ ರಾಮಚಂದ್ರಾಪುರ ಮಠವು ಇಂತಹ ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದೆ, ಪ್ರಸ್ತುತ ಸಮಯದಲ್ಲಿ ಇವು ಅತ್ಯಾವಶ್ಯಕ ಎಂದರು.

ಕಾರ್ಯಕ್ರಮವು ಗೋಪೂಜೆ ಮತ್ತು ಶ್ರೀರಾಮದೇವರ ಪೂಜೆ ಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಮಗ್ರ ಕಾರ್ಯಕ್ರಮದ ಅವಲೋಕನ ಮಾಡಲಾಯಿತು. ಶ್ರೀಧರ ಹೆಗಡೆ ದಂಪತಿಗಳು ಸಭಾಪೂಜೆ ನಡೆಸಿದರು. ರಾಧಿಕಾ ಭಟ್ ಪ್ರಾಸ್ತಾವನೆಗೈದರು. ಪೂರ್ಣಿಮಾ ಭಟ್ ವಂದಿಸಿದರು.

Author Details


Srimukha

Leave a Reply

Your email address will not be published. Required fields are marked *