ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುಣ್ಯ ಯೋಜನೆ ಕಾಮದುಘಾದಡಿಯಲ್ಲಿ ಕಾರ್ಯಚರಿಸುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಜರಗುವ ಗೋಪೂಜೆ, ಗೋಪಾಲಕೃಷ್ಣ ಪೂಜೆ ಹಾಗೂ ಭಜನೆ ಸೋಮವಾರ ಸಾಯಂಕಾಲ ೬ ರಿಂದ ವೇ. ಮೂ. ಕೃಷ್ಣ ಭಟ್ಟ ಗುಂಡ್ಯಡ್ಕ ಇವರ ನೇತೃತ್ವದಲ್ಲಿ ಜರಗಿತು. ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸೇವೆಯು ಈ ಸಂಧರ್ಭದಲ್ಲಿ ಜರಗಿತು.