ಹೊಸಾಡ ಅಮೃತಧಾರಾ ಗೋಶಾಲೆಗೆ ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರು ಆಗಮಿಸಿ ಗೋಶಾಲೆಯನ್ನು ವೀಕ್ಷಿಸಿದರು.
ಅಪಘಾತಕ್ಕೊಳಗಾದ, ಮುದಿ ವಯಸ್ಸಿನ ಮತ್ತು ಕಸಾಯಿಖಾನೆಗೆ ಹೋಗುವ ಗೋವುಗಳನ್ನು ಸಂರಕ್ಷಿಸುತ್ತಿರುವ ಗೋಪಾಲಕರನ್ನು ಮತ್ತು ನಿರ್ವಹಿಸುತ್ತಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು.
ವಿಜಾಪುರದ ಗೋ ರಕ್ಷಾ ಕೇಂದ್ರ ಗೋಶಾಲೆಯಲ್ಲಿ ೬೫೦ ಕ್ಕೂ ಹೆಚ್ಚಿನ ಗೋವುಗಳನ್ನು ಸಂರಕ್ಷಿಸಲಾಗುತ್ತಿದ್ದು, ನಾಲ್ಕೈದು ಸಂಸ್ಥೆಗಳು ಸೇರಿ ಈ ಗೋಶಾಲೆಯನ್ನು ನಡೆಸುತ್ತಿದ್ದೇವೆ ರಾಮನ ಗೌಡ ಬಾಪು ಗೌಡ ಪಾಟೀಲ್ ಯತ್ನಾಳ ಅವರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಪ್ರತಿ ತಿಂಗಳು ೭ ಲಕ್ಷಕ್ಕೂ ಹೆಚ್ಚಿನ ನಿರ್ವಹಣಾ ವೆಚ್ಚ ತಗಲುತ್ತಿದೆ.
ಒಂದೊಂದು ಸಂಸ್ಥೆ ಒಂದೊಂದು ವಿಭಾಗದ ಖರ್ಚನ್ನಭರಿಸುತ್ತಾರೆ ಎಂಬ ಮಾಹಿತಿ ನೀಡಿದರು. ವಿಜಾಪುರದ ಅವರ ಗೋಶಾಲೆಗೆ ಬಂದು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿಕೊಂಡರು.