ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ.
೬ನೇ ತಿಂಗಳಿನ ಈ ಪೂಜಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ವೇದಮೂರ್ತಿ ಸತೀಶ್ ಭಟ್ ರವರು ವಿಧ್ಯಾರ್ಥಿಗಳಾದ ಭರತ ಹಾಗೂ ಶ್ರೀಹರ್ಷ ಇವರೊಂದಿಗೆ ಸಾಂಗವಾಗಿ ನೆರವೇರಿಸಿಕೊಟ್ಟರು. ಶಿವಮೊಗ್ಗದ ಗುರುರಾಜ್ (ನೆಪ್ಚೂನ್) ದಂಪತಿಗಳ ಯಾಜಮಾನತ್ವದಲ್ಲಿ ನಡೆದಿರುತ್ತದೆ.
ಸಮಿತಿಯ ಸದಸ್ಯರುಗಳಾದ ಮಳಲಿ ಅನಂತ ಭಟ್, ಶಂಕರನಾರಾಯಣ ಮಾಗಲು, ಶಂಕರ್ ಭಟ್ ಕಣಿವೆಬಾಗಿಲು, ನೆಲ್ಲುಂಡೆ ನಾಗೇಂದ್ರರಾಯರು ಇವರುಗಳೊಂದಿಗೆ ಗೋಲೋಕದ ಸಿಬ್ಬಂದಿಗಳು, ಗೋಪಾಲಕರು, ಶ್ರೀಮಠದ ವ್ಯವಸ್ಥಾಪಕರುಗಳು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.
ಈ ಹುಣ್ಣಿಮೆಯಂದು ೧೧೪ ಸೇವೆ ಸಂಪನ್ನಗೊಂಡಿದೆ. ಸಂಜೆ ೬:೦೦ ಗಂಟೆಗೆ ಪ್ರಾರಂಭವಾದ ಈ ಪೂಜೆ ಕಥಾ ಶ್ರವಣದ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆಯೊಂದಿಗೆ ರಾತ್ರಿ ೮:೩೦ ಕ್ಕೆ ಮುಕ್ತಾಯಗೊಂಡಿದೆ.