ಬಜಕೂಡ್ಲು ಅಮೃತಧಾರಾ ಗೋಶಾಲೆ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ “ಸೇವಾ ಅರ್ಘ್ಯ” ಕಾರ್ಯಕ್ರಮ ಅ.೧೧ ಮುಳ್ಳೇರಿಯಾ ಮಂಡಲ ಕುಂಬ್ಳೆ ವಲಯದ ನಾಣಿಹಿತ್ತಲು ಕೇಶವ ಪ್ರಸಾದ ಮನೆಯಲ್ಲಿ ಜರಗಿತು.
ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ವಿದ್ಯಾರ್ಥಿವಾಹಿನೀ ಪ್ರಧಾನ ಗುರುಮೂರ್ತಿ ಮೇಣ, ಮುಷ್ಟಿ ಭಿಕ್ಷೆ ವಿಭಾಗ ಪ್ರಧಾನ ಡಾ ಡಿ ಪಿ ಭಟ್, ಕುಂಬ್ಳೆ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ಟ, ನಾರಾಯಣ ಜಿ ಹೆಗಡೆ, ಮಹಾಬಲ ಶರ್ಮ, ವೆಂಕಟಕೃಷ್ಣ ಸಿ ಯಚ್, ಲಕ್ಷ್ಮಣ ಕುಮಾರ ಶ್ರಾವಣಕೆರೆ, ಅಕ್ಷಯ ಶರ್ಮ, ಅಶ್ವಿನಿ ನಾಣಿಹಿತ್ತಲು, ವಿದ್ಯಾರ್ಥಿಗಳಾದ ಅನನ್ಯ, ಅಕ್ಷಯ,ಅನಿರುದ್ದ ಇವರು ಶ್ರಮದಾನದಲ್ಲಿ ಭಾಗವಹಿಸಿದರು.