ಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯ ಮಾಡಲಿ – ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್

ಗೋಶಾಲಾ

ಗೋಸ್ವರ್ಗ: ಪ್ರಕೃತಿಯನ್ನು ಅರ್ಥಮಾಡಿಕೊಂಡು ಕೃಷಿ ಮಾಡುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಿಗೆ ದೇಸಿ ಮಣ್ಣಿನ ಸೊಗಡನ್ನು ಅರಿತುಕೊಳ್ಳಬೇಕು. ಪ್ರಶ್ನೆಯ ಜತೆಗೆ ಕ್ರಿಯೆ ಇದ್ದಾಗ ಕೃಷಿಯಲ್ಲಿ ಯಶಸ್ಸು ಕಾಣಬಹುದು. ಜ್ಞಾನಿಗಳು ಕೃಷಿ ಕ್ಷೇತ್ರದ ಕಡೆಗೆ ಒಲವು ತೋರಿಸಬೇಕು. ವಾರಾಂತ್ಯದ ಕಾರ್ಯಕ್ರಮಗಳನ್ನು ರೆಸಾರ್ಟ್ ನಲ್ಲಿ ಕಳೆಯುವ ಬದಲು ರೈತರ ಮನೆಗಳಲ್ಲಿ ಆಚರಣೆ ಮಾಡುವಂತಾಗಲಿ. ಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯವಾದಾಗ ಕೃಷಿ ಮುಂದೆ ಬರಲು ಸಾಧ್ಯ ಎಂದು ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್ ಹೇಳಿದರು.

ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ೧ರಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ದಾಪುರ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ ರೈತರು ಗುಂಪು ಮಾಡಿ ಗೊಬ್ಬರ ತಯಾರಿಸುವ ಮೂಲಕ ಸಿಟಿ ಕಾಂಪೋಸ್ಟ್ ಕಳಪೆ ಗುಣಮಟ್ಟದ ಗೊಬ್ಬರಗಳ ಬಳಕೆ ಕಡಿಮೆ ಮಾಡಬಹುದು. ಗ್ರಾಮೀಣ ಭಾಗದಲ್ಲಿ ಮಣ್ಣಿನ ಆರೋಗ್ಯ ಪರೀಕ್ಷೆ ಮಾಡುವ ಮೂಲ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಂಪ್ರದಾಯಿಕ ಕೃಷಿ ನಡೆಸುತ್ತಿದ್ದ ಸಮಯ ಉತ್ತಮ ಫಸಲು ಲಭಿಸುತ್ತಿತ್ತು. ಉತ್ತಮ ಇಳುವರಿ ನೀಡುವ ತಳಿಗಳನ್ನು ರೈತರು ಗುರುತಿಸಿ ಸಮಾಜಕ್ಕೆ ಪರಿಚಯಿಸು ಕಾರ್ಯಮಾಡಬೇಕು. ಸುಡು ಮಣ್ಣಿನ ಬಳಕೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಪ್ರಗತಿಪರ ಕೃಷಿಕ ಎ. ಪಿ. ಚಂದ್ರಶೇಖರ, ಕೃಷಿ ಪರಿಣಿತ ಶಿವಾನಂದ ಕಳವೆ ಅವರು ಅನುಭವವನ್ನು ಹಂಚಿಕೊಂಡರು. ಸಿದ್ದಾಪುರ ಹವ್ಯಕ ಮಂಡಲ ಅಧ್ಯಕ್ಷ ಸುಬ್ರಾಯ ಹೆಗಡೆ ಸಂಗೊಳ್ಳಿಮನೆ ಅಧ್ಯಕ್ಷತೆಯನ್ನು ವಹಿಸಿದ್ದರು. ನೈಸರ್ಗಿಕ ಕೃಷಿ ಪರಿಣಿತ ಬಂದಗದ್ದೆ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *