ಹೊಸಾಡುವಿನಲ್ಲಿ ಗೋ ಸಂಧ್ಯಾ

ಗೋಶಾಲಾ

ಹೊಸಾಡು ಅಮೃತಧಾರಾ ಗೋಬ್ಯಾಂಕ್ ಆರವರಣದಲ್ಲಿ ಫೆ.೮ರಂದು ಸಂಜೆ ೫ಗಂಟೆಗೆ ಗೋಪ್ರೇಮಿಗಳ ವಾರ್ಷಿಕ ಗೋ ಸ್ನೇಹಕೂಟ ಹಾಗೂ ಬೆಳದಿಂಗಳೂಟ ಕಾರ್ಯಕ್ರಮ ಗೋಸಂಧ್ಯಾ ಗೋವಿನತ್ತ ನಮ್ಮ ಚಿತ್ತ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆ ಗೌರವಾಧ್ಯಕ್ಷೆ ಭಾರತಿ ಪಾಟೀಲ ವಹಿಸಲಿದ್ದು, ಕುಮಟಾ – ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಭಟ್ಕಳ – ಹಿನ್ನಾವರ ಶಾಸಕ ಸುನೀಲ ನಾಯ್ಕ, ಯಲ್ಲಾಪುರ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಭಾಗವಹಿಸಲಿದ್ದಾರೆ.

ಲಾಸಾ ಸೂಪರ್ ಜೆನಿರಿಕ್ಸ್ ನಿರ್ದೇಶಕ ಎಸ್. ಜಿ. ಹೆಗಡೆ, ಗೋಪಾಲ ಡಾ. ವಿಷ್ಣು ಹೆಗಡೆ ಕಡ್ನೀರು ಅವರಿಗೆ ಸನ್ಮಾನ, ಗೋ ಬ್ಯಾಂಕಿಗೆ ನಗದು ನೀಡಿದವರಿಗೆ ಗೌರವ ಸಮರ್ಪಣೆ. ಗೋಪಾಲಕರಿಗೆ ಗೌರವ ಸಮರ್ಪಣೆ, ಗೋಶಾಲೆಯ ಆಜೀವ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ. ಎನ್ ಡಿ ಆರ್ ಐ ಮುಖ್ಯಸ್ಥ ಡಾ. ಕೆಪಿ ರಮೇಶ್ ಅವರಿಂದ ಭಾರತೀಯ ಗೋ ತಳಿಗಳ ವೈಜ್ಞಾನಿಕ ಮಹತ್ವದ ಕುರಿತು ಉಪನ್ಯಾಸ ನಡೆಯಲಿದೆ.

ಗೋಸಂಧ್ಯಾ ಎಂದರೆ..
ಗೋಮಾತೆ ಜಗದ ಜನನಿ. ಮನುಷ್ಯನ ಪ್ರತಿ ಹನಿ ರಕ್ತದ ಹಿಂದಿನ ಹಾಲು ಮೊಸರು ತುಪ್ಪ ಗಳ ಮಹಾ ಧಾರೆ. ವಸುಂಧರೆಯನ್ನು ಸಸ್ಯಶಾಮಲೆಯಾಗಿಸುವ, ಪರಿಸರ ಸಮತೋಲನದ ರೂವಾರಿ. ಗೋಮಾತೆ ಭಗವಂತನ ಅನುಪಮ ಸೃಷ್ಟಿ. ಮಾನವನ ಬಾಳ ಬೆಳಗುವ ಅಸೀಮ ಶಕ್ತಿ. ಕೋಟಿ ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ ಗೋಮಾತೆ ಯ ದರ್ಶನ ಮತ್ತು ಸಾಂಗತ್ಯ ಅತ್ಯಂತ ಪುಣ್ಯತಮ ವಾದುದು. ಅಂತಹ ಪುಣ್ಯ ಸಂಚಯನ ಕ್ಕಾಗಿ ತಮಗೆ ಮುಕ್ತವಾಗಿ ತೆರೆದಿಡುವ ಒಂದು ಪ್ರಯತ್ನವೇ ಗೋಸಂಧ್ಯಾ.

ಮಳಿಗೆ – ನಂದಗೋಕುಲ
ಕುಮಟಾ ಮಂಡಲದ ಮತ್ತು ವಲಯಗಳ ಸಹಕಾರದಲ್ಲಿ ಶುದ್ಧ ಸಾವಯವ ಆಹಾರ/ತಿಂಡಿ ಮಳಿಗೆಗಳು, ಗೋಗ್ರಾಸ ಕೌಂಟರ್, ಚಿಣ್ಣರಿಗೆ ಕರುಗಳ ಸಾಂಗತ್ಯ ಅಂದರೆ ನಂದಗೋಕುಲ, ನಡುವೆ ಎತ್ತರದ ಗೋವರ್ಧನ ಗಿರಿಧಾರಿ, ಕೃಷ್ಣನ ಮೂರ್ತಿ ಗೋಉತ್ಪನ್ನ ಗಳ ಮಳಿಗೆ ವಿಶೇಷವಾಗಿರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ಮೊದಲು ಶ್ರೀಧರ್ ಹೆಗಡೆ ಗಾನ ಮೂಲೆ ಅವರಿಂದ ಕೊಳಲು ವಾದನ ನಂತರ ರೇಷ್ಮಾ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪ್ರಗತಿ ವಿದ್ಯಾಲಯ ಮೂರೂರು ಹಾಗೂ ಸರಸ್ವತಿ ವಿದ್ಯಾ ಕೇಂದ್ರ ಕುಮಟಾದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Author Details


Srimukha

Leave a Reply

Your email address will not be published. Required fields are marked *