ಬಜಕೂಡ್ಲು ಅಮೃತಧಾರಾ ಗೋಶಾಲೆ ಗೋವಿಗೆ ಮೇವು

ಗೋಶಾಲಾ

ಬಜಕೂಡ್ಲು: ಗೋವಿನ ಮೇವಿಗಾಗಿ ಕಾರ್ಯಕ್ರಮದಡಿಯಲ್ಲಿ ಪಡಿಯಡ್ಪು ಮಹೇಶ ಭಟ್ ರ ಹಿತ್ತಲಿನ ಹಸಿ ಹುಲ್ಲನ್ನು ಕಟಾವು ಮಾಡಿ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನೀಡಲಾಯಿತು.

 

ಪೆರಡಾಲ ವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ನೇತೃತ್ವದಲ್ಲಿ ಗುರುವಂದನೆ, ಗೋವಂದನೆ ಯೊಂದಿಗೆ ಸೇವಾ ಅರ್ಘ್ಯ ನಡೆಯಿತು. ಮಹೇಶ ಭಟ್ ದಂಪತಿಗಳು ಕಾರ್ಯಕರ್ತರಿಗೆ ಉಪಾಹಾರದವ್ಯವಸ್ಥೆ ಮಾಡಿದರು. ಅಜಿತ್ ಅವರ ವಾಹನದಲ್ಲಿ ಬಜಕೂಡ್ಲು ಗೋಶಾಲೆಗೆ ಮೇವನ್ನು ಸಾಗಿಸಲಾಯಿತು.

 

ಗೋವಿನ ಮೇವಿನ ರೂವಾರಿ ರಾಮಚಂದ್ರಾಪುರ ಮಠದ ಕಾಮದುಘ ಕಾರ್ಯದರ್ಶಿ ವೈ ವಿ ಕೃಷ್ಣ ಮೂರ್ತಿ, ಗೋಕರ್ಣ ಮಂಡಲ ಮಾತೃತ್ವಂ ಅಧ್ಯಕ್ಷ ಈಶ್ವರಿ ಶ್ಯಾಮ್ ಭಟ್, ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರ್ಮುಖ, ಪೆರಡಾಲ ವಲಯ ಕಾರ್ಯದರ್ಶಿ ವಿಷ್ಣು ಪ್ರಸಾದ ಕೋಳಾರಿ, ಉಪಾಧ್ಯಕ್ಷ ಶ್ರೀಕೃಷ್ಣ ಭಟ್ ಮಡಿಪ್ಪು, ಕಾಸರಗೋಡು ವಲಯ ಅಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್,ಗೋಪ್ರೇಮಿಗಳಾದ ಶಾಮ ಭಟ್ ಬೇರ್ಕಡವು, ಡಾ.ಮಾಲತಿಪ್ರಕಾಶ, ಶಂಕರನಾರಾಯಣ ಭಟ್ಟ ಬೋಳುಂಬು, ಶಿವರಾಮ ಭಟ್ ಭರಣ್ಯ, ವೇಣುಗೋಪಾಲ ಬೊಳುಂಬು, ಪೆರ್ವ ಕೃಷ್ಣ ಭಟ್ಟ ಶಂಕರ ಭಟ್ಟ ಪಡಿಯಡ್ಪು, ಮಾತೆಯರಾದ ಕಿರಣ ಮೂರ್ತಿ, ಶಾಂತಾ ಈಂದುಗುಳಿ, ಜಯಶ್ರೀ ಮೈರ್ಕಳ, ಉಪ್ಪಂಗಳ ವಿದ್ಯಾಗೌರಿ, ಶ್ರೀಲತಾ ಪಡಿಯಡ್ಪು, ಅಚಲ ಸಹಕರಿಸಿದರು.

Author Details


Srimukha

Leave a Reply

Your email address will not be published. Required fields are marked *