ಗೋಲೋಕ: ಗೋವರ್ಧನಗಿರಿ ಎತ್ತಿ ಗೋಪಾಲಕರನ್ನು ಗೋಕುಲವನ್ನು ರಕ್ಷಣೆ ಮಾಡಿದ ಶ್ರೀಕೃಷ್ಣ, ಗೋವರ್ಧನಗಿರಿಧಾರಿ ಎಂಬ ಹೆಸರನ್ನು ಪಡೆದದ್ದು ಕಾರ್ತಿಕ ಶುದ್ದ ಅಷ್ಟಮೀ ದಿನದಂದು. ಗೋಪಾಷ್ಟಮೀ ಎಂದು ಕರೆಯಲ್ಪಡುವ ಆ ದಿನದ ಆಚರಣೆಯು ನ.೪ನೇ ಸೋಮವಾರ ನೆರೆವೇರಿತು.
ಗೋಮಯದಿಂದ ನಿರ್ಮಿಸಿದ ಗೋವರ್ಧನಗಿರಿಯನ್ನು ಅಲಂಕರಿಸಿ ಪೂಜಿಸುವುದರೊಂದಿಗೆ ದೀಪಗಳನ್ನು ಬೆಳಗಿಸಿ ದೀಪೋತ್ಸವವನ್ನೂ ಕೂಡ ಆಚರಿಸಲಾಯಿತು. ನಿರ್ವಾಹಕರಾದ ರಾಮಚಂದ್ರ ಭಟ್, ಸುಬ್ರಹ್ಮಣ್ಯ ಭಟ್ ಹೆದ್ಲಿ, ಅಶೋಕ ಹೆಗಡೆ, ರತ್ನಾಕರ್ ಭಟ್ ಮಳಲಿ, ಸದಾಶಿವ ಆಚಾರ್ ಹಾಗೂ ಗೋಪಾಲಕರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರು. ವೇದಮೂರ್ತಿ ವಿದ್ವಾನ್ ಸತೀಶ್ ಭಟ್ ಪೂಜಾ ಕಾರ್ಯ ನೆರೆವೇರಿಸಿದರು.