ಗೋಆಶ್ರಮದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೋಪ್ರೇಮಿಗಳು

ಗೋಶಾಲಾ

ಮಾಲೂರು: ಬೆಂಗಳೂರು ನಗರದ ಎಚ್. ಬಿ. ಆರ್. ಬಡಾವಣೆಯ ಸುತ್ತಮುತ್ತಲಿನ ಗೋ ಪ್ರೇಮಿಗಳು ಗೋಆಶ್ಧಾರಮಕ್ಕೆ ಬೇಟಿ ನೀಡಿ ಗೋದಾನ‌, ಗೋಪೂಜೆ ಮಾಡಿ ಗೋಗ್ರಾಸ ನೀಡಿದರು.

ಗೋಪೂಜೆಯ ನೇತೃತ್ವವ್ವನ್ನು ವಹಿಸಿದ ವೇ. ಮೂ. ಗೋಪಾಲಕೃಷ್ಣ ಕಾಕತ್ಕರ್ ಅವರು ಗೋಪೂಜೆಯ ಮಹತ್ವದವನ್ನು ವಿವರಿಸಿದರು. ಗೋಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ್ ಗೋಶಾಲೆಯ ಹಾಗೂ ಭಾರತೀಯ ಗೋತಳಿಗಳ ಮಾಹಿತಿಯನ್ನು ನೀಡಿದರು. ಗೌವ್ಯ ಉತ್ಪನ್ನಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಗೋಪ್ರೇಮಿಗಳು ಮರೆಯಾಗುವ ದೇಸೀ ಆಟಗಳ ಪರಿಚಯ ಮಾಡುವ ಜತೆಗೆ ಎಲ್ಲರೂ ಆಡಿ ಸಂತಸಪಟ್ಟರು. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಗ್ಗೆ ಅನುಭವಗಳನ್ನು ಗೋಪ್ರೇಮಿಗಳು ಹಂಚಿಕೊಂಡರು. ಗೋಶಾಲೆಯ ವತಿಯಿಂದ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಯಿತು.

ಗೋಪ್ರೇಮಿಯಾದ ಔಷಧಿ ವಿತರಕ ಸಯ್ಯದ್ ಅವರು ೫೦೦ ಹೆಚ್ಚು ಅಭಯಾಕ್ಷರ ಸಂಗ್ರಹ ಮಾಡಿದ್ದು, ಗೋಧನ ಹುಂಡಿಯಿಟ್ಟು ಗೋಸೇವೆಯಲ್ಲಿ ತೊಡಗಿದ ಕಾರಣಕ್ಕೆ ಸನ್ಮಾನಿಸಲಾಯಿತು.

ಗೋಪ್ರೇಮಿಗಳಾದ ಬೆಂಗಳೂರಿನ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ನಾಗರತ್ನ, ಖ್ಯಾತ ಮಧುಮೇಹ ತಜ್ಞೆ ಡಾ. ಅರುಣಾ, ಕುಟುಂಬ ವೈದ್ಯೆ ತೃಪ್ತಿ ಕುಲಕರ್ಣಿ, ಸ್ವಾವಲಂಬಿ ಉದ್ಯಮಿ ರಜನಿಕಾಂತ್, ನಿವೃತ್ತ ಔಷಧಿ ನಿಯಂತ್ರಣ ಅಧಿಕಾರಿ ಪಾಂಡುರಂಗ ಶೆಟ್ಟಿ, ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ, ವಕೀಲರು, ಜ್ಯೋತಿಷಿಗಳು, ಬ್ಯಾಂಕ್ ಅಧಿಕಾರಿಗಳು ಸೇರಿ ೨೦೦ ಕ್ಕೂ ಅಧಿಕ ಗೋಪ್ರೇಮಿಗಳು ಉಪಸ್ಥಿತರಿದ್ದರು.

ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹೆಗಡೆ, ವಿಶೇಷ ಕರ್ತವ್ಯ ಅಧಿಕಾರಿ ರಾಮಚಂದ್ರ ಅಜ್ಜಕಾನ, ಗೋಶಾಲೆಯ ಕೃಷ್ಣ ಭಟ್, ಮಂಜುನಾಥ ಭಟ್, ಶ್ರೀನಿವಾಸ, ಕಿರಣ್, ಅನಂತ ಹೆಗಡೆ, ಮಾಗೋ ಪ್ರಾಡಕ್ಟ್ಸ್ ನ ಶಿವಕುಮಾರ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *