ಗೋವಿಗಾಗಿ ಮೇವು ಮೇವಿಗಾಗಿ ನಾವು

ಗೋಶಾಲಾ

ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಆಹಾರದ ಪೂರೈಕೆಗಾಗಿ ಗೋವಿಗಾಗಿ ಮೇವು – ಸೇವಾ ಅರ್ಘ್ಯ – ಶ್ರಮಾದಾನ ಕಾರ್ಯವು ಮುಳ್ಳೇರಿಯಾ ಹವ್ಯಕ ಮಂಡಲದ ಕುಂಬ್ಳೆ ವಲಯದ ಕಳತ್ತೂರು ಕಾರಿಂಜ ಹಳೆಮನೆ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಗುರುವಂದನೆ, ಗೋವಂದನೆಯೊಂದಿಗೆ ನ.೧೭ ನಡೆಯಿತು.

ಮುಳ್ಳೆರಿಯ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಗುರುಮೂರ್ತಿ ಮೇಣ ಇವರು ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಮಾತೃತ್ವಂ ವಿಭಾಗದ ಕಂಬಾರು ಘಟಕದ ಸಂಚಾಲಕಿ ಸುಲೋಚನಾ ಬೆಜಪ್ಪೆಯ ನೇತೃತ್ವದಲ್ಲಿ ಹುಲ್ಲಿನ ಕಟಾವು ಮಾಡುವ ಕೆಲಸ ಪ್ರಾರಂಭ ಮಾಡಲಾಯಿತು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘದ ರಾಮ, ಬಾಬು, ಜಯಂತಿ, ಹರಿಣಾಕ್ಷಿ, ಬೇಬಿ, ಸರಸ್ವತಿ, ಕುಸುಮ ಸಹಕರಿಸಿದರು. ಮಾತೃತ್ವಂ ವಿಭಾಗದ ಅಧ್ಯಕ್ಷೆ ಈಶ್ವರೀ ಶ್ಯಾಮ ಭಟ್ ಬೇರ್ಕಡವು, ಮಂಡಲದ ಸಂಘಟನಾಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ, ಗೋಶಾಲೆ ಕಾರ್ಯದರ್ಶಿ ಶ್ರೀಧರ ಭಟ್ ಗೋಬಂಧುಗಳಾದ ಶಂಕರನಾಯಣನ್ ಗುಂಪೆ, ಶಿವರಾಮ ಭಟ್ ಕಾರಿಂಜ, ರಾಮ ಭಟ್ ಕಾರಿಂಜ, ಡಾ.ಮಾಲತಿಪ್ರಕಾಶ, ಡಾ.ಪ್ರಕಾಶ, ರಮೇಶಭಟ್ ವೈ ವಿ ವಿದ್ಯಾನಗರ, ಸವಿತಾ ಆರ್ ಭಟ್, ಮಹೇಶ ಮನ್ನಿಪಾಡಿ, ಚಂದ್ರಾವತಿ ಮನ್ನಿಪಾಡಿ, ಕಿರಣಾಮೂರ್ತಿ ಬದಿಯಡ್ಕ, ಈಶ್ವರಭಟ್, ಶ್ರೀರಾಮಶರ್ಮ, ಶಾರದೆ, ಜಾಹ್ನವಿ, ಉಷಾ ಶಿವರಾಮ ಭಟ್ ಕಾರಿಂಜ ಇವರು ಸಹಕರಿಸಿದರು. ಬೆಜಪ್ಪೆ ಚಂದ್ರಶೇಖರ ಭಟ್ಟ, ಕಾರಿಂಜ ಶಿವರಾಮ ಹುಲ್ಲು ಕಟಾವು ಯಂತ್ರ ನೀಡಿದರು. ಕಾರಿಂಜ ಗೋಪಾಲಕೃಷ್ಣ ಭಟ್ ಮನೆಯವರು ಕಾರ್ಯಕರ್ತರಿಗೆ ಉಪಾಹಾರ ವ್ಯವಸ್ಥೆಯನ್ನು ಮಾಡಿದರು.

ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಅವರು ಪುತ್ರ ಶ್ರೀರಾಮ ಶರ್ಮನ ಜನ್ಮದಿನದ ಅಂಗವಾಗಿ ಗೋಶಾಲೆಗೆ ಸಾಗಟದ ವೆಚ್ಚವನ್ನು ವಹಿಸಿ ಸಹಕರಿಸಿದರು.

Author Details


Srimukha

Leave a Reply

Your email address will not be published. Required fields are marked *