ಗೋಸ್ವರ್ಗ: ಶ್ರೀಸಂಸ್ಥಾನ ಗೌಡಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶ ಶ್ರೀ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಗಳು ಗೋಸ್ವರ್ಗಕ್ಕೆ ಚಿತ್ತೈಸಿದ್ದರು.
ಶ್ರೀಗಳು ಗೋಮಾತೆಗೆ ಗ್ರಾಸ ಸಮರ್ಪಿಸಿ, ಗೋಸ್ವರ್ಗದ ಸಂಪೂರ್ಣ ಮಾಹಿತಿ ಪಡೆದು ಕಾರ್ಯವೈಖರಿಯ ಕುರಿತು ಶುಭ ಹಾರೈಸಿದರು.ಯತಿಗಳೊಂದಿಗೆ ಸಿದ್ಧಾಪುರದ ಜಿ.ಎಸ್.ಬಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆಗಮಿಸಿದ ಯತಿಗಳನ್ನು ಗೋಸ್ವರ್ಗದ ವತಿಯಿಂದ ಪೂರ್ಣಕುಂಭದೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.
ಶ್ರೀರಾಮದೇವ ಸನ್ನಿಧಿಯಲ್ಲಿ ಮಂಗಳಾರತಿ ನೆರವೇರಿಸಿ, ಫಲ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಸಮಾಜಬಾಂಧವರ ಆಶಯದಂತೆ ದೇಶೀಗೋವಿನ ಪರಿಶುದ್ಧ ತಾಜಾ ಹಾಲನ್ನು ಸಮರ್ಪಿಸಲಾಯಿತು. ಈಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಆರ್.ಎಸ್.ಹೆಗಡೆ ಹರಗಿ, ಸಿದ್ಧಾಪುರಮಂಡಲದ ಅಧ್ಯಕ್ಷರಾದ ಸುಬ್ರಾಯ ಹೆಗಡೆ ಸುಂಗೊಳ್ಳಿಮನೆ ಗೋಸ್ವರ್ಗದ ಪದಾಧಿಕಾರಿಗಳು, ಸಿಬ್ಬಂದಿಗಳು, ಗೋಪ್ರೇಮಿಗಳು ಉಪಸ್ಥಿತರಿದ್ದರು.