ಮೇವು ಸಂಸ್ಕರಣಾ ಘಟಕ ಲೋಕಾರ್ಪಣೆ

ಗೋಶಾಲಾ

ಗೋವುಗಳನ್ನು ತಮ್ಮ ಮನೆಯ ಸದಸ್ಯರಂತೆ, ಗೋಪಾಲಕರನ್ನು ತಮ್ಮ ಮಕ್ಕಳಂತೆ ಕಾಣುವ ಅಪರೂಪದ ಅಪ್ಪಟ ಗೋಪ್ರೇಮಿ ಮತ್ತು ಭಾರತೀಯ ಗೋತಳಿಯ ಮಹಾಸಂರಕ್ಷಕರಾದ ಹೊಸಾಡ ಗೋಶಾಲೆಯ ಮಾನ್ಯ ಗೌರವಾಧ್ಯಕ್ಷರಾದ ಹುಬ್ಬಳ್ಳಿಯ ಭಾರತಿ ಗಂಗಾಧರ ಪಾಟೀಲ್ ಮತ್ತು ಕುಟುಂಬದವರ ಆರ್ಥಿಕ ನೆರವಿನೊಂದಿಗೆ ರೂಪಿತವಾದ ಬಾಲ ಮುಕುಂದ ಕೃಪಾ ಹೆಸರಿನ ನೂತನ ಮೇವು ಸಂಸ್ಕರಣಾ ಘಟಕವು ಕಾಮಧೇನುವಿನ ವಿಶೇಷ ಪೂಜೆಯೊಂದಿಗೆ ಗೋಪಾಲಕರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

ವಯಸ್ಸಾದ ಮತ್ತು ಸಣ್ಣ ವಯಸ್ಸಿನ ಗೋವುಗಳಿಗೆ ಹಸಿರು ಹುಲ್ಲುಗಳ ಸತ್ವವನ್ನು ಸಂಪೂರ್ಣವಾಗಿ ಸೇವಿಸಲು ಸುಲಭವಾಗುವಂತೆ ಹಸಿರು ಹುಲ್ಲಿನ ದಂಟುಗಳನ್ನ ಯಂತ್ರದ ಮೂಲಕ ಕತ್ತರಿಸಿ ಕೊಡಲಾಗುತ್ತಿತ್ತು. ಇದನ್ನು ಗಮನಿಸಿ ತಮ್ಮದೇ ಖರ್ಚು ಭರಿಸಿ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಿ, ಗೋಪಾಲನೆಯನ್ನು ಸುಗಮವಾಗಿಸಿ ಕಾಮಧೇನುವಿನ ಕೃಪೆಗೆ ಪಾತ್ರರಾದರು.

ವಿಶೇಷ ಸಿಹಿಯೂಟ:
ತಮ್ಮ ಮನೆಯ ಸದಸ್ಯರೊಬ್ಬರ ಜನ್ಮದಿನದ ಪ್ರಯುಕ್ತ ಬಹು ದೂರದಲ್ಲಿದ್ದರೂ ಗೋಶಾಲೆಯ ಗೋಪಾಲಕರಿಗೆ ತಮ್ಮದೇ ಖರ್ಚಿನಲ್ಲಿ ಸಿಹಿಯೂಟ ವನ್ನು ಆಯೋಜಿಸಿ ಆದರ್ಶ ಗೋಪ್ರೇಮವನ್ನು ಮೆರೆದರು. “ಕೋವಿಡ್- ೧೯ ಇಂದ ಕಳೆದ ನಾಲ್ಕೈದು ತಿಂಗಳಿಂದ ಲಾಕ್ ಡೌನ್ ನಂತಹ ಆಪತ್ಕಾಲದ ಪರಿಸ್ಥಿತಿಯಲ್ಲೂ ಗೋಪಾಲನೆಯಲ್ಲಿ ಎಲ್ಲಿಯೂ ತೊಡಕಾಗದ ರೀತಿಯಲ್ಲಿ ಅಚ್ಚುಕಟ್ಟಾಗಿ ನಿತ್ಯ ನಿರಂತರವಾಗಿ ೩೦೦ ಕ್ಕಿಂತಲೂ ಹೆಚ್ಚಿನ ಗೋವುಗಳ ಸೇವೆ ಮಾಡುತ್ತಿರುವ ವ್ಯವಸ್ಥಾಪಕರು ಮತ್ತು ಗೋಪಾಲಕರ ಸೇವೆ ನಿಜಕ್ಕೂ ಸಮಾಜಕ್ಕೆ ಆದರ್ಶ; ಜಗಜ್ಜನನಿಯಾದ ಕಾಮಧೇನು ಅವರಿಗೆ ಆಯುಷ್ಯ ಆರೋಗ್ಯ ನೀಡಿ ಅವರ ಜೀವನ ಸುಖಮಯವಾಗಿರಲಿ” ಎಂದು ಪ್ರಾರ್ಥಿಸಿದ್ದಾರೆ.

Author Details


Srimukha

Leave a Reply

Your email address will not be published. Required fields are marked *