ಗೋಸ್ವರ್ಗ: ಸಿದ್ದಾಪುರ ಮಂಡಲದ ಮಾತೃವಿಭಾಗದಿಂದ ಗೋ ಪೂಜೆ ಹಾಗೂ ಕಾರ್ತೀಕ ದೀಪೋತ್ಸವ ಗಜಾನನ ಶಾಸ್ತ್ರೀಗಳವರ ನೇತೃತ್ವದಲ್ಲಿ ನಡೆಯಿತು.
ಮಂಡಲದ ಮಾತೃಪ್ರಧಾನೆ ರಾಧಿಕಾ ಮತ್ತು ಗಜಾನನ ಭಟ್ಟ ದಂಪತಿಗಳು ಯಜಮಾನರಾಗಿ ಸಂಕಲ್ಪದಲ್ಲಿ ಪಾಲ್ಗೊಂಡರು. ಮಾತೃವಿಭಾಗದಿಂದ ಗೋವಿಗೆ ಹಿಂಡಿ ಚೀಲವೊಂದನ್ನು ಸಮರ್ಪಿಸಿಲಾಯಿತು.
ಮಂಡಲದ ಅಧ್ಯಕ್ಷರಾದ ಸುಬ್ರಾಯ ಹೆಗಡೆ, ಕಾರ್ಯದರ್ಶಿ ಹರ್ಷಾ ಭಟ್ಟ. ಸಂಘಟನಾ ಕಾರ್ಯದರ್ಶಿ ಎಮ್ ಎಮ್ ಹೆಗಡೆ ಮಗೇಗಾರ, ಹಿರಿಯ ಮಾತೆ ಚಂದ್ರಮತಿ ಆರ್ ಹರ್ಗಿ, ಹಾಗೂ ವಲಯದ ಮಾತೃಪ್ರಧಾನರು ಹಾಗೂ ಮಾತೃತ್ವಮ್ ಸಾಗರ ಪ್ರಾಂತ್ಯ ಅಧ್ಯಕ್ಷೆ ವೀಣಾ ಭಟ್ಟ ಪಾಲ್ಗೊಂಡರು.
ಶಿರಸಿಯ ಜಾನಕಿ ಮತ್ತು ಸಂಗಡಿಗರು ಬೆಳಿಗ್ಗೆ ಭಜನೆ ಸೇವೆಯನ್ನು ಮಾಡಿದರು. ಹಿಂದು ಪ್ರತಿಷ್ಠಾನ ಮಾತೃಮಂಡಳಿ ಶಿರಸಿ ಅವರು ಸಂಜೆ ೫ ಗಂಟೆಯಿಂದ ೬.೩೦ ರ ವರೆಗೆ ಗೋವಿಗಾಗಿ ಗೋಪಾಲನ ಹಾಗೂ ಗೋವಿನ ಭಜನೆಯನ್ನು ಪ್ರಸ್ತುತಪಡಿಸಿದರು. ಗೋಗಂಗಾರತಿ ಬೆಳಗಿ, ಗೋ ದೀಪೋತ್ಸವದ ಸೇವೆಯನ್ನು ಮಾಡಲಾಯಿತು.