ಮಾಲೂರು: ಬೆಂಗಳೂರು ಎಸ್‌ಎಪಿ ಲ್ಯಾಬ್‌ನ ತಂತ್ರಜ್ಞರು ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಶ್ರೀರಾಘವೇಂದ್ರ ಗೋಆಶ್ರಮಕ್ಕೆ 1.25 ಲಕ್ಷಕ್ಕೂ ಅಧಿಕ ಮೊತ್ತದ ಪಶು ಆಹಾರವನ್ನು ನೀಡಿದರು.
ಕಾಮದುಘಾ ಟ್ರಸ್ಟ್ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಮಾತನಾಡಿ ಭಾರತೀಯ ಗೋ ತಳಿಗಳನ್ನು ಉಳಿಸುವ ಕಾರ್ಯ ನಮ್ಮೆಲ್ಲರಿಂದ ನಡೆಯಬೇಕಾಗಿದೆ. ದೇಶೀಯ ತಳಿಯಲ್ಲಿ ಸಿಗುವ ಎ2 ಹಾಲಿನಲ್ಲಿ ಔಷಧೀಯ ಗುಣಗಳಿದ್ದು, ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಎಂದರು.
ಸುಮಾರು 40ಕ್ಕೂ ಅಧಿಕ ತಂತ್ರಜ್ಞರು ಗೋಶಾಲೆಯ ಸ್ವಚ್ಛತೆ, ಆವರಣದ ಕಳೆ ಕೀಳುವ ಶ್ರಮ ಸೇವೆ ಮಾಡಿದರು. ದೇಶೀ ಗೋ ತಳಿಗಳ ವಿಶೇಷತೆಯ ಮಾಹಿತಿ ಪಡೆದುಕೊಂಡರು.
ಎಸ್‌ಎಪಿ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಿಎಸ್ ಆರ್ ಯೋಜನೆಯ ಮೂಲಕ ನೀಡಲಾದ 58 ಚೀಲ ಹಿಂಡಿ, 58 ಚೀಲ ಬೂಸಾ, 10 ಚೀಲ ಹತ್ತಿಕಾಳಿನ ಹಿಂಡಿಯನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಎಸ್‌ಎಪಿ ಲ್ಯಾಬ್ ಪ್ರೈವೇಟ್ ಲಿಮಿಟೆಡ್‌ನ ರಾಜೇಶ್, ಸುಷ್ಮಾ, ಪವನ್, ಹೋಮ್ ಪೌಂಡೇಶನ್ ನ ದೊರೈ, ಗೋಆಶ್ರಮದ ರಾಮಚಂದ್ರ ಅಜ್ಜಕಾನ, ಕೃಷ್ಣ ಭಟ್, ಲಕ್ಷ್ಮೀಶ, ಅನಂತ ಹೆಗಡೆ ಹಾಜರಿದ್ದರು.