ಗೋವಿಗಾಗಿ ಮೇವು – ಮೇವಿಗಾಗಿ ನಾವು

ಗೋಶಾಲಾ

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗಾಗಿ ಹರಿಹರಭಜನಾಮಂದಿರ ಮಾಡತ್ತಡ್ಕದ ಪರಿಸರದಲ್ಲಿ ಹಿರಿಯರಾದ ಮಿಂಚಿನಡ್ಕ ಗೋವಿಂದ ಭಟ್ಟರ ನೇತೃತ್ವದಲ್ಲಿ ಅ.೨೭ರಂದು ಮೂರನೆಯ ಗೋವಿಗೆಮೇವು ಕಾರ್ಯಕ್ರಮ ನಡೆಯಿತು.

 

ಹರಿಹರ ಭಜನಾ ಸದಸ್ಯರರಾದ ಮಾಡತಡ್ಕ ಪ್ರವೀಣ ಕುಮಾರ ಯಂ, ಸಂತೋಷ ಆಣಬೈಲು, ಶಿವಪ್ರಸಾದ ಎ, ವೇಣುಗೋಪಾಲ ಮತ್ತು ವಾಹನ ಚಾಲಕ ಸತೀಶ ಯಂ. ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಸಹಾಯ ಪ್ರಧಾನ ಮಹೇಶ ಸರಳಿ, ಪೆರಡಾಲ ವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಉಪಾಧ್ಯಕ್ಷ ಶ್ರೀ ಕೃಷ್ಣ ಭಟ್, ಸೇವಾ ಪ್ರಧಾನ ಮಿಂಚಿನಡ್ಕ ಪುರುಷೋತ್ತಮ ಭಟ್, ಕಾಸರಗೋಡು ವಲಯ ಅಧ್ಯಕ್ಷ ಅರ್ಜುನಗುಳಿ ಯಸ್.ಯನ್. ಭಟ್, ವಿದ್ಯಾರ್ಥಿಗಳಾದ ಶ್ರೀ ರಾಮ ಎಡಕ್ಕಾನ, ಅಭಿರಾಮ, ತೇಜಸ್ವಿ, ಶಾಮ ಭಟ್ ಬೇರ್ಕಡವು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

ಹರಿಹರಭಜನಾ ಸಂಘದ ಗೋವಿಂದ ಭಟ್ಟರು ಮತ್ತು ಸದಸ್ಯರು ಗೋಶಾಲೆಗೆ ಹುಲ್ಲುನ್ನು ತಲಪಿಸಿದರು. ಗೋಶಾಲೆಯ ಪದಾಧಿಕಾರಿಗಳು ಹರಿಹರ ಭಜನಾ ಸಂಘದ ಸದಸ್ಯರನ್ನು ಗೌರವಿಸಿದರು.

Author Details


Srimukha

Leave a Reply

Your email address will not be published. Required fields are marked *