ವಾಲ್ಮೀಕಿ ರಾಮಾಯಣ ಪಾರಾಯಣ

ಇತರೆ

ಸಾಗರ: ಜೀವನ ಅರ್ಥವಾಗಲು, ಸಾರ್ಥಕವಾಗಲು ರಾಮಾಯಣ ಮಹಾಕಾವ್ಯ ಮಾರ್ಗದರ್ಶಕ ಎಂದು ಮಹಾಮಂಡಲ ವೈದಿಕ ಪ್ರಧಾನ ವೇದಮೂರ್ತಿ ನೀಲಕಂಠಯಾಜಿ ಹೇಳಿದರು.

ಇಲ್ಲಿನ ಬನ್ನಿಕಟ್ಟೆ ರಸ್ತೆಯ ಶ್ರೀರಾಘವೇಶ್ವರ ಸಭಾಭವನದಲ್ಲಿಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿಯವರ 1008 ವಾಲ್ಮೀಕಿ ರಾಮಾಯಣ ಪಾರಾಯಣ ಸಂಕಲ್ಪದ ಅಂಗವಾಗಿ ಹಮ್ಮಿಕೊಂಡ 21 ವೈದಿಕರಿಂದ ಪಾರಾಯಣ ಮಹಾಪರ್ವದ ಮಂಗಲೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿಅವರು ಸಮಾರೋಪ ಭಾಷಣ ಮಾಡಿದರು.

ವಿದ್ವಾನ್‌ ಎನ್‌.ಎಸ್‌.ಗಣಪತಿಭಟ್‌ ಮಾತನಾಡಿದರು. ವಾಲ್ಮೀಕಿ ಮಹಾಗ್ರಂಥಕ್ಕೆ ಸಾಮೂಹಿಕ ಮಂಗಳಾರತಿ ಮಾಡಲಾಯಿತು. ಸಭಾಭವನದ ಅಧ್ಯಕ್ಷ ಹರನಾಥ್‌ ರಾವ್‌ ಮತ್ತಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಗರ ಹವ್ಯಕ ಮಂಡಲದ ವೈದಿಕ ಪ್ರಧಾನ ಸಮರ್ಥ ಭಟ್‌ ಮಂಕಳಲೆ, ವೇ.ಗಣಪತಿಭಟ್‌ ಸೇರಿದಂತೆ 21 ಪಾರಾಯಣಕರ್ತರು ಪಾರಾಯಣ ಮಹಾಯಜ್ಞದಲ್ಲಿಭಾಗವಹಿಸಿದ್ದರು.

ಸಿ.ಎಸ್‌. ಗಣಪತಿ ಕಾರ್ಯಕ್ರಮದ ಯಜಮಾನರಾಗಿದ್ದರು. ಮಹಾಮಂಡಲದ ಪದಾಧಿಕಾರಿಗಳು, ಸುಬ್ರಹ್ಮಣ್ಯ ವೆಂಕಟರಾವ್‌ ಕಾನಗೋಡು, ನಾರಾಯಣ ಭಟ್‌ ಖಂಡಿಕಾ ಇತರರು ಇದ್ದರು. ವಸುಧಾ ಶರ್ಮ ಮಂಗಳ ಭಜನೆ ನಡೆಸಿಕೊಟ್ಟರು. ಮುರುಳಿ ಹೊಸ್ಮನೆ ನಿರ್ವಹಿಸಿದರು.

Author Details


Srimukha

Leave a Reply

Your email address will not be published. Required fields are marked *