ಮಾಲೂರು: ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಗೋಪೂಜೆ ಕಾರ್ಯಕ್ರಮ ವೇ.ಮೂ. ಗೋಪಾಲಕೃಷ್ಣ ಕಾಕತ್ಕರ್ ಅವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಸಲಾಯಿತು.
ಬೆಳಗ್ಗೆ ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಸಹಿತ ಪೂಜೆ ನಡೆಯಿತು. ನಂತರ ಸುಮಾರು ಇನ್ನೂರಕ್ಕೂ ಹೆಚ್ಚು ಗೋಭಕ್ತರ ಸಮ್ಮುಖದಲ್ಲಿ ದೀಪಾವಳಿ ಗೋಪೂಜೆ ನಡೆಯಿತು.
ಮೂವತ್ಮೂರು ಕೋಟಿ ದೇವತೆಗಳ ಆವಾಸಸ್ಥಾನ ಸವತ್ಸ ಗೋವನ್ನು ಅಲಂಕೃತ ಮಂಟಪದಲ್ಲಿ ಪೂಜಿಸಲಾಯಿತು. ಗೋಪೂಜೆಯ ಮಹತ್ವವನ್ನು ಗೋಪಾಲಕೃಷ್ಣ ಕಾಕತ್ಕರ್ ವಿವರಿಸಿದರು.
ಗೋಆಶ್ರಮದ ಸಮಸ್ತ ಗೋವುಗಳಿಗೆ ಸೇವಾಕರ್ತರಾದ ಪರ್ತಜೆ ಕುಮಾರಸ್ವಾಮಿ ವರ್ಮುಡಿ ಅವರ ಸೇವಾರ್ತವಾಗಿ ಸೌತೆಕಾಯಿ ಕಡುಬು, ಬೆಲ್ಲ, ಬಾಳೆಹಣ್ಣು ನೀಡಲಾಯಿತು.
ಗೋಆಶ್ರಮ ಸಮಿತಿ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ್, ಕಾರ್ಯದರ್ಶಿ ಶ್ರೀಕಾಂತ ಹೆಗಡೆ, ವಿಶೇಷ ಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ, ಗೋಭಕ್ತರಾದ ಹನುಮಂತರಾಜು, ಗೋಪಾಲ್ ಮಾಲೂರು, ವೆಂಕಟೇಶ್, ನಾಗರಾಜ ಗುಪ್ತಾ, ಚಂದ್ರಶೇಖರ್ ಜಿಬಿ, ಗೋಆಶ್ರಮದ ಕೃಷ್ಣ ಭಟ್, ಲಕ್ಷ್ಮೀಶ, ಅನಂತ ಹೆಗಡೆ ಉಪಸ್ಥಿತರಿದ್ದರು.