ಹೊಸನಗರ ಮಹಾನಂದಿ ಗೋಲೋಕದಲ್ಲಿ ವೈಭವದ ‘ಕೃಷ್ಣಾರ್ಪಣಮ್’ ಸಂಪನ್ನ

ಗೋಶಾಲಾ ಸುದ್ದಿ

 

ಹೊಸನಗರ: ಹೊಸನಗರದ ಮಹಾನಂದಿ ಗೋಲೋಕದಲ್ಲಿ ಇಂದು ಪ್ರತಿಷ್ಠಾ ವರ್ಧಂತಿ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣದ ಸಮರ್ಪಣೆಯ ‘ಕೃಷ್ಣಾರ್ಪಣಮ್’ ಕಾರ್ಯಕ್ರಮಗಳು ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಸಮ್ಮುಖದಲ್ಲಿ ನಡೆದವು.

ಬೆಳಗ್ಗೆ 8 ಗಂಟೆಗೆ ಶ್ರೀಕರಾರ್ಚಿತ ಪೂಜೆ, 10 ಗಂಟೆಗೆ ಶ್ರೀಗುರುಭಿಕ್ಷಾ ಸೇವೆಗಳು ನಡೆದವು. 10:45ಕ್ಕೆ ಗೋಬಂಧಮುಕ್ತಿ ಗೋಶಾಲೆ ಲೋಕಾರ್ಪಣೆ ನಡೆಯಿತು. ಶ್ರೀ ದಿನೇಶ್ ಗುರೂಜಿ ಪಟ್ಟಣಗೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಬಳಿಕ ಶ್ರೀಸಂಸ್ಥಾನದವರ ಸಾನಿಧ್ಯದಲ್ಲಿ ಶಿಲಾಸೋಪಾನಮಾಲೆ ಶಿಲಾನ್ಯಾಸ ನಡೆಯಿತು. ಬಳಿಕ ಗೋಮ್ಯೂಸಿಯಂ ಲೋಕಾರ್ಪಣೆ, ಸುರಭಿಸೌಖ್ಯ ಗೋ ಆಸ್ಪತ್ರೆ ಲೋಕಾರ್ಪಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್‌ನ ಜಯರಾಮ್ ಅವರು ಮುಖ್ಯ ಅತಿಥಿಯಾಗಿದ್ದರು.

ಬೆಳಗ್ಗೆ 9 ಗಂಟೆಗೆ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಸಂಕಲ್ಪ, ಪ್ರಾರ್ಥನೆ ಮತ್ತು ಪಾರಾಯಣಗಳು ನಡೆದವು. ವಿಷ್ಣು ಸಹಸ್ರನಾಮ ಪಾರಾಯಣ ಸಮಾರೋಪದ ಬಳಿಕ ಛತ್ರ ಮೆರವಣಿಗೆ, ಸಮರ್ಪಣೆಗಳು ಮುಂದುವರಿದವು.

ಮಧ್ಯಾಹ್ನ 12 ಗಂಟೆಗೆ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿದ್ಯಾವಾಚಸ್ಪತಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಅಧ್ಯಾತ್ಮ ಪ್ರವಚನ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಶೋದಾ ಬೆನ್ ಮೋದಿ, ವೇ| ಮೂ| ಶೇಷಗಿರಿ ಭಟ್ ಸಿಗಂದೂರು, ಆತ್ಮೀಯರ ಅರಮನೆ ಶ್ರೀ ವಿಜಯ ದುರ್ಗಾ ಪರಮೇಶ್ವರೀ ಶ್ರೀ ಸನ್ನಿಧಾನ ಶ್ರೀ ಜೆ ಜಿ ದಿನೇಶ್ ಗುರೂಜೀ ಪಟ್ಟಣಗೆರೆ, ಬೆಂಗಳೂರು, ಜಯರಾಮ ಭಟ್ (ಎಂಆರ್‌ಪಿಎಲ್), ರಾಮಸುಬ್ರಮಣಿಯನ್ (ಎಂಆರ್‌ಪಿಎಲ್) ಪಾಲ್ಗೊಂಡರು.

ನಂತರ ಶ್ರೀ ಸಂಸ್ಥಾನದವರಿಂದ ಶ್ರೀಮತಿ ಯಶೋದಾ ಬೆನ್ ಮೋದಿ, ಅರಳು ಮಲ್ಲಿಗೆ ಪಾರ್ಥಸಾರಥಿ, ಕ. ದಾ. ಕೃಷ್ಣರಾಜ ಅರಸ್, ಮತ್ತು ಎಂಆರ್‌ಪಿಎಲ್‌ ಪ್ರತಿನಿಧಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

 

Author Details


Srimukha

Leave a Reply

Your email address will not be published. Required fields are marked *