ಗೋ ಸಹಿತ ಬದುಕು ಬದುಕಬೇಕು- ಶ್ರೀಸಂಸ್ಥಾನ

ಗೋಶಾಲಾ

ಗೋವು ಶೂನ್ಯ ಬದುಕು ನಮ್ಮದಾಗಬಾರದು. ಗೋ ಸಹಿತ ಬದುಕು ಬದುಕಬೇಕು ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಅವರು ಗೋಸ್ವರ್ಗದಲ್ಲಿ ಕಾಮದುಘಾ ಟ್ರಸ್ಟ್ ಹಾಗೂ ಮುಂಬಯಿ ದಿನೇಶ್ ಶಹರಾ ಪೌಂಡೇಶನ್ ಆಶ್ರಯದಲ್ಲಿ ಅನುಪಮ ಗೋಸೇವಕರಿಗಾಗಿ ನೀಡಲ್ಪಡುವ ರಾಜ್ಯ ಮಟ್ಟದ ಗೋಪಾಲ ಗೌರವ ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವಚನ ನೀಡಿದರು.

ಪ್ರಶಸ್ತಿ ಪ್ರಧಾನ ಮಾಡಿದ ಮುಂಬಯಿ ದಿನೇಶ್ ಶಹರಾ ಪೌಂಡೇಶನ್ ಮುಖ್ಯಸ್ಥ ದಿನೇಶ್ ಶಹರಾ ಮಾತನಾಡಿ ಗೋವುಗಳು ಕುರಿತು ತಳುವಳಿಕೆ ಹಾಗೂ ಗೋಸ್ವರ್ಗ ವು ಕೇವಲ ಗೋವುಗಳಿಗೆ ಮಾತ್ರವಲ್ಲ ಸರ್ವರಿಗೂ ಸ್ವರ್ಗವಾಗಿದೆ ಎಂದರು.

ಗೋಸಂಸರಕ್ಷಣೆ ತಿಪಟೂರು ವಿನಯ್. ಮಡೆಸೂರು, ಗೋ ಆಧಾರಿತ ಕೃಷಿ ಪುತ್ತೂರಿನ ಪ್ರವೀಣ್ ಸರಳಾಯ, ಪಾರಂಪರಿಕ ಗೋಸಾಕಣೆ ಸೂರಮ್ಮನಹಳ್ಳಿಯ ಕಿಲಾರಿ ಎತ್ತಿನ ಸಣ್ಣೊಬ್ಬಯ್ಯ, ಗೋತಳಿ ಸಂವರ್ಧನೆ ಮಂಡ್ಯದ ರವಿ ಪಟೇಲ್, ಗೋ ಆಧಾರಿತ ಉದ್ದಿಮೆ ಮೈಸೂರು ಕೆ. ಆರ್. ನಗರದ ದೇಸಿರಿ ಸಂಸ್ಥೆಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕೊರೋನಾ ಸಮಯದಲ್ಲಿ ದಿನೇಶ್ ಸಹರಾ ಬರೆದ “ಸನಾತನ ಲೀಲಾ” ಪುಸ್ತಕವನ್ನು ಶ್ರೀ ಸಂಸ್ಥಾನದವರು ಬಿಡುಗಡೆ ಮಾಡಿದರು.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಚೆನ್ನೈ ಎಸ್ಕೈ ಹೋಂ ಕ್ರಾಫ್ಟ್ಸ ಪಾಲುದಾರ ಎಸ್. ವಿಜಯರಾಘವನ್, ಎಕ್ಸಪೋವೈಡ್ ಗ್ಲೋಬಲ್ ಟ್ರೇಡಿಂಗ್ ನಿರ್ದೇಶಕ ಶ್ರೀನಾಥ ವೆಂಕಟರಮಣನ್, ಎಸ್ಕೈ ಕಾರ್ಟೋನ್ಸ್ ನಿರ್ದೇಶಕ ಎ. ಗಣೇಶನ್ ಮತ್ತಿತರರು ಉಪಸ್ತಿತರಿದ್ದರು.

ಡಾ. ವೈ ವಿ ಕೃಷ್ಣಮೂರ್ತಿ ಸ್ವಾಗತಿಸಿದರು.  ಮಹೇಶ ಭಟ್ ಚಟ್ನಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ವರದಿ: ಶ್ರೀಧರ ಗೋಸ್ವರ್ಗ

Leave a Reply

Your email address will not be published. Required fields are marked *