ಗೋವಿಗಾಗಿ ಮೇವು ಮೇವಿಗಾಗಿ ನಾವು

ಗೋಶಾಲಾ

ಜೇಡ್ಲ: ಸುಳ್ಯ ವಲಯ ಅಧ್ಯಕ್ಷ ಈಶ್ವರಕುಮಾರ ಭಟ್ಟ ಇವರ ನೇತ್ರತ್ವದಲ್ಲಿ ಗೋಶಾಲೆಯಲ್ಲಿರುವ ಗೋವಿಗಾಗಿ ಹಸಿಹುಲ್ಲನ್ನು ಕತ್ತರಿಸಿ ಕೊಡುವ ಕಾರ್ಯಕ್ರಮ ನ.೬ರಂದು ನಡೆಯಿತು.

ಸುಳ್ಯ ಹವ್ಯಕ ವಲಯ ಸೇವಾ ವಿಭಾಗದ ವತಿಯಿಂದ ಡಾ.ರಾಜಾರಾಮರವರ ಆಶ್ರಯ ಕಂಪೌಂಡ್ ವಠಾರದ (ಸರಕಾರಿ ಆಸ್ಪತ್ರೆ ಹಿಂಭಾಗ)ಲ್ಲಿ ಹಸಿಹುಲ್ಲನ್ನು ಕತ್ತರಿಸಿ ಜೇಡ್ಲ ಗೋಶಾಲೆಗೆ ಕಳುಹಿಸಿ ಕೊಡಲಾಯಿತು.

ಮೂಲಮಠದ ವಿವಿಪೀಠದ ನಿರ್ದೇಶಕರಾದ ಪ್ರೊ ಶ್ರೀಕೃಷ್ಣ ಭಟ್, ಮಾತೃವಿಭಾಗದ ರಾಜರಾಜೇಶ್ವರಿ, ವಲಯ ಕಾರ್ಯದರ್ಶಿ ವಿಜಯಕೃಷ್ಣ, ಈಶ್ವರ ಭಟ್ ಸೂರ್ತಿಲ, ಸೇವಾ ವಿಭಾಗದ ನಿರ್ದೇಶಕರಾದ ಎಂ.ಪ್ರಶಾಂತ್ ಭಟ್, ವೇಣುಗೋಪಾಲ ಪಿ. ಕೆ. ಈಶ್ವರಮಂಗಲ, ಬಾಲಸುಬ್ರಮಣ್ಯ ಭಟ್ಟ, ಸ್ವಾತಿ ಪರಪ್ಪೆ, ಕೃಷ್ಣ ಭಟ್, ಪಿ.ಕೆ. ಈಶ್ವರಮಂಗಲ, ಪಿ ಸತ್ಯಶಂಕರ, ಕೃಷ್ಣ ಮೂರ್ತಿ ಮಾಡಾವು, ಶೀಕೃಷ್ಣ ಮೀನಗದ್ದೆ, ವಿಷ್ಣುಕಿರಣ ನೀರಬಿದಿರೆ, ಡಾ.ಕೃಷ್ಣ ಭಟ್, ಡಾ.ವಿದ್ಯಾಶಾರದೆ, ರಾಮಮೋಹನ ಉಬರಡ್ಕ, ಹುಲ್ಲು ಕತ್ತರಿಸಲು ಸಹಕರಿಸಿದರು.

ಚಾ, ತಿಂಡಿ, ಊಟ ವ್ಯವಸ್ಥೆಯನ್ನು ಡಾ.ಪದ್ಮನಾಭ ಭಟ್ ಮತ್ತು ಮನೆಯವರು, ಡಾ.ವಿದ್ಯಾಶಾರದ, ರಾಮಮೋಹನ ಉಬರಡ್ಕ ಮಾಡಿದರು. ಹಲ್ಲು ಕತ್ತರಿಸುವ ಯಂತ್ರದ ವ್ಯವಸ್ಥೆಯನ್ನು ವಿಜಯಕೃಷ್ಣ ಭಟ್, ಬಾಲಸುಬ್ರಮಣ್ಯ ಭಟ್ ಮಾಡಿದರು.

Author Details


Srimukha

Leave a Reply

Your email address will not be published. Required fields are marked *