ಗೋವಿಗಾಗಿ ಮೇವು ಮೇವಿಗಾಗಿ ನಾವು

ಗೋಶಾಲಾ

ಬಜಕೂಡ್ಲು: ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಸದಾಶಯದಂತೆ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವಿಗಾಗಿ ಶ್ರೀಯುತ ಪಡಿಯಡ್ಪು ಮಹೇಶ ಭಟ್ ರ ಹಿತ್ತಲಿನ ಹಸಿ ಹುಲ್ಲನ್ನು ಕಟಾವು ಮಾಡಲಾಯಿತು.

ಪೆರಡಾಲವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲದ ಗೋ ಸೇವಕರ ಸೇವಾ ಅರ್ಘ್ಯ ನಡೆಯಿತು. ಮಹೇಶ ಭಟ್ ದಂಪತಿಗಳು ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಿದರು.

ಶ್ರೀರಾಮಚಂದ್ರಾಪುರ ಮಠದ ಕಾಮದುಘ ಕಾರ್ಯದರ್ಶಿ ಡಾ. ವೈ. ವಿ. ಕೃಷ್ಣ ಮೂರ್ತಿ, ಗೋ ವಿಜ್ಞಾನ ತಂಡದ ಸಂಯೋಜಕ ಡಾ. ಜಯಪ್ರಕಾಶ ಲಾಡ, ಬಜಕೂಡ್ಲು ಗೋಶಾಲೆ ಗೋ ನಿಧಿಯ ಸಂಚಾಲಕಿ ಡಾ. ಮಾಲತಿ ಪ್ರಕಾಶ, ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಪೆರಡಾಲ ವಲಯ ಕಾರ್ಯದರ್ಶಿ ವಿಷ್ಣು ಪ್ರಸಾದ ಕೋಳಾರಿ, ಉಪಾಧ್ಯಕ್ಷ ಶ್ರೀಕೃಷ್ಣ ಭಟ್ ಮಡಿಪ್ಪು, ಗುಂಪೆ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ಟ ಬೆಜಪ್ಪೆ, ಶಂಕರನಾರಾಯಣ ಭಟ್ಟ ಬೊಳುಂಬು, ಶಂಕರ ಭಟ್ಟ ಪಡಿಯಡ್ಪು, ಗೋಪ್ರೇಮಿಗಳಾದ ಕಿರಣ ಮೂರ್ತಿ, ಶಾಂತಾ ಈಂದುಗುಳಿ, ಶ್ರೀಲತಾ ಪಡಿಯಡ್ಪು, ಅಚಲ ಸಹಕರಿಸಿದರು.

ಕಾಸರಗೋಡು ವಲಯ ಕೋಶಾಧಿಕಾರಿ ರಮೇಶ ಭಟ್ ವೈ.ವಿ. ಹಾಗೂ ಸವಿತಾ ದಂಪತಿಗಳ ಮಗನಾದ ಅನ್ವಿತ್ ಆರ್ ಭಟ್ ನ ಜನ್ಮದಿನದ ಪ್ರಯುಕ್ತ ಗೋವಿನ ಮೇವಿನ ಸಾಗಾಟದ ಖರ್ಚುನ್ನು ಪ್ರಾಯೋಜಕತ್ವ ವಹಿಸಿದರು.

Leave a Reply

Your email address will not be published. Required fields are marked *