ಒಬ್ಬ ಹದಿನೈದು ವರ್ಷದ ಪೋರ ವಿಜ್ಞಾನ ವಿಷಯಗಳ ಕುರಿತಾದ ಲೇಖನಗಳನ್ನು ಬರೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆಂದರೆಅದು ಸುಲಭದ ಮಾತಲ್ಲ. ಈಗಾಗಲೇ ಈ ಯುವ ಪ್ರತಿಭೆಯ ಲೇಖನಗಳು ಇಂದುರಾಷ್ಟ್ರ ಮಟ್ಟದ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದು, ವಿಜ್ಞಾನ ಲೋಕದ ಬರವಣಿಗೆಯಲ್ಲಿಛಾಪು ಮೂಡಿಸಿದ್ದಾನೆ. ಹೆಸರು ಪ್ರಗುಣ್ ಪುದಕೋಳಿ. ಬೆಂಗಳೂರಿನ ನಿವಾಸಿ ಉದಯಶಂಕರ ಪುದಕೋಳಿ ಮತ್ತು ವಿದ್ಯಾದಂಪತಿಯ ಪುತ್ರನಾದಈತ ಬೆಂಗಳೂರಿನ ಶಿಶುಗೃಹ ಮಾಂಟೆಸ್ಟರಿ ಮತ್ತು ಹೈಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿ. ಪ್ರಗುಣ್‌ನ ಸಾಧನೆಯ ಪುಟ್ಟ ಪರಿಚಯ ನಿಮಗಾಗಿ…
ಅದು ಮಾಂಟೆಸ್ಟರಿಯಲ್ಲಿದ್ದ ಸಮಯ. ಎಂದಿನಂತೆಅಲ್ಲಿಯ ಶಿಕ್ಷಕರು ಈತನಿಗೆಆನೆಯಕುರಿತು ಪ್ರಬಂಧ ಬರೆಯಲು ನೀಡಿದ್ದರು. ಅಲ್ಲದೇಯಾವುದೇರೀತಿಯ ಸಹಾಯ ಮಾಡದಂತೆತಾಯಿ ವಿದ್ಯಾಅವರಿಗೆ ಸೂಚನೆಯನ್ನೂ ನೀಡಿದ್ದರು. ಇದರಿಂದತಾನೇ ಸ್ವತಃ ಪ್ರಬಂಧ ಬರೆದ ಪ್ರಗುಣ್ Elephant is having pair of tusks (ಆನೆಗೆ ಒಂದುಜೊತೆ ದಂತಗಳು ಇವೆ.) ಎಂದು ಬರೆದಿದ್ದ. ನಾನಾಗಿದ್ದರೆ ಬಹುಶಃ ’ಟೂಟಕ್ಸ್’ ಎಂದು ಹೇಳುತ್ತಿದ್ದೆ ಎಂದುಆಶ್ಚರ್ಯಗೊಂಡುಅಂದೇಗ್ರಂಥಾಲಯವೊಂದರಲ್ಲಿ ಸದಸ್ಯನನ್ನಾಗಿಸಿದರು. ಬಹುಶಃ ಅಂದು ನನ್ನಅಮ್ಮ ಪ್ರಬಂಧ ಬರೆಯಲು ಸಹಕರಿಸಿದ್ದರೆ ಇಂದು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ ಎನ್ನುತ್ತಾನೆ ಪ್ರಗುಣ್.
ಅಂದಿನಿಂದಓದುವ ಹವ್ಯಾಸ ಬೆಳೆಸಿಕೊಂಡ ಈತ ವಿಭಿನ್ನ ವಿಷಯಗಳ ಕುರಿತು ತಿಳಿದುಕೊಂಡಿದ್ದಲ್ಲದೇ ಬರೆಯಲೂ ಆರಂಭಿಸಿದ. ೬ನೇ ವಯಸ್ಸಿಗೇ ಬರೆಯಲು ಪ್ರಾರಂಭಿಸಿದ ಪ್ರಗುಣ್‌ಈವರೆಗೆಇಂಗ್ಲಿಷ್ ಭಾಷೆಯಲ್ಲಿ ಪರಿಸರ, ವಿಜ್ಞಾನದಕುರಿತಾದ ೪೦ ಕ್ಕೂ ಅಧಿಕ ಲೇಖನಗಳನ್ನು ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಬರೆದಿದ್ದಾನೆ.
ಅಷ್ಟೇಅಲ್ಲದೇ, ನಾಸಾದ ಲಿಟರರಿ ಮೆರಿಟ್ ವಿಭಾಗದಲ್ಲಿಅಮೆಸ್ ಸ್ಪೇಸ್ ಸೆಟ್ಲ್‌ಮೆಂಟ್ ಸರ್ಧೆ ೨೦೧೭ ರಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಇವರಕವಿತೆಯನ್ನು ಮೆಚ್ಚಿದರೋಜರ್ ಸ್ಟಿವನ್ ತಮ್ಮ ಪೊಯೆಟ್ರಿಜೋನ್ ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಇದಲ್ಲದೆ ಬ್ರೈನ್‌ವೇವ್ ಸೈನ್ಸ್ ಮ್ಯಾಗಜೀನ್‌ನ ವಿದ್ಯಾರ್ಥಿ ಮಂಡಳಿಯ ಸದಸ್ಯನಾಗಿ ಸಪ್ಟೆಂಬರ್ ೨೦೧೫ ರಿಂದಜನವರಿ ೨೦೧೬ ರವರೆಗೆಕಾರ್ಯನಿರ್ವಹಿಸಿದ್ದು, ಟಿಂಕಲ್ ವಾಚ್‌ಟೀಂನಗೌರವ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಈತನದ್ದು.
ಈತನ ಕಲೆ ಮತ್ತು ಸಾಹಿತ್ಯ ಸಾಧನೆಗಾಗಿ ಪ್ರಧಾನಮಂತ್ರಿ ಬಾಲ ಪುರಸ್ಕಾರ ೨೦೨೦ ಅರಸಿ ಬಂದಿದ್ದು, ಇತ್ತೀಚೆಗೆರಾಷ್ಟ್ರಪತಿ ಭವನದಲ್ಲಿ ನಡೆದಕಾರ್ಯಕ್ರಮದಲ್ಲಿರಾಷ್ಟ್ರಪತಿರಾಮನಾಥಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದ್ದಾನೆ.
ಈ ಪ್ರತಿಭೆಯಿಂದ ವಿಜ್ಞಾನ ಸಾಹಿತ್ಯ ಲೋಕ ಇನ್ನಷ್ಟು ಬೆಳೆಯಲಿ ಎಂಬುದುಆಶಯ.