ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ

ಗೋಶಾಲಾ

ಗೋಲೋಕ: ಹೊಸನಗರ ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಾನದಲ್ಲಿ ಪ್ರತೀ ಹುಣ್ಣಿಮೆಯಂದು ನಡೆಯುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ಸಂಪನ್ನಗೊಂಡಿದೆ.

ಪ್ರಧಾನ ಅರ್ಚಕರಾದ ವೇದ ಮೂರ್ತಿ ಸತೀಶ್ ಭಟ್ ನೇತೃತ್ವದಲ್ಲಿ ಪ್ರಕಾಶ್ ಭಟ್ ದಂಪತಿಗಳು ಶಿವಮೊಗ್ಗ ಇವರ ಯಾಜಮಾನತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ಸುಮಾರು ನೂರನಲವತ್ತೈದು ಪೂಜೆ ನೆರವೇರುವುದರೊಂದಿಗೆ ನೂರಾರು ಗೋಭಕ್ತರು ಭಾಗವಹಿಸಿದ್ದರು. ಕೃಷ್ಣಪ್ರಸಾದ ಎಡಪ್ಪಾಡಿ, ಜಿ.ಟಿ.ದಿವಾಕರ್, ಶಿವರಾಮ್ ಭಟ್, ಕೃಷ್ಣರಾಜ್ ಅರಸ್, ಇವರುಗಳೊಂದಿಗೆ ಗೋಲೋಕ ಸಮಿತಿಯ ಸದಸ್ಯರುಗಳು ಕೂಡ ಭಾಗವಹಿಸಿದ್ದರು.

ಸಂಜೆ ೬ ಗಂಟೆಗೆ ಪ್ರಾರಂಭವಾದ ಈ ಕಾರ್ಯಕ್ರಮ ರಾತ್ರಿ ೮:೧೫ ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆಯೊಂದಿಗೆ ಮುಕ್ತಾಯಗೊಂಡಿದೆ.

Author Details


Srimukha

Leave a Reply

Your email address will not be published. Required fields are marked *