ಗೋಸ್ವರ್ಗದಲಿ ಸ್ವರಸಂಗಮ

ಗೋಶಾಲಾ

ಗೋಸ್ವರ್ಗ: ಇಮ್ಯಾಜಿನೇಷನ್ ಸ್ಟುಡಿಯೋ ಪ್ರಸ್ತುತಪಡಿಸುತ್ತಿರುವ ಸ್ವರಸಂಗಮ ಮಾಸ್ಟರ್ ಸಿಂಗರ್’ನ ಮೂರನೇ ಸುತ್ತಿನ ಕಾರ್ಯಗಾರವು ಸಿದ್ದಾಪುರದ ಗೋಸ್ವರ್ಗದಲ್ಲಿ ನಡೆಯಿತು.

ಮೂರು ದಿನಗಳ ಕಾಲ ಸ್ಪರ್ಧಾಳುಗಳು ಮುಂದಿನ ಹಂತದ ಸ್ಪರ್ಧೆಯ ವಿವಿಧ ರೀತಿಯ ವಿಷಯಗಳ ಬಗ್ಗೆ ಶ್ರೀಕಾಂತ ಕಾಳಮಂಜಿ, ಜಯರಾಮ ಭಟ್ ಹೆಗ್ಗಾರಳ್ಳಿ, ದೀಪಕ್ ಸಿದ್ದಾಪುರ, ಪ್ರತೀಕ್ ಟಿ ಎಂ ಸಾಗರ, ಹಾಗೂ ವಿಶೇಷ ಅತಿಥಿಯಾಗಿ ಆಗಮಿಸಿದಂತಹ ವಿದುಷಿ ಗಾಯತ್ರಿ ರವೀಂದ್ರ ಇವರುಗಳಿಂದ ಅನೇಕ ವಿಷಯಗಳ ಬಗ್ಗೆ ಹಾಗು ಸಂಗೀತದ ಚಾಕಚಕ್ಯತೆಗಳ ಬಗ್ಗೆ ತರಬೇತಿಯನ್ನಪಡೆದರು. ಪೂಜಾ ಭುವನಿ, ಆದಿಶೇಷ ಪಡುವಗೋಡು, ಜಗದೀಶ್ ಎಲ್ ಜಿ, ಏಕತಾ ಭಟ್, ಸುಭಾಷ್ ಹೆಗಡೆ ಇವರುಗಳು ಕಾರ್ಯಕ್ರಮದ ಇತರ ಉಸ್ತುವಾರಿಗಳ ಬಗ್ಗೆ ಮುತುವರ್ಜಿಯಿಂದ ನೋಡಿಕೊಂಡಿರು.

ಗೋಸ್ವರ್ಗದ ದೈನಂದಿನ ಕಾರ್ಯಕ್ರಮಗಳಾದ ಗೋಗಂಗಾರತಿ, ಶ್ರೀರಾಮದೇವರ ಸನ್ನಿಧಿಯ ಕಾರ್ತೀಕ ದೀಪೋತ್ಸವಗಳಲ್ಲಿ ಪಾಲ್ಗೊಂಡು, ಭಜನೆಸೇವೆ ನಡೆಸಿ ಬಂದಂತಹ ಶಿಬಿರಾರ್ಥಿಗಳು ಹಾಗೂ ಅವರ ಪಾಲಕ-ಪೋಷಕರು ಇಲ್ಲಿಯ ವಾತಾವರಣ ಹಾಗೂ ವ್ಯವಸ್ಥೆಯ ಬಗ್ಗೆ ತುಂಬು ಹೃದಯದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸರಿಗಮಪ ಖ್ಯಾತಿಯ ಕಲಾವಿದರಿಂದ ಸ್ವರ್ಗಸಂಗೀತ
ಗೋ ಸ್ವರ್ಗದಲ್ಲಿ ಸ್ವರ್ಗ ಸಂಗೀತ ಕಾರ್ಯಕ್ರಮದಲ್ಲಿ ದೂರದ ಬೆಂಗಳೂರಿಂದ ಆಗಮಿಸಿದ್ದ ಖ್ಯಾತ ಆಕಾಶವಾಣಿ ಕಲಾವಿದರೂ, ಜೀಕನ್ನಡ ವಾಹಿನಿಯ ಸರಿಗಮಪ ಜ್ಯೂರಿ ಸದಸ್ಯರೂ ಆದ ವಿದುಷಿ ಗಾಯತ್ರೀ ರವೀಂದ್ರ ರವರು ಹಾಗೂ ಸ್ವರ ಸಂಗಮ ಮಾಸ್ಟರ್ ಸಿಂಗರ್’ನ ಸ್ಪರ್ಧಾಳುಗಳು ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದರು. ಹಾಡುಗಾರರಿಗೆ ತಬಲಾ ಸಾತಿಯಾಗಿ ಶ್ರೀಕಾಂತ್ ಕಾಳಮಂಜಿ ಹಾಗೂ ಹಾರ್ಮೋನಿಯಮ್ ಸಾತಿಯಾಗಿ ಜಯರಾಮ್ ಭಟ್ಟ್ ಹೆಗ್ಗಾರಳ್ಳಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಮೂರು ದಿನಗಳ ಕಾಲ ನಡೆದ ತರಬೇತಿ ಶಿಬಿರವು ಇಮ್ಯಾಜಿನೇಷನ್ ಸ್ಟುಡಿಯೋ ಮುಖ್ಯಸ್ಥರಾದ ಸಂದೀಪ ಎಚ್,ಸಿ ಯವರ ಆಯೋಜನೆಯಲ್ಲಿ ತುಂಬಾ ಅಚ್ಚುಕಟ್ಟಾಗಿ ಹಾಗೂ ಸಂತೋಷಕರವಾಗಿ ಮುಗಿಯಿತು.

Author Details


Srimukha

Leave a Reply

Your email address will not be published. Required fields are marked *